ದೋಟಿಹಾಳ: ಕಿಲ್ಲಾರಹಟ್ಟಿ, ಜೂಮಲಾಪುರ ಸಿಆರ್‌ಪಿ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ಮಕ್ಕಳು ಮಧ್ಯಾಹ್ನನದ ಬಿಸಿಯೂಟಕ್ಕೆ ಶಾಲೆಗೆ ಬರುತ್ತಿದ್ದರೂ ಶಿಕ್ಷಕರು ಬರುತ್ತಿಲ್ಲ. ರಾಜ್ಯ ಸರಕಾರ ಬರಪೀಡಿತ ಪ್ರದೇಶದ ಮಕ್ಕಳ ಮಧ್ಯಾಹ್ನನದ ಬಿಸಿಯೂಟ ಯೋಜನೆ ಹಾದಿ ತಪುತ್ತಿದೆ.
ಕಳಮಳ್ಳಿ ತಾಂಡಾ ಮತ್ತು ಮ್ಯಾದರಡಕ್ಕಿ ಶಾಲೆಗಳಿಗೆ ವಾರಕೊಮ್ಮೆ ಅತಿಥಿ ಶಿಕ್ಷಕರು ಬಂದು ಅಡುಗೆಗೆ ಬೇಕಾಗುವ ದಿನಸಿ ಸಾಮಗ್ರಿ ನೀಡಿ ಹೋಗುತ್ತಾರೆ ಎಂಬ ಆರೋಪವಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅತಿಥಿ ಶಿಕ್ಷಕರು, ಶಿಕ್ಷಕರು ಊರಿಗೆ ಹೋದ ಕಾರಣ ನಾನು ಶಾಲೆಗೆ ಬಂದಿದ್ದೇನೆ ಎಂದು ಹೇಳಿದರು. ಕಳಮಳ್ಳಿ ತಾಂಡದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಎಲ್ಲ ಜವವಾಬ್ದಾರಿಯನ್ನೂ ಅಡುಗೆ ಸಿಬ್ಬಂದಿಯೇ ವಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಳಮಳ್ಳಿ ತಾಂಡ ಶಿಕ್ಷಕ ರವಿ ಕುಮಾರ, ಪುತ್ರಿಯ ಶಾಲಾ ದಾಖಲಾತಿ ಇರುವುದರಿಂದ ಊರಿಗೆ ಹೋಗಿದ್ದೇನೆ ಎಂದು ಸಮಜಾಯಿಷಿ ನೀಡಿದರು. ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕೆ. ಶರಣಪ ಪ್ರತಿಕ್ರಿಯಿಸಿ, ಶಾಲೆಗಳಿಗೆ ಸಂಬಂಧಪಟ್ಟ ಸಿಆರ್‌ಪಿಗಳಿಂದ ಮಾಹಿತಿ ಪಡೆದು ಲೋಪವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
2-3 ದಿನಗಳ ಹಿಂದೆ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರಿಗೆ ಬೇಸಿಗೆ ಬಿಸಿಯೂಟದ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕೆಂದು ವಿಶೇಷ ಸಭೆ ಕರೆದು ಸೂಚಿಸಲಾಗಿದೆ. ಶಿಕ್ಷಕರು ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎಂದರೆ ಹೇಗೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಬಸವರಾಜ, ಸಿಆರ್‌ಪಿ
ಬೇಸಿಗೆ ದಿನಗಳಲ್ಲಿ ಮಕ್ಕಳಿಗೆ ತಪ್ಪದೇ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಆದರೆ ಶಾಲೆಗೆ ಸರಿಯಾಗಿ ಹೋಗದೇ ಇರುವ ಶಿಕ್ಷಕರ ಬಗ್ಗೆ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು.
ಎಂ. ಚನ್ನಬಸಪ್ಪ,ಬಿಇಒ
Advertisement
ರಾಜ್ಯ ಸರಕಾರ ಬರಪೀಡಿತ ತಾಲೂಕುಗಳಲ್ಲಿ ಬೇಸಿಗೆ ರಜೆ ದಿನಗಳಲ್ಲಿ ಮಕ್ಕಳಿಗೆ ಮಧ್ಯಾಹ್ನನದ ಬಿಸಿಯೂಟ ನೀಡಬೇಕು ಎಂದು ಆದೇಶ ನೀಡಿದೆ. ಏ. 11ರಿಂದ ಮೇ 28ವರಗೆ ಬೇಸಿಗೆ ರಜೆ ದಿನಗಳಲ್ಲಿ ಮಕ್ಕಳಿಗೆ ಮಧ್ಯಾಹ್ನನದ ಬಿಸಿಯೂಟ ನೀಡಬೇಕು. ಇದಕ್ಕೆ ಆ ಶಾಲೆಯ ಮುಖ್ಯಗುರು ಅಥವಾ ಶಾಲೆ ಶಿಕ್ಷಕರಲ್ಲಿ ಯಾರಾದರೂ ಒಬ್ಬರು ಪ್ರತಿ ದಿನ ಶಾಲೆಗೆ ಬಂದು ತಪ್ಪದೇ ಮಕ್ಕಳಿಗೆ ಮಧ್ಯಾಹ್ನನದ ಊಟ ನೀಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ ಕೆಲವು ಶಾಲೆಗಳಲ್ಲಿ ಶಿಕ್ಷಕರು ವಾರಕೊಮ್ಮೆ ಬಂದು ಅಡುಗೆಗೆ ಬೇಕಾಗುವ ಸಾಮಗ್ರಿ ನೀಡಿ ಹೋಗುತ್ತಾರೆ ಎಂದು ಶಾಲಾ ಮಕ್ಕಳು ಹಾಗೂ ಮುಖ್ಯ ಅಡುಗೆ ಸಿಬ್ಬಂದಿ ತಿಳಿಸುತ್ತಾರೆ. ಮ್ಯಾದರಡಕ್ಕಿ ತಾಂಡಾದ ಶಾಲೆಯ ಶಿಕ್ಷಕರು ಶಾಲೆ ರಜೆ ನೀಡಿದ ನಂತರ ಊರಿಗೆ ಹೋದವರು ಮರಳಿ ಬಂದೇ ಇಲ್ಲ. ಶಾಲೆಯ ಒಬ್ಬ ವಿದ್ಯಾರ್ಥಿ ಕೈಯಲ್ಲಿ ಅಡುಗೆ ಕೊಠಡಿಯ ಕೀಲಿಕೈ ಕೊಟ್ಟು ಹೋಗಿದ್ದಾರೆ. ಆ ವಿದ್ಯಾರ್ಥಿ ಬಂದ ಮೇಲೆ ಮಕ್ಕಳಿಗೆ ಅಡುಗೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳಿಗೆ ಬಿಸಿಯೂಟ ಇಲ್ಲ ಎಂದು ಮುಖ್ಯ ಅಡುಗೆ ಸಿಬ್ಬಂದಿ ತಿಳಿಸಿದರು.
ಬಸವರಾಜ, ಸಿಆರ್‌ಪಿ
Related Articles
ಎಂ. ಚನ್ನಬಸಪ್ಪ,ಬಿಇಒ
Advertisement