Advertisement

‘ಉತ್ತಮ ಶಿಕ್ಷಣ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿ’ 

08:05 AM Jul 28, 2017 | Karthik A |

ಬೆಳ್ತಂಗಡಿ: ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ 2017-18ನೇ ಸಾಲಿನ  ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ವಿದ್ಯಾ ಸಂಸ್ಥೆಗಳ ನೂತನ ಸಂಚಾಲಕ ಫಾ| ಬಾಜಿಲ್‌ ವಾಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉತ್ತಮ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಂತಹ ಮೌಲ್ಯಯುತ ಶಿಕ್ಷಣವನ್ನು ಈ ವಿದ್ಯಾಸಂಸ್ಥೆ ನಿಮ್ಮ ಮಕ್ಕಳಿಗೆ ನೀಡುತ್ತದೆ ಎಂದವರು ತಿಳಿಸಿದರು.

Advertisement

ನೂತನ ಸಂಚಾಲಕರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಚಾಲಕರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ನಿರ್ಗಮನ ಅಧ್ಯಕ್ಷರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿರ್ಗಮನ ಅಧ್ಯಕ್ಷ ಎಸ್‌.ಆರ್‌. ನಾಯಕ್‌ ಮಾತನಾಡಿ, ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದರೊಂದಿಗೆ ಅವರ ದಿನನಿತ್ಯದ ಚಟುವಟಿಕೆಗಳನ್ನು ಅವರು ಗಮನಿಸುತ್ತಿರಬೇಕು. ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದರೆ, ವಿದ್ಯಾರ್ಥಿಗಳು ದಾರಿತಪ್ಪುವ ಸಂದರ್ಭ ಬರುವುದಿಲ್ಲ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ಅಲೆಕ್ಸ್‌ ಐವನ್‌ ಸಿಕ್ವೇರಾ ಅವರು ಕಾಲೇಜಿನ ಚಟುವಟಿಕೆಗಳ ಅವಲೋಕನ ಮಾಡಿದರು. 2017-18ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮಾಧವ ಗೌಡ ಮತ್ತು ಉಪಾಧ್ಯಕ್ಷೆಯಾಗಿ ಜೆಸಿಂತಾ ಮೋನಿಸ್‌ ಆಯ್ಕೆಯಾದರು. ಸಂಘದ ಕಾರ್ಯದರ್ಶಿ ಪ್ರೊ| ಜೋನ್‌ ಬ್ಯಾಪಿಸ್ಟ್‌  ಡಿ’ಸೋಜಾ ಸ್ವಾಗತಿಸಿ, ವರದಿ ಮಂಡಿಸಿದರು. ಸಂಘದ ಖಜಾಂಚಿ ಪ್ರೊ| ಆ್ಯಗ್ನೆಸ್‌  ರೋಡ್ರಿಗಸ್‌ ಲೆಕ್ಕಪತ್ರ ಮಂಡಿಸಿದರು. ಕನ್ನಡ ವಿಭಾಗದ ಪ್ರೊ| ಬೇಬಿ ಎ. ಕಾರ್ಯಕ್ರಮ ನಿರ್ವಹಿಸಿ, ವಾಣಿಜ್ಯ ಉಪನ್ಯಾಸಕ ಪ್ರೊ| ಸ್ಯಾಮ್‌ ಜೋಯಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next