Advertisement

Delhi: ಪುಸ್ತಕ ತರಲಿಲ್ಲವೆಂದು ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ; ಗಂಭೀರ

09:02 AM Aug 17, 2023 | Team Udayavani |

ಹಿಂದಿ ಪುಸ್ತಕ ತರಲಿಲ್ಲವೆಂದು 11 ವರ್ಷದ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

Advertisement

 

ದೆಹಲಿ: ಶಾಲೆಗೆ ಪುಸ್ತಕ ತರಲಿಲ್ಲ ಎಂದು ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.

ಘಟನೆ ಹಿನ್ನೆಲೆ:

ಶಿಕ್ಷಕ 6ನೇ ತರಗತಿಯ ವಿದ್ಯಾರ್ಥಿಯ ಬಳಿ ಕ್ಲಾಸ್‌ ರೂಮ್‌ ನಲ್ಲಿ ಹಿಂದಿ ಪುಸ್ತಕ ತೋರಿಸಲು ಹೇಳಿದ್ದಾರೆ. ಆದರೆ ವಿದ್ಯಾರ್ಥಿ ಆ ದಿನ ಹಿಂದಿ ಪುಸ್ತಕವನ್ನು ತಂದಿರಲಿಲ್ಲ. ಈ ಕಾರಣದಿಂದ ಸಿಟ್ಟಾದ ಶಿಕ್ಷಕ ವಿದ್ಯಾರ್ಥಿಯನ್ನು ತರಗತಿಯ ಹೊರಗಡೆ ಕಳಿಸಿದ್ದಾರೆ. ವಿದ್ಯಾರ್ಥಿ ಹೊರಗೆ ಹೋಗುವ ವೇಳೆ ಶಿಕ್ಷಕ ಆತನನ್ನು ತಡೆದು ಕಪಾಳಕ್ಕೆ ಬಾರಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ವಿದ್ಯಾರ್ಥಿಯ ಕುತ್ತಿಗೆಯನ್ನು ಹಿಸುಕಿದ್ದಾರೆ. ಇದರಿಂದ ವಿದ್ಯಾರ್ಥಿ ಗಾಯಗೊಂಡಿದ್ದು ನೇರವಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈ ಬಗ್ಗೆ ಮಾತನಾಡುವ ದೂರುದಾರ, ವಿದ್ಯಾರ್ಥಿ ಮುಸ್ತಫಾಬಾದ್ ನಿವಾಸಿ ಮೊಹಮ್ಮದ್ ರಮ್ಜಾನಿ, ನನ್ನ 11 ವರ್ಷದ ಮಗ ಅರ್ಬಾಜ್‌ನನ್ನು ಶಿಕ್ಷಕರು ಥಳಿಸಿದ್ದಾರೆ. ಘಟನೆ ಆದ ಬಳಿಕ ನಾನೇನು ದೂರು ನೀಡಿಲ್ಲ. ಆದರೆ ನನ್ನ ಮಗನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆ ಬಳಿಕ ನಾನು ದೂರು ನೀಡಿದ್ದೇನೆ ಎನ್ನುತ್ತಾರೆ.

ನನ್ನ ಮಗ ಅರ್ಬಾಜ್ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ, ಆದ್ದರಿಂದ ಮಗನಿಗೆ ಕಪಾಳಮೋಕ್ಷ ಮಾಡಿದ ಶಿಕ್ಷಕ ಸಾದುಲ್ ಹಸನ್ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಂದೆ ತಿಳಿಸಿದ್ದಾರೆ.

ಸದ್ಯ ವಿದ್ಯಾರ್ಥಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next