ಮಹಾನಗರ: ವಿದ್ಯಾರ್ಥಿಗಳ ಪ್ರತಿಭೆ ಬೆಳಗಿಸುವಂತೆ ಮಾಡಬೇಕಾದರೆ ಶಿಕ್ಷಕರಾದ ನಾವೆಲ್ಲರೂ ಉತ್ತಮ ಜ್ಞಾನಶೀಲ ಕ್ರಿಯಾ ಸಂಪನ್ನರಾಗಿರಬೇಕು. ಶಿಕ್ಷಕರು ಬೋಧನ ವಿಷಯದಲ್ಲಿ ಹೊಸತನವನ್ನು ತರಬೇಕು ಎಂದು ಬೆಥನಿ ವಿದ್ಯಾಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾ ಕಾರಿಣಿ ವಂ| ಭ| ಸಿಸಿಲಿಯಾ ಮೆಂಡೋನ್ಸಾ ಅಭಿಪ್ರಾಯಪಟ್ಟರು.
2019-20ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸದ ಸಂದರ್ಭ ಬೆಥನಿ ವಿದ್ಯಾಸಂಸ್ಥೆ, ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯವರ ಸಲಹಾ ತಂಡದವರು ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 350ಕ್ಕೂ ಮಿಕ್ಕಿ ಶಿಕ್ಷಕರಿಗೆ ಕುಲಶೇಖರದ ಸೇಕ್ರೆಡ್ ಹಾಟ್ Õì ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ನಮಗಿಂತ ಆಳವಾದ ಜ್ಞಾನ ಹೊಂದಿದವರಾಗಿರುತ್ತಾರೆ ಎಂದರು.
ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಂ| ವಿಲ್ಫೆಡ್ ಪ್ರಕಾಶ್ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಗಣಿತ ವಿಷಯದಲ್ಲಿ ಕಾಂಚನ ಪ್ರೌಢಶಾಲೆಯ ಕಾಂಚನ ಸುಬ್ರಹ್ಮಣ್ಯ ಭಟ್, ವಿಜ್ಞಾನ ವಿಷಯದಲ್ಲಿ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್‌ಪ್ರೌಢಶಾಲೆಯ ರೋಶನ್ ಪಿಂಟೊ, ಸರಕಾರಿ ಪದವಿಪೂರ್ವ ಕಾಲೇಜು ಸಜಿಪಮೂಡ ಇಲ್ಲಿಯ ಶ್ರೀ ವೆಂಕಟರಮಣ ಮತ್ತು ಆಂಗ್ಲ ಭಾಷಾ ವಿಷಯದಲ್ಲಿ ಸರಕಾರಿ ಪ್ರೌಢಶಾಲೆ ಮೊಂಟೆಪದವು ಇಲ್ಲಿನ ಮುಖ್ಯಶಿಕ್ಷಕ ಸಂತೋಷ್ ಕುಮಾರ್, ರೋಸಾಮಿಸ್ತಿಕಾ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಲವೀನಾ ಲೋಬೋ ಉಪನ್ಯಾಸಕರಾದ ಜಾಸ್ಮಿನ್ ಸಹಕರಿಸಿದರು. ಇದೇ ವೇಳೆ ಸಾಧಕರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಸುಮಾರು 350ಕ್ಕೂ ಅಧಿಕ ಶಿಕ್ಷಕರಿಗೆ 5 ವಿಭಾಗಗಳಲ್ಲಿ ತರ ಬೇತಿ ಕಾರ್ಯಾಗಾರವನ್ನು ಬೆಥನಿ ವಿದ್ಯಾಸಂಸ್ಥೆಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕರಾದ ವಂ| ಭ| ಮಾರಿ ಯೋಲಾ ಅವರು ನೆರವೇರಿಸಿದರು.
ಸೈಂಟ್ ರೇಮಂಡ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅನಿಲ್ ರೆನಿಲ್ ಡಿ’ಸಿಲ್ವಾ ನಿರೂಪಿಸಿದರು. ಲಿಟ್ಲ ಫವರ್ ಹಿ.ಪ್ರಾ. ಶಾಲೆಯ ಶಿಕ್ಷಕಿ ಅನಿತಾ ವಂದಿಸಿದರು.