ಆಲಮಟ್ಟಿ: ದೇಶದಲ್ಲಿ ಶಾಂತಿ ಕದಡಲು ದೇಶದ್ರೋಹಿ ಶಕ್ತಿಗಳು ಹಾಗೂ ಭಯೋತ್ಪಾದಕರು ದೇಶದ ಗಡಿಯಲ್ಲಿ ಒಳನುಗ್ಗಲು ಯತ್ನಿಸುತ್ತಿದ್ದಾರೆ. ಅವರಿಗೆ ಉತ್ತರ ನೀಡಲು ನಮ್ಮ ಸೈನಿಕರು ಬಲಿಷ್ಠರಾಗಿದ್ದು ದೇಶಕ್ಕೆ ಒದಗಬಹುದಾದ ಗಂಡಾಂತರ ತಪ್ಪಿಸಲು ಪ್ರತಿಯೊಬ್ಬರೂ ನಮ್ಮ ಜವಾಬ್ದಾರಿ ಅರಿಯಬೇಕು ಎಂದು ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಎಸ್.ಎಚ್. ಮಂಜಪ್ಪ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ಭಾರತೀಯರು ಎಂಬುದನ್ನು ಅರಿತು ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಎಸ್.ಬಿ. ದಳವಾಯಿ, ವೈ.ಎಚ್. ನಾಗಣಿ, ಸಿ.ಬಿ. ಅಸ್ಕಿ, ಎನ್.ಬಿ. ದೇಸಾಯಿ, ಎಸ್.ಬಿ. ಪಾಟೀಲ, ಬಿ.ಎನ್. ಗುಣದಾಳ ಮೊದಲಾದವರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸ್ಥಳೀಯ ಗ್ರಾಪಂನಲ್ಲಿ ಅಧ್ಯಕ್ಷೆ ಸೈದಮ್ಮ ಬೆಣ್ಣಿ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ಎಂ.ಎಂ. ಹೋಗೋಡಿ ಮಾತನಾಡಿದರು. ಮಲ್ಲು ರಾಠೊಡ, ಬಿ.ಜೆ. ನದಾಫ್, ಎನ್.ಎ. ಪಾಟೀಲ, ಎಂ.ಜಿ. ಬಿದರಿ, ಎಸ್.ಎಂ. ಜಲ್ಲಿ, ವೈ.ಬಿ. ಹುಂಡೇಕಾರ, ಸಂಗಪ್ಪ ಸೊನ್ನದ, ಸಂಗಪ್ಪ ಗುಳೇದಗುಡ್ಡ ಇದ್ದರು.
ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ತಾಪಂ ಸದಸ್ಯ ಮಲ್ಲು ರಾಠೊಡ ನೆರವೇರಿಸಿದರು. ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಎಸ್.ಬಿ. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಜಿ.ಎಂ. ಕೋಟ್ಯಾಳ, ಯು.ಎ. ಹಿರೇಮಠ, ಎಂ.ಎಚ್. ಬಳಬಟ್ಟಿ, ಎಸ್.ಟಿ. ಅಂಗಡಿ, ಕಿರಣ ವಾಲಿ, ಜಿ.ಎಂ. ಹಿರೇಮಠ, ಜಗದೇವಿ ಕೆ, ಎಚ್.ಎನ್. ಕೆಲೂರ, ಕರದಾನಿ, ರಿಯಾನಾ ಕಾಲಿಖಾನ, ತಿಮ್ಮಣ್ಣ ದಾಸರ ಇದ್ದರು.
ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಮಾತೆ ಶಿವಲೀಲಾ ಗೌಡರ ಧ್ವಜಾರೋಹಣ ನೆರವೇರಿಸಿದರು. ಎಸ್.ಆರ್. ಅಂಗಡಿ, ಕೆ.ಇ. ಪರಾಂಡೆ, ಎಚ್.ಎಚ್. ದೊಡಮನಿ, ಎಂ.ಟಿ. ರ್ಯಾಗಿ ಇದ್ದರು. ಆಲಮಟ್ಟಿ ಜಲಾಶಯದ ಬಲಭಾಗದ ಸೀತಿಮನಿ ಕ್ಯಾಂಪ್‌ನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಚೇರಿಯಲ್ಲಿ ಪಿಸೈ ಈರಪ್ಪ ವಾಲಿ ಧ್ವಜಾರೋಹಣ ನೆರವೇರಿಸಿದರು. ಪಿಎಸ್ ಐಗಳಾದ ಯಲ್ಲಪ್ಪ ಬೈಲಕೂರ, ಮಹೇಶ ಹುದ್ದಾರ, ಶಿವಲಿಂಗ ಕುರೆನ್ನವರ, ಎ.ಎಂ. ಗಾಳಪ್ಪಗೋಳ ಇದ್ದರು.