Advertisement
ನೆಹರು ತಾರಾಲಯದಲ್ಲಿ ಜು.18ರಂದು ಶಿಕ್ಷರಿಗೆ ಚಂದ್ರಯಾನ ಕುರಿತ ವೈಜ್ಞಾನಿಕ ವಿಚಾರ ವಿನಿಮಯ ಕಾರ್ಯಾಗಾರ ಆಯೋಜಿಸಲಾಗಿತ್ತು. ಆದರೆ, ಬಂದದ್ದು ಒಬ್ಬ ಶಿಕ್ಷಕ. ಸರ್ಕಾರಿ ಮತ್ತು ಖಾಸಗಿ ಶಾಲೆ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ, ಇಂತಹ ಬಹುಮುಖ್ಯ ಕಾರ್ಯಾಗಾರದಲ್ಲಿ ಶಿಕ್ಷಕರನ್ನು ತೊಡಗಿಸಲು ಆಸಕ್ತಿ ತೋರಬೇಕಿದ್ದ ಶಿಕ್ಷಣ ಇಲಾ ಖೆಯೂ ಗಮನಹರಿಸಿಲ್ಲ. ಪರಿಣಾಮ, ತಾರಾ ಲಯ, ಕಾರ್ಯಾಗಾರವನ್ನೇ ರದ್ದು ಮಾಡಿದೆ.
Related Articles
Advertisement
ಆ.30ರಿಂದ ವಾರಾಂತ್ಯದ ತರಗತಿ: ತಾರಾ ಯಲಯದಲ್ಲಿ ಆ.30ರಿಂದ ಸೆ.1ರವರೆಗೆ ಮತ್ತು ನ.29ರಿಂದ ಡಿ.1ರವರೆಗೆ ವಿಜ್ಞಾನ ವಿಸ್ಮಯಗಳು, ಕೌತುಕಗಳನ್ನು ವಿಶ್ಲೇಷಿಸಿ ಮನದಟ್ಟು ಮಾಡುವ ವಾರಾಂತ್ಯ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ 40 ಮಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.
ವಿಜ್ಞಾನ ಪಾರ್ಕ್‌ನಲ್ಲಿ ಮಕ್ಕಳ ಜಾತ್ರೆ: ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನ ಬೆಳೆಸುವ ಉದ್ದೇಶದಿಂದ ತಾರಾಲಯದ ವಿಜ್ಞಾನ ಪಾರ್ಕ್‌ಗೆ ಶಾಲಾ ಮಕ್ಕಳನ್ನು ಕರೆತರಲಾಗುತ್ತದೆ. ಹೀಗಾಗಿ ಈ ಪಾರ್ಕ್ ತುಂಬಾ ಮಕ್ಕಳದ್ದೇ ಆಟ. ಪಾರ್ಕ್‌ನ ಒಳ ಭಾಗದಲ್ಲಿ ಹಾಕಿರುವ ಬಾಹ್ಯಾಕಾಶ, ಭೌಗೋಳಿಕ ಚಲನವಲನ, ವಿಸ್ಮಯ, ಕೌತುಕಗಳ ಬಗ್ಗೆ ಭಿತ್ತರಿಸಿರುವ ಮಾಹಿತಿ ಫಲಕಗಳತ್ತ ಮಕ್ಕಳ ಕಣ್ಣಾಡಿಸುತ್ತಾ ಪಾರ್ಕ್ ತುಂಬೆಲ್ಲಾ ಓಡಾಡಿ ಖುಷಿಪಡುವುದು ಇಲ್ಲಿ ಸಾಮಾನ್ಯ.
ತಿಂಗಳಿಗೊಮ್ಮೆ ಚಿತ್ರ ಪ್ರದರ್ಶನ: ತಾರಾಲಯವು ತಿಂಗಳಿಗೊಮ್ಮೆ ವಿಜ್ಞಾನ ಕುರಿತ ಚಲನಚಿತ್ರ ಪ್ರದರ್ಶಿಸುತ್ತದೆ. ಜು.21ರಂದು, 1969ರಲ್ಲಿ ಅಮೆರಿಕದ 11 ಗಗನ ಯಾತ್ರಿಗಳು ಚಂದ್ರನ ಮೇಲೆ ಪಾದಾರ್ಪಣೆ ಮಾಡಿ, ಸುರಕ್ಷಿತವಾಗಿ ಹಿಂದಿರುಗಿನ ಘಟನೆ ಆಧರಿಸಿದ, ‘ಫಾರ್ ಆಲ್ ಮ್ಯಾನ್ ಕೈಂಡ್’ ಚಿತ್ರವನ್ನು ಪ್ರದರ್ಶಿಸುತ್ತಿದೆ. ಜತೆಗೆ ಮಕ್ಕಳ ತರಗತಿ ಪಠ್ಯಕ್ಕೆ ಅಗತ್ಯವಿರುವ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.
ದೂರದರ್ಶಕ ತಯಾರಿಕೆ ಕಮ್ಮಟ: ನಭದಲ್ಲಿ ನಡೆಯುವ ವಿಸ್ಮಯಗಳನ್ನು ಕುಳಿತಲ್ಲೇ ಕಣ್ತುಂ ಬಿಕೊಳ್ಳಲು ಬೇಕಾದ ದೂರದರ್ಶಕ ಯಂತ್ರ ತಾರಾಲಯದಲ್ಲಿದೆ. ದೂರದರ್ಶಕ ಯಂತ್ರ ಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಾರಾಲಯವು ಸಾರ್ವಜನಿಕರು ಮತ್ತು ವಿದ್ಯಾ ರ್ಥಿಗಳಿಗೆ ಸುಲಭವಾಗಿ ಕಲಿಸುತ್ತದೆ. ಇದಕ್ಕಾಗಿ ಜು.30ರಿಂದ ನಾಲ್ಕು ದಿನ ದೂರದರ್ಶಕ ತಯಾರಿಸುವ ಕಮ್ಮಟ ಆಯೋಜಿಸಿದೆ.
● ಪುಷ್ಪಲತಾ ಜೆ.