Advertisement
ಶಿಕ್ಷಕರ ನಡೆ ಅನುಮಾನಾಸ್ಪದ: ಪಟ್ಟಣದ ಸುಭಾಷ್ ನಗರದ ಪ್ರಿಯದರ್ಶಿನಿ ಪ್ರೌಢ ಶಾಲೆ 1994ರಲ್ಲಿ ಆರಂಭವಾಗಿ 1996 ರಿಂದ ಸರ್ಕಾರಿ ಅನುದಾನಿತ ಗೊಂಡಿದೆ. ಜತೆಗೆ ಸಾವಿರಾರು ವಿದ್ಯಾರ್ಥಿಗಳ ಜೀವನ ಬೆಳಕಾಗಿಸಿದೆ. ಇಂತಹ ಶಾಲೆಗೆ ಬಾಗಿಲು ಮುಚ್ಚುವ ಅನಿವಾರ್ಯ ಎದುರಾಗಿರುವುದಕ್ಕೆ ಮೂಲ ಕಾರಣವೇ ಮುಖ್ಯಶಿಕ್ಷರು ಹಾಗೂ ಸಹ ಶಿಕ್ಷಕರು ಎಂಬ ಆರೋಪ ಬಲವಾಗಿ ಕೇಳಿದೆ. ಶಾಲೆ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಲ್ಮಾಸ್ ಫವೀನ್‌ತಾಜ್, ಶಾಲೆ ಮುಚ್ಚುವಲ್ಲಿ ಮುಖ್ಯ ಶಿಕ್ಷಕರ ಪಾತ್ರವಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
Related Articles
Advertisement
ಶಿಕ್ಷಕರ ವಿರುದ್ಧ ಆರೋಪ: ಪ್ರಿಯದರ್ಶಿನಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಗಳನ್ನು ಈ ಶಾಲೆಯಲ್ಲಿ ಉತ್ತಮಶಿಕ್ಷಣ ನೀಡುವು ದಿಲ್ಲ. ಶಿಕ್ಷಕರ ಕೊರತೆಯಿದೆ. ಸೌಲಭ್ಯಗಳಿಲ್ಲ ಎಂಬು ದಾಗಿ ಹೇಳಿರುವ ಶಿಕ್ಷಕರು ಒತ್ತಾಯ ಪೂರ್ವಕವಾಗಿ ಬೇರೆ ಶಾಲೆಗೆ ಸೇರುವಂತೆ ಮಾಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆೆ. ಇದಕ್ಕೆ ಪೂರಕವೆಂಬಂತೆ ಒಂದೇ ವರ್ಷದಲ್ಲಿ 9 ಮತ್ತು 10ನೇ ತರಗತಿಯ 20ಕ್ಕೂ ಹೆಚ್ಚು ವಿದ್ಯಾ ರ್ಥಿಗಳಿಗೆ ವರ್ಗಾವಣೆ ಪ್ರಮಾಣ(ಟಿಸಿ) ನೀಡಿರು ವುದು ಹಾಗೂ ಹೊಸ ದಾಖಲಾತಿ ಮಾಡಿಕೊಳ್ಳ ದಿರುವುದು ಆರೋಪ ಹಾಗೂ ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.
ಸೇವೆ ಸಲ್ಲಿಸುತ್ತಿರುವ 7 ಶಿಕ್ಷಕರು: ಪ್ರೌಢಶಾಲೆಯಲ್ಲಿ ಪ್ರಸ್ತುತ 7 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲ ರಿಗೂ ಸರ್ಕಾರ ವೇತನ ನೀಡುತ್ತಿದೆ. ಶಿಕ್ಷಕರಿಲ್ಲದ ಕಾರಣ ಪಾಠ ಮಾಡಲಾಗದೆ ಫಲಿತಾಂಶ ಕಡಿಮೆ ಬಂದಿದೆ. ಹೀಗಾಗಿಯೇ ಪೋಷಕರು ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಖ್ಯ ಶಿಕ್ಷಕರು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ, ಶಿಕ್ಷಕರ ಕೊರತೆಯಿಲ್ಲ, ಮುಖ್ಯ ಶಿಕ್ಷಕರ ನಾಟಕ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಶಾಲೆ ಉಳಿವಿಗೆ ಸಂಘಟನೆಗಳ ಒತ್ತಾಯ: ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕರು ಮುಂದಾಗಬೇಕು. ಮಕ್ಕಳನ್ನು ಬೇರೆ ಶಾಲೆಗೆ ಸೇರುವಂತೆ ವರ್ಗಾವಣೆ ಟಿಸಿ ನೀಡಿರುವುದು ಖಂಡನೀಯ. ಶಾಲೆ ಮುಂದು ವರಿಸಿ ಕನ್ನಡ ಶಾಲೆಗಳಿಗೆ ಜೀವ ನೀಡಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.