Advertisement

ಶಿಕ್ಷಕರ ಮುಂದಿದೆ ಹತ್ತಾರು ಸವಾಲು

03:39 PM Sep 05, 2021 | Team Udayavani |

ರಾಮನಗರ: ಕೋವಿಡ್‌ ಸೋಂಕು ಕಾರಣ ಮುಚ್ಚಿರುವ ಹಿರಿಯ ಪ್ರಾಥಮಿಕ ಶಾಲೆಗಳ 6, 7 ಮತ್ತು 8ನೇ ತರಗತಿಗಳ ಭೌತಿಕ ಬೋಧನೆಗೆ ಇದೇ ಸೆ.6ರಿಂದ ತೆರೆದುಕೊಳ್ಳಲಿವೆ. ಮಕ್ಕಳನ್ನು ಬರಮಾಡಿಕೊಳ್ಳಲು ಕಾತರದಿಂದ ಇರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ.

Advertisement

ಹೈಸ್ಕೂಲು ಮಕ್ಕಳಿಗೆ (9 ಮತ್ತು 10ನೇ ತರಗತಿ) ಬೋಧನೆ ಆರಂಭವಾಗಿದ್ದು, ಈ ಮಕ್ಕಳಿಗೆ ಕಲಿಸುವ ವಿಚಾರದಲ್ಲಿ ಶಿಕ್ಷಕರ ಅನೇಕ ಅನುಭವಗಳು ವ್ಯಕ್ತವಾಗಿವೆ. ಹೈಸ್ಕೂಲು ಮಕ್ಕಳಿಗೆ ಹೋಲಿಸಿದರೆ ಪ್ರಾಥಮಿಕ

ಶಾಲೆಗಳ ಮಕ್ಕಳಿಗೆ ಕಲಿಸುವುದು ಶ್ರಮದಾಯಕ! ಮಕ್ಕಳಿಗೆ ಕಲಿಸುವ ಹೊಣೆಯ ಜೊತೆಗೆ ಸರ್ಕಾರದ ಅವೈಜ್ಞಾನಿಕ ನಿರ್ಧಾರವನ್ನು ಪಾಲಿಸುವ ವಿಚಾರದಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಮುಂದೆ ಹಲವಾರು ಸವಾ ಲುಗಳಿವೆ. ತಮ್ಮ ಇಷ್ಟೂ ವರ್ಷಗಳ ಅನುಭವ ಓರೆಗೆ ಹೆಚ್ಚುವ ಸಮಯ ಎದುರಾಗಿದೆ.

ಬೋಧಿಸುವ ಸವಾಲು!: ಆನ್‌ಲೈನ್‌ ತರಗತಿಗಳಲ್ಲಿ ಅಷ್ಟೇನುಕಲಿಯಲು ಸಾಧ್ಯವಾಗದ ಮಕ್ಕಳಿಗೆ ವಿಷಯ ಬೋಧನೆ ಮಾಡುವ
ಸವಾಲು ಎಲ್ಲಾ ಶಿಕ್ಷಕರ ಮೇಲಿದೆ. ಮರೆಯುವುದು ಮಕ್ಕಳ ಸಹಜ ಗುಣ ಎಂಬಹಿರಿಯರಅನುಭವದ ಮಾತು.ಕಳೆದೆರೆಡು ವರ್ಷಗಳಲ್ಲಿ ಮಕ್ಕಳು ತಾವು ಕಲಿತಿದ್ದನ್ನು ಮರೆತಿರುವ ಸಾಧ್ಯತೆಗಳೇ ಹೆಚ್ಚು. 7ನೇ ತರಗತಿ ಮಕ್ಕಳಿಗೆ ಆನ್‌ಲೈನ್‌ ಮೂಲಕ ಗಣಿತ ಬೋಧಿಸುವ ಶಿಕ್ಷಕರೊಬ್ಬರ ಪ್ರಕಾರ, 6ರಮಗ್ಗಿ, 9ರ ಮಗ್ಗಿಯನ್ನೇ ಮಕ್ಕಳು ಮರೆತಿದ್ದಾರೆ. ಗುಣಿಸುವ, ಭಾಗಿಸುವ ಲೆಕ್ಕ ಮಾಡಲು ಮಕ್ಕಳು ತಿಣಕಾಡುತ್ತಿದ್ದಾರೆ. ಭಿನ್ನ
ರಾಶಿಗಳ ಬಗ್ಗೆ ಕೇಳುವುದೇ ಬೇಡ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ನಮ್ಮ ಸರಕಾರ ಮಾತ್ರವಲ್ಲ, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಸಿಲಿಂಡರ್ ಬೆಲೆ ಏರಿಕೆಯಾಗಿದೆ :ಕಟೀಲ್

Advertisement

ಭಾಷಾ ವಿಷಯ ಬೋಧಕರೊಬ್ಬರು ತಮ್ಮ ಅನುಭವ ತೋಡಿಕೊಂಡ ಶಿಕ್ಷಕರೊಬ್ಬರು ಮಾತೃ ಭಾಷೆ ಕನ್ನಡ ಪದಗಳ ಉಚ್ಚಾ ರಣೆಯೂ ಸರಿಯಾಗಿ ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಹ ಹ್ಯಾಂಡ್‌ ರೈಟಿಂಗ್‌ ಮರೆತಿದ್ದು, ಎಲ್‌.ಕೆ.ಜಿ ಮಕ್ಕಳಿಗೆ ಹೇಳಿಕೊಡುವಂತೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಪುನಃ ಕಲಿಸಬೇಕಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಒಂದೇ ಪಾಠ ಮೂರು ಬಾರಿ ಬೋಧನೆ!:
ಕೋವಿಡ್‌ ಸೋಂಕು ನೆಪವೊಡ್ಡಿರುವ ಸರ್ಕಾರ ತಲಾಕೊಠಡಿಯಲ್ಲಿ20 ಮಕ್ಕಳನ್ನು ಕೂರಿಸಿ ಬೋಧಿಸಿ ಎಂದು ಫ‌ರ್ವಾನು ಹೊರೆಡಿಸಿದೆ. ಉದಾಹರಣೆಗೆ ಶಾಲೆ ಯೊಂದರ 7ನೇ ತರಗತಿಗೆ 40 ಮಕ್ಕಳು ದಾಖಲಾಗಿದ್ದಾರೆ. ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ ಈ ಶಾಲೆಯಲ್ಲಿ ತಲಾ 20 ಮಕ್ಕಳ ಎರಡು ಸೆಕ್ಷನ್‌ ನಡೆಸ ಬೇಕು. ಒಂದೇ ಪಾಠವನ್ನು ಶಿಕ್ಷಕರು ಎರಡು ಬಾರಿ ಪಾಠ ಮಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಶಾಲೆಗೆ ಬರಲಿಚ್ಚಿಸದ ಮಕ್ಕಳಿಗೆ ಆನ್‌ಲೈನ್‌ ಮೂಲಕವೂ ಪಾಠ ಮಾಡ ಬೇಕು ಎಂದು ಸರ್ಕಾರದ ಫ‌ರ್ವಾನು ಹೇಳಿದೆ. ಇದು ಶಿಕ್ಷಕರ ಮೇಲಿನ ಒತ್ತಡ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಅವೈಜ್ಞಾನಿಕ ಕೂಡ ಎಂದು ಕೆಲವು ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ವರ್ಷ ಸಾಲೋದಿಲ್ಲ! ಸರ್ಕಾರದ ಈ ಅವೈಜ್ಞಾನಿಕ ನಿರ್ಧಾರದಿಂದ ಶಿಕ್ಷಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಪಠ್ಯಗಳನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸುವುದು! ಮೇ ತಿಂಗಳಲ್ಲಿ ಆರಂಭವಾಗಬೇಕಿದ್ದ 2021-22ನೇ ಶೈಕ್ಷಣಿಕ ಸಾಲು ಸೆಪ್ಟಂಬರ್‌ನಲ್ಲಿ ಆರಂಭವಾಗುತ್ತಿದೆ. ಶೈಕ್ಷಣಿಕ ವರ್ಷ ಮುಗಿವ ದಿನಾಂಕವನ್ನು ಸರ್ಕಾರ ಇನ್ನು ಪ್ರಕಟಿಸಿಲ್ಲ. ದಿನ ಬಿಟ್ಟು ದಿನಕಲಿಸುವ ಮಾರ್ಗಸೂಚಿಗಳನ್ನು ಪಾಲಿಸುವುದಾದರೆ, ಪಠ್ಯಗಳನ್ನು ಬೋಧಿಸಲು ವರ್ಷವೂ ಸಾಲು ವುದಿಲ್ಲ ಎಂದು ಬಹುತೇಕ ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಅಲೆಯೆಂಬ ಗುಡ್ಡದ ಭೂತ!
ಸೆ.6ರಿಂದ ಆರಂಭವಾಗಲಿರುವ ಹಿರಿಯ ಪ್ರಾಥಮಿಕ ವಿಭಾಗದ ಭೌತಿಕ ತರಗತಿಗಳಿಗೆ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿರುವ ಶಿಕ್ಷಕರಿಗೆ ಕೋವಿಡ್‌ ಸೋಂಕಿನ 3ನೇ ಅಲೆಯ ಭೂತ ಕಾಡುತ್ತಿದೆ. ಶಾಲೆಗೆ ಬಂದ ನಂತರ ಮಕ್ಕಳುಅನಾರೋಗ್ಯ ಪೀಡಿತರಾದರೆ ಆಗ ಸಮಾಜನೇರವಾಗಿ ಶಾಲೆಗಳು, ಶಿಕ್ಷಕರನ್ನೇ ಗುರಿ ಮಾಡುತ್ತದೆ.ಈ ಭಯ ಎಲ್ಲಾ ಶಿಕ್ಷಕರು ಮತ್ತು ಶಾಲೆಗಳಲ್ಲಿದೆ. ಪೋಷಕರಅನುಮತಿ ಪಡೆದೇ ಮಕ್ಕಳು ಶಾಲೆಗೆಬರುತ್ತಾರೆ ನಿಜ. ಶಾಲೆಗಳಲ್ಲಿಯೂ ನಿಷ್ಠೆಯಿಂದ ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲಿಸಲಾಗುತ್ತದೆ. ಆದರೆ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಪೋಷಕರು ಸುರಕ್ಷಿತವಾಗಿ ಕರೆತಂದು, ಕರೆದುಕೊಂಡು ಹೋಗುವ ಹೊಣೆ ಪೋಷಕರದ್ದು. ಎಷ್ಟು ಪೋಷಕರುಈ ಹೊಣೆಯನ್ನು ನಿಭಾಯಿಸುತ್ತಾರೆ ಎಂಬುದೇ ಪ್ರಶ್ನೆ. ರಸ್ತೆಯಲ್ಲಿಅಡ್ಡಾಡುವಾಗ ಸೋಂಕು ತಗಲುವುದಿಲ್ಲ ಎಂಬಖಾತರಿ ಏನು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆಗೆ ಬಂದ ಮಕ್ಕಳು
ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್‌.ಕೆ.ಜಿ, ಯು.ಕೆ.ಜಿ ತರಗತಿಗಳು ಅನೌಪಚಾರಿಕ ಎಂದು ಶಿಕ್ಷಣ ಇಲಾಖೆ ಜರಿಯುತ್ತಿದ್ದ ಕಾಲವಿತ್ತು. ರೈಟ್‌ ಟು ಎಜುಕೇಷನ್‌ (ಆರ್‌.ಟಿ.ಇ)ಕಾಯ್ದೆ ಈ ತರಗತಿಗಳನ್ನು ಮಾನ್ಯ ಮಾಡಿದ್ದರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಔಪಚಾರಿಕ ಶಿಕ್ಷಣ ಪದ್ದತಿಯಡಿಯಲ್ಲಿ ಗುರುತಿಸಿ ಕೊಂಡಿದೆ. ಆದರೆ ಈ ತರಗತಿಗಳನ್ನುಕಲಿಯುವಕಡ್ಡಾಯವಿಲ್ಲ. ಹೀಗಾಗಿ 5 ವರ್ಷ 6 ತಿಂಗಳು ವಯೋಮಾನ ಪೂರೈಸಿದ ಎಲ್ಲ ಮಕ್ಕಳು 1ನೇ ತರಗತಿಗೆ ದಾಖಲಾಗಲು ಅರ್ಹರಾಗಿದ್ದಾರೆ. ಕೋವಿಡ್‌ಕಾರಣ ಶಾಲೆಗಳು ಎರಡು ವರ್ಷ ಮುಚ್ಚಿದ್ದವು. ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದ ಮಕ್ಕಳು ಅದ್ಯಾವುದನ್ನು ಪಡೆಯದೆ ನೇರವಾಗಿ 1ನೇ ತರಗತಿಗೆ ಪ್ರವೇಶ ಪಡೆಯುವುದರಿಂದ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಕಲಿಯಬೇಕಾಗದ್ದನ್ನು ಈಗ ಕಲಿಯಬೇಕಾಗಿದೆ.

ಹಿರಿಯ ಪ್ರಾಥಮಿಕ ಶಾಲೆಗಳು ಸೆ.6ರಿಂದ ಆರಂಭವಾಗುತ್ತಿದೆ. ಈಗಾಗಲೆ ಹೈಸ್ಕೂಲು ತರಗತಿಗಳು ಆರಂಭವಾಗಿವೆ. ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ತರಗತಿಗಳನ್ನು ನಗರಸಭೆ, ಪುರಸಭೆ, ಗ್ರಾಮಪಂಚಾಯ್ತಿಗಳ ಮೂಲಕ ಸ್ಯಾನಿಟೈಸ್‌ ಮಾಡಲಾಗಿದೆ. ಶಾಲೆಯ ಪರಿಸರವನ್ನು ಸೋಂಕು ರಹಿತವಾಗಿ ಡಲು ಸರ್ಕಾರಿ ಮತ್ತುಖಾಸಗಿಶಾಲೆಗಳಲ್ಲಿ ಶ್ರಮಿಸಿವೆ. ಹೀಗಾಗಿ ಪೋಷಕರು ಯಾವ ಭಯವೂ ಇಲ್ಲದೆ ಮಕ್ಕಳನ್ನು ಶಾಲೆಗೆಕಳುಹಿಸಿಕೊಡಿ. ಮನೆಯಿಂದಲೇ ಆಹಾರ ಮತ್ತು ನೀರನ್ನುಕಳುಹಿಸಿ.
● ಮರೀಗೌಡ, ಬಿಇಒ,
ರಾಮನಗರ ತಾಲೂಕು

– ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next