Advertisement

ಶಿಕ್ಷಕರ ನೆರವಿಗೆ ಶಿಕ್ಷಕ ಮಿತ್ರ; ಸರಕಾರಿ ಶಾಲೆಗಳ ನೆರವಿಗೆ “ನನ್ನ ಶಾಲೆ ನನ್ನ ಕೊಡುಗೆ’

10:00 AM Feb 16, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಪರಿಹರಿಸಲು “ಶಿಕ್ಷಕ ಮಿತ್ರ’ ಆ್ಯಪ್‌ ಮತ್ತು ಸರಕಾರಿ ಶಾಲೆ ಗಳನ್ನು ಅಭಿವೃದ್ಧಿಪಡಿಸಲು ಮುಂದಾಗುವ ದಾನಿಗಳಿಗಾಗಿ “ನನ್ನ ಶಾಲೆ ನನ್ನ ಕೊಡುಗೆ’ ಆ್ಯಪ್‌ ರೂಪುಗೊಳ್ಳುತ್ತಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕೇಳಿಬರುವ ಅನುಮಾನ, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂವಾದ ರೂಪದ ಉತ್ತರವುಳ್ಳ ವೀಡಿಯೋ ಸಿದ್ಧ ಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

ಶುಕ್ರವಾರ “ಉದಯವಾಣಿ’ ಬೆಂಗಳೂರು ಕಚೇರಿ ಯಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ರಾಜ್ಯಾ ದ್ಯಂತ ಯಾವುದೇ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಅಲೆದಾಡುವುದು ತಪ್ಪಿಸಲು ಶಿಕ್ಷಕ ಮಿತ್ರ ಆ್ಯಪ್‌ ಸಿದ್ಧಗೊಳ್ಳುತ್ತಿದ್ದು, ಎಪ್ರಿಲ್‌ ವೇಳೆಗೆ ಕಾರ್ಯಾ ರಂಭವಾಗಲಿದೆ. ಸರಕಾರಿ ಶಾಲೆಗಳಲ್ಲಿ ಓದಿ ಉನ್ನತ ಮಟ್ಟಕ್ಕೆ ಏರಿರುವವರು ತಮ್ಮ ಶಾಲೆಗಳ ಅಭಿವೃದ್ಧಿಗೆ ತಮ್ಮ ಕೈಲಾದ ನೆರವು, ಕೊಡುಗೆ ನೀಡಲು ಅವಕಾಶ ಕಲ್ಪಿಸುವ “ನನ್ನ ಶಾಲೆ ನನ್ನ ಕೊಡುಗೆ’ ಆ್ಯಪ್‌ ಕೂಡ ಇದೇ ಸಂದರ್ಭ ಲೋಕಾರ್ಪಣೆಗೊಳ್ಳಲಿದೆ ಎಂದರು.

ರಾಜ್ಯದ ಯಾವ ಭಾಗದ ಯಾವ ಸರಕಾರಿ ಶಾಲೆಗೆ ಏನು ಅಗತ್ಯವಿದೆ, ಅಲ್ಲಿರುವ ಕೊರತೆಗಳು ಏನು ಎಂಬುದೂ ಈ ಆ್ಯಪ್‌ನಲ್ಲಿ ಇರಲಿದ್ದು, ದಾನಿಗಳು ಶಾಲೆ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದಾಗಿದೆ. ಜತೆಗೆ ವಾರಕ್ಕೊಮ್ಮೆ ಅಥವಾ ದಿನದ ಇಂತಿಷ್ಟು ಅವಧಿ ಯಲ್ಲಿ ನಿಗದಿತ ವಿಷಯದ ಪಾಠ ಪ್ರವಚನ, ಕಂಪ್ಯೂಟರ್‌ ತರಬೇತಿ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿ ಸುವ ಸವಾಲು, ಅವರ ಅನುಮಾನ, ಗೊಂದಲಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಜ್ಞರು ಮತ್ತು ಅಧಿ ಕಾರಿ ಗಳೇ ಸಂವಾದ ನಡೆಸಿ ಕಂಡುಕೊಂಡ ಪರಿಹಾರ ಪ್ರತಿಕ್ರಿಯೆಗಳ ವೀಡಿಯೋವನ್ನು ಮುಂದಿನ ಸೋಮವಾರವೇ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡ ಲಾಗುತ್ತದೆ. ಇದನ್ನು ಶಿಕ್ಷಕರು, ಇಲಾಖಾ ಅಧಿಕಾರಿ ಗಳ ಸಮೂಹ, ವಿದ್ಯಾರ್ಥಿ-ಪೋಷಕರಿಗೆ ತಲುಪಿ ಸುವುದು ನಮ್ಮ ಆಶಯ ಎಂದರು. ಇದು “ಎಫ್ಎಕ್ಯು’ (ಸಾಮಾನ್ಯವಾಗಿ ಉತ್ತರಿಸಲಾಗುವ ಪ್ರಶ್ನೆಗಳು) ಮಾದರಿಯಲ್ಲಿದ್ದು, ಎಲ್ಲ ವಿದ್ಯಾರ್ಥಿಗಳ ಗೊಂದಲ, ಸಂಶಯಗಳಿಗೆ ಉತ್ತರ ನೀಡುವ ಯತ್ನ ಎಂದರು.

ಹೆಚ್ಚುವರಿ ಅನುದಾನಕ್ಕೆ ಕೋರಿಕೆ
ರಾಜ್ಯದಲ್ಲಿ 50 ವರ್ಷ ತುಂಬಿದ 14,631 ಶಾಲೆ ಗಳಿದ್ದು, ಅವುಗಳ ದುರಸ್ತಿಗೆ 430 ಕೋಟಿ ರೂ. ಅಗತ್ಯವಿದೆ. ಇದಲ್ಲದೆ ಇತರ ಶಾಲೆಗಳ ದುರಸ್ತಿ ಮತ್ತು ಸೌಲಭ್ಯ ಒದಗಿಸಲು ದೊಡ್ಡ ಮೊತ್ತ ಬೇಕಾಗಿದೆ. ಶಿಕ್ಷಣ ಇಲಾಖೆಗೆ ಕಳೆದ ವರ್ಷ 24,000 ಕೋಟಿ ರೂ. ಅನುದಾನ ಕೊಟ್ಟಿದ್ದು, ಅದರಲ್ಲಿ 19 ಸಾವಿರ ಕೋಟಿ ರೂ. ವೇತನಕ್ಕೆ ವ್ಯಯವಾಗುತ್ತಿದೆ. ಉಳಿದ ಮೊತ್ತದಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸೌಲಭ್ಯ ಒದಗಿಸಬೇಕಾಗಿದೆ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ 4,000 ಕೋಟಿ ರೂ. ಅನುದಾನ ಕೇಳಲಾಗಿದೆ ಎಂದು ತಿಳಿಸಿದರು.

Advertisement

ಶಿಕ್ಷಕರಿಗೆ ತರಬೇತಿ
ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ಬಗ್ಗೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ನಿವೃತ್ತ ಶಿಕ್ಷಕರು, ತಜ್ಞರು, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಸೇರಿದಂತೆ ಪ್ರಮುಖ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದು ಹೇಳಿದರು. ಸೀಮಾಂಧ್ರದ ಗಡಿ ಭಾಗದಲ್ಲಿ ಕನ್ನಡ ಶಾಲೆ ಮುಚ್ಚುವ ವಿಚಾರದಲ್ಲಿ ಅಲ್ಲಿನ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ನನಗೆ ಅಲ್ಲಿಂದ ಉತ್ತರ ಬಂದಿಲ್ಲ. ನಾನೇ ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದು ತಿಳಿಸಿದರು.

ಸರಕಾರಿ ಶಾಲೆ ಮುಚ್ಚುವ ಪ್ರಮೇಯವೇ ಇಲ್ಲ
ರಾಜ್ಯದಲ್ಲಿ ಹತ್ತು ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳ ಸಂಖ್ಯೆ 4,200 ಇವೆ. ಆದರೆ ಸರಕಾರಿ ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ. ಶಾಸಕರ ನೇತೃತ್ವದಲ್ಲಿ ಪಂಚಾಯತ್‌ಗೊಂದು ಮಾದರಿ ಶಾಲೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಲ್ಲಿ ಶಿಕ್ಷಕರು, ಮೂಲಸೌಕರ್ಯ ಇರಲಿದೆ. ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳಿಂದ ಮಾದರಿ ಪಂಚಾಯತ್‌ ಶಾಲೆಗೆ ವಿದ್ಯಾರ್ಥಿ
ಗಳನ್ನು ಕರೆತಂದು ಪಾಠ ಪ್ರವಚನ ಮಾಡಿಸ ಲಾಗುವುದು. ಒಂದು, ಎರಡು, ಮೂವರು ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ಮುಚ್ಚದೆ ಎಲ್‌ಕೆಜಿ, ಯುಕೆಜಿಗಳನ್ನು ಸರಕಾರದ ವತಿಯಿಂದಲೇ ಆರಂಭಿಸಲಾಗುವುದು. ಸರಕಾರಿ ಶಾಲೆಗಳಲ್ಲಿ ತಿಂಗಳಲ್ಲಿ ಎರಡು ದಿನ “ಶನಿವಾರ ಸಂಭ್ರಮ’ ಆಚರಿಸಲು ತೀರ್ಮಾನಿಸಲಾಗಿದೆ. ಆ ದಿನ ಶಾಲೆಯಲ್ಲಿ ಪಠ್ಯ ಬೋಧನೆ ಇರುವುದಿಲ್ಲ. ಬದಲಿಗೆ ಆಟ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಚಟುವಟಿಕೆಗಳು ಮಾತ್ರ. ಇದರಿಂದ ಮಕ್ಕಳಲ್ಲಿ ಉತ್ಸಾಹ ತುಂಬಲಿದೆ ಎಂದರು.

ಬಾನುಲಿ ಶಿಕ್ಷಣ ಮುಂದುವರಿಕೆ
ನಲಿ-ಕಲಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಇದೆ. ಖಾಸಗಿ ಶಾಲೆಗಳೂ ಈ ಕಾರ್ಯಕ್ರಮ ನಡೆಸಲು ಮುಂದಾಗಿದ್ದು, ಪಠ್ಯಕ್ರಮ ನೀಡುವಂತೆ ಸರಕಾರಕ್ಕೆ ಮನವಿ ಮಾಡಿವೆ. ಅದಕ್ಕೆ ಪೂರಕವಾಗಿ ಸ್ಪಂದಿಸಲಾಗಿದೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿ ಶಿಕ್ಷಣ ಕಾರ್ಯಕ್ರಮ ಮತ್ತೆ ಆರಂಭಿಸಲಾಗುವುದು. ಇದರ ಜತೆಗೆ ದೂರದರ್ಶನ ಜತೆಗೂಡಿ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು ಎಂದು ಸುರೇಶ್‌ ಕುಮಾರ್‌ ಹೇಳಿದರು.

ಶಿಕ್ಷಕರ ನೇಮಕಾತಿಗೆ ಕ್ರಮ
10,650 ಮಂದಿ ಪ್ರಾಥಮಿಕ ಪದವೀಧರ ಶಿಕ್ಷಕರ ನೇಮಕಾತಿ ಸಂಬಂಧ ಕೆಲವು ತಾಂತ್ರಿಕ ಅಡ್ಡಿಗಳು ಎದುರಾಗಿದ್ದು, ಅಡ್ವೋಕೇಟ್‌ ಜನರಲ್‌ ಸಲಹೆ ಕೇಳಲಾಗಿದೆ ಎಂದು ಸಚಿವರು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 30 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮುಂದಿನ ಮೂರು ವರ್ಷಗಳಲ್ಲಿ 26 ಸಾವಿರ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಪ್ರತಿವರ್ಷ 10 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಿಸಲು ಚಿಂತನೆ ನಡೆದಿದೆಯಲ್ಲದೆ, ಈ ವರ್ಷ ಜೂನ್‌ನಿಂದಲೇ ನೇಮಕ ಮಾಡಿಕೊಳ್ಳ ಲಾಗುವುದು. ಅವರಿಗೆ ಬೋಧನೆ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next