Advertisement

ವಿದ್ಯಾರ್ಥಿಗಳಿಗೆ ಸಂಸ್ಕೃತಿ-ಸಂಸ್ಕಾ ರ ಕಲಿಸಿ

06:19 PM Jan 21, 2021 | Team Udayavani |

ಮುಂಡರಗಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣವಾದ ಅಧ್ಯಯನ ಮೂಲಕ ಸಾಧನೆ ಮಾಡಬೇಕು. ಕಷ್ಟಪಟ್ಟು ಪಡೆದ ಶಿಕ್ಷಣ ಭವಿಷ್ಯದಲ್ಲಿ ಜೀವನ ನಡೆಸಲು ಸಾಧ್ಯವಾಗಲಿದೆ. ಸಂಸ್ಕೃತಿ, ಸಂಸ್ಕಾರದಿಂದ ಜೀವನ ಉತ್ತಮವಾಗಲಿದೆ ಎಂದು ಶ್ರೀ ಜ| ಡಾ| ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ಹಾಗೂ ಎಸ್‌ಸಿ, ಎಸ್‌ಟಿ ಬಾಲಕರ ವಸತಿ ನಿಲಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸಂಸ್ಕಾರಯುತ ಶಿಕ್ಷಣ ಜೊತೆಗೆ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಮುಂದಿನ ವರ್ಷ ಸಮಗ್ರ ಶಿಕ್ಷಣ ನೀತಿ ಬದಲಾಗಲಿದೆ. ಪ್ರಧಾನಿ ಮೋದಿಯವರು ಶಿಕ್ಷಣ ನೀತಿ ಜಾರಿಗೊಳಿಸುವರು. ನೂತನ ಶಿಕ್ಷಣ ನೀತಿಯ ಯೋಜನೆಯಿಂದ ದೇಶದಲ್ಲಿ ಶಿಕ್ಷಣದ ಚಿತ್ರಣವೇ ಬದಲಾಗಬಲಿದೆ ಎಂದರು.

ಇದನ್ನೂ ಓದಿ: ತಾಪಂಗೆ ಬೇಕಿದೆ ಅನುದಾನ-ಅಧಿಕಾರ

ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮಾತನಾಡಿದರು. ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿ, ಕಾಲೇಜಿಗೆ ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆ ಮೊದಲಾದ ಅವಶ್ಯಕ ಬೇಡಿಕೆಗಳನ್ನು ಹಂತ ಹಂತವಾಗಿ

Advertisement

ಈಡೇರಿಸಲಾಗುತ್ತದೆ. ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರದ ಕಾಲೇಜುಗಳಲ್ಲಿ ಶೀಘ್ರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಪಂ ಸದಸ್ಯೆ ಶೋಭಾ ಮಾತನಾಡಿದರು. ತಹಶೀಲ್ದಾರ್‌ ಆಶಪ್ಪ ಪೂಜಾರ, ಕಾಲೇಜು ಕಮಿಟಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ,ಪ್ರಾಚಾರ್ಯ ಎಸ್‌.ಆರ್‌. ಚಿಗರಿ, ಎ.ಕೆ. ಬೆಲ್ಲದ, ಶಿವಪ್ಪ ಚಿಕ್ಕಣ್ಣವರ, ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಭೀಮಸಿಂಗ್‌ ರಾಠೊಡ್‌, ದೇವಪ್ಪ ಕಂಬಳಿ, ಪವನ ಮೇಟಿ ಮತ್ತಿತರರು ಇದ್ದರು. ಡಾ| ನಾಗರಾಜ ಹಾವಿನಾಳ ಸ್ವಾಗತಿಸಿದರು. ಡಾ| ವಾದಿರಾಜ ತಂಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಬಿ. ನಿರೂಪಿಸಿದರು. ಎಂ.ಎ. ನವಲಗುಂದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next