Advertisement
ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಆ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪುಟ್ಟಣ್ಣ ಮತ್ತೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಮುಂದೆ ಬಂದು ತಮ್ಮನ್ನು ಗೆಲ್ಲಿಸುವಂತೆ ಮತಯಾಚಿಸುತ್ತಿದ್ದಾರೆ. ತಾವು ತೆರವು ಮಾಡಿದ ಕ್ಷೇತ್ರದಿಂದಲೇ ಉಪ ಚುನಾವಣೆಗೆ ಬೇರೊಂದು ಪಕ್ಷದಿಂದ ಸ್ಪರ್ಧಿಸಿ ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ಪುಟ್ಟಣ್ಣ ನಿರತರಾಗಿದ್ದಾರೆ.
Related Articles
Advertisement
ಶಿಕ್ಷಕರಿಗೆ 7ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಬೇಕು, ಅನುದಾನ ರಹಿತ ಶಾಲೆಗಳ ಶಿಕ್ಷಕರ ಆರೋಗ್ಯ ವಿಮೆ, ಬಡ್ತಿ ಶಿಕ್ಷಕರಿಗೆ ಕಡಿಮೆ ವೇತನ, ಎಲ್ಲ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ, ಶಿಕ್ಷಕರ ಕಲ್ಯಾಣ ನಿಧಿಯ ಸದ್ಬಳಕೆ, ಖಾಸಗಿ ಶಾಲೆಗಳ ಆರಂಭ ಮತ್ತು ನಿರ್ವಹಣೆಗೆ ಕೆಲ ಕಠಿಣ ನಿಯಮಗಳು ಜಾರಿ ಮುಂತಾದ ವಿಷಯಗಳು, ಸಮಸ್ಯೆಗಳ ಪರಿಹಾರ ಮತ್ತು ಹೋರಾಟದ ಬಗ್ಗೆ ಮತದಾರ ಶಿಕ್ಷಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಚುನಾವಣೆ ನಡೆಯುತ್ತಿದ್ದು 19,200ಕ್ಕಿಂತ ಹೆಚ್ಚು ಮತದಾರರಿದ್ದಾರೆ. ಈ ಪೈಕಿ ಸುಮಾರು 12 ಸಾವಿರ ಮಹಿಳಾ ಮತದಾರರಿದ್ದಾರೆ.
ಪುಟ್ಟಣ್ಣ ಅವರ ಪಕ್ಷಾಂತರದಿಂದ ಶಿಕ್ಷಕರು ಆಕ್ರೋಶ ಗೊಂಡಿ ದ್ದಾರೆ. ಅವರು ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರಿಗೆ ನೆರವು ನೀಡಿಲ್ಲ, ಅವರ ಧ್ವನಿಯಾಗಿ ಕೆಲಸ ಮಾಡಿಲ್ಲ. ನಾನು ಶಿಕ್ಷಕರ ಪ್ರತಿ ಹೋರಾಟದಲ್ಲಿಯೂ ಅವರ ಜತೆಗಿದ್ದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಮತ ಯಾಚಿಸುತ್ತಿದ್ದಾರೆ.-ಎ.ಪಿ.ರಂಗನಾಥ್, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ
ನಾನು ಸದಾ ಶಿಕ್ಷಕರ ಜತೆ ಒಡನಾಟ ಇಟ್ಟುಕೊಂಡಿ ರುವವನು. ಪಕ್ಷಾಂತರ ನನಗೆ ಸಮಸ್ಯೆಯಾಗುವು ದಿಲ್ಲ. ಇದು ಚಿಹ್ನೆ ರಹಿತ ಚುನಾವಣೆ. ನನಗೆ ಈ ಹಿಂದಿನ ಚುನಾವಣೆ ಗಿಂತಲೂ ಉತ್ತಮ ಪರಿಸ್ಥಿತಿಯಿದೆ. ನಾನು ಶಿಕ್ಷಕರಿಗಾಗಿ ನಡೆಸಿದ ಹೋರಾ ಟಗಳು ನನ್ನ ಕೈ ಹಿಡಿಯುತ್ತವೆ. -ಪುಟ್ಟಣ್ಣ, ಕಾಂಗ್ರೆಸ್ ಅಭ್ಯರ್ಥಿ
– ರಾಕೇಶ್ ಎನ್.ಎಸ್.