ತೈಪೆ: ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಆನ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳು ಒಗ್ಗಿಕೊಳ್ಳಬೇಕಾಗಿತ್ತು. ಇದೀಗ ಆನ್ ಲೈನ್ ಕಲಿಕೆಯ ಮಾರುಕಟ್ಟೆ ಕೂಡಾ ವಿಸ್ತಾರವಾಗುತ್ತಿದೆ. ಆನ್ ಲೈನ್ ಮೂಲಕವೇ ಹೊಸ ಹೊಸ ಕೋರ್ಸುಗಳನ್ನು ಕಲಿಸುವ ಆ್ಯಪ್ ಗಳು ಪ್ರಸಿದ್ದಿ ಪಡೆಯುತ್ತಿದೆ. ಆದರೆ ತೈವಾನ್ ನ ಶಿಕ್ಷಕನೊಬ್ಬ ಹೊಸ ಉಪಾಯ ಕಂಡುಕೊಂಡಿದ್ದು, ವೈರಲ್ ಆಗುತ್ತಿದ್ದಾರೆ.
34 ವರ್ಷದ ಚಾಂಗ್ಸು ಎಂಬವರು ಅಶ್ಲೀಲ ವಿಡಿಯೋಗಳ ಜಾಲತಾಣ ಪೋರ್ನ್ ಹಬ್ ನಲ್ಲಿ ಗಣಿತ ಪಾಠದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು, ವೈರಲ್ ಆಗಿದ್ದಾರೆ.
ಶಿಕ್ಷಕ ಚಾಂಗ್ಸು ಮೊದಲು ಯುಟ್ಯೂಬ್ ನಲ್ಲಿ ಗಣಿತದ ಪಾಠ ಅಪ್ ಲೋಡ್ ಮಾಡಿದ್ದರು. ಆದರೆ ಯಾರು ಕೂಡ ನೋಡುತ್ತಿರಲಿಲ್ಲ. ಬಳಿಕ ಪೋರ್ನ್ಹಬ್ ವೆಬ್ಸೈಟ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪೋರ್ನ್ ಹಬ್ ವಿಶ್ವದಲ್ಲಿ ತುಂಬಾ ಜನಪ್ರಿಯ ವೆಬ್ಸೈಟ್ ಹೀಗಾಗಿ ಇಲ್ಲಿ ಅಪ್ಲೋಡ್ ಮಾಡಿದ್ದೇನೆ ಎಂದು ಶಿಕ್ಷಕ ಚಾಂಗ್ಸು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ
ಪೋರ್ನ ಹಬ್ ಮೂಲಕ ಚಾಂಗ್ಸು ಗಣಿತದ ವಿಡಿಯೋಗಳನ್ನು ಜನರು ನೋಡಿದ್ದಾರೆ. ಅವರ ವಿಡಿಯೋಗಳಿಗೆ 1.6 ಮಿಲಿಯನ್ ಗಿಂತ ಹೆಚ್ಚುವೀವ್ಸ್ ಲಭ್ಯವಾಗಿವೆ. ಇದರಿಂದ ವರ್ಷಕ್ಕೆ 2,50,000 ಡಾಲರ್ ( 18,747,837.50 ರೂ.) ಹಣ ಗಳಿಸಿದ್ದಾರೆ.
ಕೆಲವರು ಈತನ ಪಾಠ ಕೇಳಿ, ಹೆಚ್ಚಿನ ಹಣ ಕೊಟ್ಟು ಪ್ರಿಮಿಯಮ್ ಕೋರ್ಸ್ ಕೂಡ ಪಡೆದಿದ್ದಾರಂತೆ. ಓದಲು ಆಸಕ್ತಿಯಿದ್ದು, ಹಣವಿಲ್ಲದಿದ್ದರೆ ಅಂತಹವರು ನನ್ನನ್ನು ನೇರವಾಗಿ ಸಂರ್ಪಕಿಸಿ ಎಂದು ಚಾಂಗ್ಸು ಹೇಳಿದ್ದಾರೆ
ಭಾರತದಲ್ಲಿ ಬ್ಯಾನ್: ಕೇಂದ್ರ ಸರ್ಕಾರ ಸುಮಾರು ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿ ಸುಮಾರು ಎಂಟು ನೂರಕ್ಕೂ ಅಧಿಕ ಅಶ್ಲೀಲ ವೆಬ್ ತಾಣಗಳಿಗೆ ನಿಷೇಧ ಹೇರಿದೆ.