ಸಿದ್ದಾಪುರ: ಪ್ರತಿಷ್ಠಿತ ನಗರಗಳಲ್ಲಿ ಕೆಲವು ಸಂಘಸಂಸ್ಥೆಗಳು ಹಲವು ದಿನಗಳ ಕಾಲ ನಗರ ನಾಗರಿಕರಿಗಾಗಿ ಉಚಿತ ಯೋಗ ಶಿಬಿರ ಆಯೋಜಿಸಿರುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಊರಿನಲ್ಲಿ ಮಾತ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರತಿವರ್ಷ ತಾವೊಬ್ಬರೇ ತಮ್ಮ ಶಾಲೆಯ 160 ವಿದ್ಯಾರ್ಥಿಗಳು ಹಾಗೂ ಗ್ರಾಮದ ನಾಗರಿಕರಿಗಾಗಿ ಉಚಿತವಾಗಿ 11 ದಿನಗಳ ಕಾಲ ಯೋಗ ಶಿಬಿರ ಹಮ್ಮಿಕೊಳ್ಳುತ್ತಿದ್ದಾರೆ.
ಸಮೀಪದ ಗುಂಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕರಿಯಪ್ಪ ಎನ್ನುವವರು ಹೀಗೆ ಸದ್ದಿಲ್ಲದೇ ಯೋಗ ಶಿಕ್ಷಣ ನೀಡುವ ಮೂಲಕ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಯೋಗದ ಆರಂಭ: ಈ ಶಿಕ್ಷಕರು ಶಾಲೆಗೆ ಬಂದಾಗ ಮಕ್ಕಳು ಕೆಲವು ಸಣ್ಣಪುಟ್ಟ ರೋಗಗಳಿಗೆ ಹಾಗೂ ಕಲಿಕೆಯಲ್ಲಿ ಆಸಕ್ತಿಯಿಲ್ಲದಿರುವುದು ಕಂಡುಬಂತು. ಇದನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿ ಯೋಗ ಶಿಕ್ಷಣ ನೀಡಬೇಕು ಎಂದು ನಿರ್ಧರಿಸಿದರು. ಅದರಂತೆ ಪ್ರತಿವರ್ಷ ಯೋಗ ದಿನಾಚರಣೆಯ ಮುನ್ನ 11 ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಶಿಬಿರಕ್ಕೆ 4 ವರ್ಷ: ಹೀಗೆ ಹಮ್ಮಿಕೊಳ್ಳುತ್ತಿದ್ದ ಇವರ ಶಿಬಿರ 4ನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ತಿಂಗಳ 10 ರಿಂದ 21ರವರೆಗೆ ಉಚಿತ ಯೋಗ ತರಗತಿಗಳನ್ನು ಆರಂಭಿಸಿದ್ದು ಬೆಳಗಿನ ಜಾವ 5 ಗಂಟೆಯಿಂದ 7ರವರೆಗೆ ಯೋಗ ತರಗತಿಗಳು ನಡೆಯುತ್ತವೆ. ಇಲ್ಲಿ ಸೂರ್ಯ ನಮಸ್ಕಾರ, ತಾಡಾಸಾನ, ನಟರಾಜಾಸನ, ಅರ್ಧಚಕ್ರಸಾನ, ಕೋನಸಾನ, ತ್ರಿಕೋನಸಾನ, ಪ್ರಾಣಾಯಾಮ ಸೇರಿದಂತೆ ಹಲವು ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಯೋಗವನ್ನು ಗ್ರಾಮದ ಜನರಿಗೆ ಹಾಗೂ ಮಕ್ಕಳಿಗೆ ತಲುಪಿಸುತ್ತಿರುವ