Advertisement

Karnataka ಶಿಕ್ಷಕರ ಕೊರತೆ: ರಾಯಚೂರು ಪ್ರಥಮ

12:39 AM Jun 19, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಶಿಕ್ಷಕರ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು ರಾಯಚೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಖಾಯಂ ಶಿಕ್ಷಕರ ಕೊರತೆಯಿಂದ ನಲುಗುತ್ತಿದೆ.

Advertisement

ಯಾದಗಿರಿ ಎರಡನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಒಟ್ಟು 33,863 ಪ್ರಾಥಮಿಕ ಶಿಕ್ಷಕರು ಮತ್ತು 8,954 ಪ್ರೌಢ ಶಾಲಾ ಶಿಕ್ಷಕರ ಕೊರತೆಯಿದೆ ಎಂದು ಶಾಲಾ ಶಿಕ್ಷಣ ಮತ್ತು ಇಲಾಖೆಯೇ ಒಪ್ಪಿಕೊಂಡಿದೆ. ರಾಜ್ಯದ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಒಟ್ಟು 11,811 ಪ್ರಾಥಮಿಕ, 2,951 ಪ್ರೌಢಶಾಲಾ ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಯಚೂರು- 3,205,ಯಾದಗಿರಿ-2,259, ಕಲಬುರಗಿ- 1832, ಕೊಪ್ಪಳ – 1,748 , ಬಳ್ಳಾರಿ -1,470, ವಿಜಯನಗರ-655 ಮತ್ತು ಬೀದರ್‌-632 ಶಿಕ್ಷಕರ ಕೊರತೆಯಿದೆ. ಪ್ರೌಢಶಾಲಾ ವಿಭಾಗದಲ್ಲಿ ರಾಯಚೂರು-707, ಯಾದಗಿರಿ- 558, ಕೊಪ್ಪಳ-416, ಬಳ್ಳಾರಿ-391, ಕಲಬುರಗಿ-379, ಬೀದರ್‌-287, ವಿಜಯನಗರ-213 ಶಿಕ್ಷಕರ ಅಲಭ್ಯತೆಯಿದೆ. 2023 -24ರ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಕೊನೆಯ 5 ಸ್ಥಾನಗಳನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಹಂಚಿಕೊಂಡಿವೆ ಎಂಬುದು ಶಿಕ್ಷಕರ ಕೊರತೆಯ ಗಂಭೀರತೆಯನ್ನು ಸೂಚಿಸುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಚಿಕ್ಕೋಡಿಯಲ್ಲಿ 2,231 ಪ್ರಾ. ಶಾಲಾ ಶಿಕ್ಷಕರು ಮತ್ತು 505 ಪ್ರೌಢ ಶಾಲಾ ಶಿಕ್ಷಕರ ಕೊರತೆಯಿದೆ. ಹಾಗೆಯೇ ಬೆಳಗಾವಿಯಲ್ಲಿ 1,457 ಮತ್ತು 291, ವಿಜಯಪುರ 1,336 ಮತ್ತು 223, ಬಾಗಲಕೋಟೆಯಲ್ಲಿ 1,088 ಮತ್ತು 279, ಧಾರವಾಡ 766 ಮತ್ತು 131, ಗದಗ 643 ಮತ್ತು 218, ಹಾವೇರಿ 964 ಮತ್ತು 241 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಖಾಯಂ ಶಿಕ್ಷಕರ ಕೊರತೆಯಿದೆ.

ಉ.ಕ. ಭಾಗದ 14 ಜಿಲ್ಲೆಗಳಲ್ಲಿ 20,296 ಪ್ರಾ. ಶಾಲಾ ಶಿಕ್ಷಕರು ಅಂದರೆ ರಾಜ್ಯದ ಒಟ್ಟು ಕೊರತೆಯಲ್ಲಿ ಶೇ.60 ಮತ್ತು ಪ್ರೌಢಶಾಲಾ ಶಿಕ್ಷಕರಲ್ಲಿ 4,839 ಶಿಕ್ಷಕರು ಅಂದರೆ ಶೇ. 54 ಕೊರತೆಯಿದೆ. ರಾಜ್ಯದ ದಕ್ಷಿಣ ಭಾಗದ 21 ಜಿಲ್ಲೆಗಳಲ್ಲಿ 13,567 ಪ್ರಾಥಮಿಕ ಮತ್ತು 4,115 ಪ್ರೌಢ ಶಾಲಾ ಶಿಕ್ಷಕರ ಕೊರತೆಯಿದೆ.

ಖಾಯಂ ಶಿಕ್ಷಕರ ಕೊರತೆಯನ್ನು ತುಂಬಲು ಸರಕಾರ ಅತಿಥಿ ಶಿಕ್ಷಕರ ಮೊರೆ ಹೋಗಿದ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಒಟ್ಟು 45 ಸಾವಿರ ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ.

ದ. ಕರ್ನಾಟಕದ ಜಿಲ್ಲೆಯಲ್ಲಿ ಎಷ್ಟು ಶಿಕ್ಷಕರ ಕೊರತೆ ?
ಬೆಂಗಳೂರು ಗ್ರಾಮಾಂತರದಲ್ಲಿ 521(ಪ್ರಾ.) ಮತ್ತು 147 (ಪ್ರೌಢ), ಬೆಂಗಳೂರು ಉತ್ತರ 635 ಮತ್ತು 69, ಬೆಂಗಳೂರು ದಕ್ಷಿಣ 1,092 ಮತ್ತು 155, ಚಿಕ್ಕಬಳ್ಳಾಪುರ 542 ಮತ್ತು 219, ಚಾಮರಾಜನಗರ 584 ಮತ್ತು 174, ಚಿಕ್ಕಮಗಳೂರು 468 ಮತ್ತು 187, ಚಿತ್ರದುರ್ಗ 577 ಮತ್ತು 132, ದಕ್ಷಿಣ ಕನ್ನಡ 1,033 ಮತ್ತು 293, ದಾವಣಗೆರೆ 395 ಮತ್ತು 104, ಹಾಸನ 804 ಮತ್ತು 407, ಕೊಡಗು 265 ಮತ್ತು 97, ಕೋಲಾರ 565 ಮತ್ತು 290, ಮಂಡ್ಯ 778 ಮತ್ತು 400, ಮೈಸೂರು 1,001 ಮತ್ತು 291, ರಾಮನಗರ 900 ಮತ್ತು 193, ಶಿವಮೊಗ್ಗ 780 ಮತ್ತು 190, ತುಮಕೂರು 603 ಮತ್ತು 244, ಮಧುಗಿರಿ 603 ಮತ್ತು 183, ಉಡುಪಿ 364 ಮತ್ತು 163, ಉತ್ತರ ಕನ್ನಡ 373 ಮತ್ತು 39 ಹಾಗೂ ಶಿರಸಿಯಲ್ಲಿ 697 ಮತ್ತು 138 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೊರತೆಯಿದೆ.

Advertisement

– ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next