ಥಾಣೆ: ಜಿಲ್ಲಾ ಪರಿಷತ್ ಶಿಕ್ಷಕನನ್ನು ಅಪಹರಿಸಿ ಚಿನ್ನ ಮತ್ತು ಹಣ ದೋಚಿದ ಘಟನೆ ಕಲ್ಯಾಣ್ ಪರಿಸರದಲ್ಲಿ ನಡೆದಿದೆ.
ಸಂತ್ರಸ್ತ ಶಿಕ್ಷಕ ಜಗದೀಶ್ ಪವಾರ್ ಅವರು ಥಾಣೆ ಜಿಲ್ಲಾ ಪರಿಷತ್‌ನ ಮಲಂಗಡ್ ಪ್ರದೇಶದ ಧೋಕೆ ಕೇಂದ್ರದಲ್ಲಿ ಶಿಕ್ಷಕರಾಗಿದ್ದಾರೆ. ಬುಧವಾರ ಬೆಳಗ್ಗೆ ಕಲ್ಯಾಣ್ ಪಶ್ಚಿಮದ ತಮ್ಮ ಮನೆಯಿಂದ ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಪರಿಚಿತ ಯುವಕ ಪ್ರಥಮೇಶ್ ವಾಕುರ್ಲೆ ಕಾರಿಗೆ ಕೈತೋರಿಸಿ ಧೋಕೆ ಗ್ರಾಮಕ್ಕೆ ಹೋಗುವುದಾಗಿ ಹೇಳಿದ. ಪವಾರ್ ಆತನನ್ನು ಕಾರಿಗೆ ಹತ್ತಿಸಿಕೊಂಡರು.
ಇದಾದ ಬಳಿಕ ಸ್ವಲ್ಪ ದೂರದಲ್ಲಿ ಆರೋಪಿ ಪ್ರಥಮೇಶ್ ಶಿಕ್ಷಕರ ಕಾರಿನಲ್ಲಿ ತನ್ನ ಇಬ್ಬರು ಸಹಚರರನ್ನು ಕುಳ್ಳಿರಿಸಿಕೊಂಡಿದ್ದ. ಕಾರು ಚಲಿಸಲಾರಂಭಿಸಿದಾಗ ಆರೋಪಿಗಳು ಶಿಕ್ಷಕರ ಕುತ್ತಿಗೆಗೆ ಚಾಕು ತೋರಿಸಿ ಕಾರನ್ನು ಬದ್ಲಾಪುರ ಪ್ರದೇಶದ ಮುಲ್ಗಾಂವ್ ಅರಣ್ಯಕ್ಕೆ ಕರೆದೊಯ್ಯಲಾಯಿತು. ಶಿಕ್ಷಕರಿಂದ ಚಿನ್ನ, ಜೇಬಿನಲ್ಲಿದ್ದ ಹಣ ಮತ್ತು ಮೊಬೈಲ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ಶಿಕ್ಷಕ ಪವಾರ್ ಅವರು ತನ್ನ ಸ್ನೇಹಿತರೊಂದಿಗೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಕಲ್ಯಾಣ್ ಪೂರ್ವ ಕೋಲ್ಸೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.