Advertisement

ಗುರು-ಗೆಳೆತನ ಅಮೂಲ್ಯ ಆಸ್ತಿ: ತಾಹೇರ್‌

12:27 PM Feb 10, 2022 | Team Udayavani |

ವಾಡಿ: ಶಾಲೆಗೆ ಕಳುಹಿಸಿದ ಹೆತ್ತವರು, ಅಕ್ಷರ ಕಲಿಸಿದ ಗುರುಗಳು ಬದುಕಿನ ಭವಿಷ್ಯ ಬರೆದ ರತ್ನಗಳಾದರೆ, ಕೂಡಿ ಆಡಿದ ಬಾಲ್ಯದ ಗೆಳೆಯರು ಜೀವನದ ಅಮೂಲ್ಯ ಆಸ್ತಿಗಳಿದ್ದಂತೆ ಎಂದು ಸ್ಥಳೀಯ ಸರ್ಕಾರಿ ಎಂಪಿಎಸ್‌ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಂ.ಡಿ.ತಾಹೇರ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 1991-92ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳು, ಬಾಲ್ಯದ ಗೆಳೆಯರ ಬಳಗ ವೇದಿಕೆಯಡಿ ಅಕ್ಷರ ಕಲಿಸಿ ನಿವೃತ್ತಿ ಹೊಂದಿದ ಗುರುಗಳಿಗಾಗಿ ಏರ್ಪಡಿಸಲಾಗಿದ್ದ ಗುರುವಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರು ಎಂದರೆ ರಾಷ್ಟ್ರದ ತಳಪಾಯವಿದ್ದಂತೆ. ವಿದ್ಯಾರ್ಥಿಗಳು, ಯುವಜನರು ಈ ದೇಶದ ಭವಿಷ್ಯ. ಈ ಯುವಶಕ್ತಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದ ಆಸ್ತಿಯಾಗಿ ನಿಲ್ಲಬೇಕು ಎಂದರು.

ನಿವೃತ್ತ ಶಿಕ್ಷಕ ವಸಂತ ಕಟ್ಟಿಮನಿ ಮಾತನಾಡಿ, ದಿಕ್ಕಿಗೊಬ್ಬರಂತೆ ಹಂಚಿ ಹೋದ ಶಿಕ್ಷಕರನ್ನು ಮತ್ತು ಸಹಪಾಟಿ ಗೆಳೆಯರನ್ನು ಕರೆದು ಒಂದೆಡೆ ಸೇರಿಸಿ ಸತ್ಕರಿಸುವ ಮೂಲಕ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಪರಿ ಮೆಚ್ಚುವಂತಹದ್ದು ಎಂದರು.

ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಸನ್ಮಾನ ಸ್ವೀಕರಿಸಿದ ಗಣಿತ ಶಿಕ್ಷಕಿ ಲಕ್ಷ್ಮೀಬಾಯಿ ಕಟ್ಟಿಮನಿ, ವಿಜ್ಞಾನ ಶಿಕ್ಷಕಿ ಇಂದ್ರಾಬಾಯಿ ರಾಠೊಡ ಮಾತನಾಡಿ, ನಿವೃತ್ತಿಯಾದ ನಮ್ಮನ್ನು ಹುಡುಕಿ, ಮರಳಿ ಶಾಲೆಗೆ ಕರೆತರುವ ಮೂಲಕ ಭಾವನಾ ಲೋಕದಲ್ಲಿ ಮುಳುಗಿಸಿದ್ದೀರಿ ಎಂದರು.

Advertisement

ಕಲಬುರಗಿ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡ ಜೇವರ್ಗಿ ತಾಲೂಕಿನ ಬಿರಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎಂ. ವೀರೇಶ ಅವರನ್ನು ಬಾಲ್ಯದ ಗೆಳೆಯರ ಬಳಗದಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಎಂಪಿಎಸ್‌ ಶಾಲೆಯ ಹಾಲಿ ಮುಖ್ಯಶಿಕ್ಷಕರಾದ ಭಗವಾನ ದಂಡಗುಲಕರ, ಗೀತಾ ಠಾಕೂರ, ಯಾಸ್ಮೀನ್‌, ಆಲಿಯಾಬೇಗಂ, ಶಮಶದಾ, ಬಾಲ್ಯದ ಗೆಳೆಯರ ಬಳಗದ ನಾಗರಾಜ ಗೌಡಪ್ಪನೋರ, ದೇವಿಂದ್ರ ದೊಡ್ಡಮನಿ, ಗುರುಮೂರ್ತಿ ಜ್ಯೋಶಿ, ಗುಂಡಪ್ಪ ಹೇರೂರ, ಮಹಾಂತೇಶ ಬಿರಾದಾರ, ಮಹ್ಮದ್‌ ವಸೀಲ್‌, ಪಾಂಡುರಂಗ ಕಾನಕುರ್ತೆ, ರಮೇಶ ಬಡಿಗೇರ, ಮರೆಪ್ಪ ಬುಕನಾಳ, ಲಕ್ಷ್ಮೀಕಾಂತ, ಚಂದ್ರು, ಇಲಿಯಾಸ್‌, ಮಲ್ಲಿಕಾರ್ಜುನ ಚಿಟೇಲಕರ, ರಾಕೇಶ, ನೆಹರು, ಮಲ್ಲಿಕಾರ್ಜುನ, ಮೋತಿಲಾಲ ಜಾಧವ, ಸುನೀಲ ರಾಠೊಡ, ವೀರಣ್ಣ ಯಾರಿ, ಪ್ರಕಾಶ ಚಂದನಕೇರಿ, ಕಾಶೀನಾಥ ಶೆಟಗಾರ, ಚಂದ್ರಕಾಂತ ಬೆಣ್ಣೂರ, ಆನಂದ ಇಂಗಳಗಿ, ಫ್ರಾನ್ಸಿಸ್‌, ಬಸವರಾಜ ನಾಟೀಕಾರ ಪಾಲ್ಗೊಂಡಿದ್ದರು. ಮಡಿವಾಳಪ್ಪ ಹೇರೂರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next