Advertisement

ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಸಿ

08:59 AM Mar 05, 2019 | Team Udayavani |

ಶಿರಸಿ: ಮಹಾತ್ವಾಕಾಂಕ್ಷೆ ಬೀಜವನ್ನು ಇಂದಿನ ವಿಶ್ವವಿದ್ಯಾಲಯಗಳು ಬಿತ್ತುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿಷಾದಿಸಿದರು. ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್‌ ಆವರಣದಲ್ಲಿ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ ಎಸ್‌ ಘಟಕದ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.

Advertisement

ಬೇರೆ ದೇಶದ ಪಠ್ಯಕ್ಕೂ ನಮ್ಮ ದೇಶದ ಪಠ್ಯಕ್ಕೂ ವ್ಯತ್ಯಾಸವಿದೆ. ಮಹಾತ್ವಾಕಾಂಕ್ಷೆ ಬದುಕನ್ನಿಟ್ಟು ಬದುಕುವವರು ತೀರಾ ಕಡಿಮೆ. ಬಯೋಟೆಕ್ನೋಲಜಿ ವಿಜನಿಗಿರುವ ಸ್ವಭಾವ ಬೆಳೆಸುವುದೇ ಕೌಶಲ್ಯ. ಅದನ್ನು ವಿಶ್ವವಿದ್ಯಾಲಯಗಳು ಬೆಳೆಸಬೇಕಿದೆ ಎಂದು ಸಲಹೆ ನೀಡಿದ ಹೆಗಡೆ, ಒಂದು ಹೊಸ ವಿಷಯ ಪ್ರಸ್ತುತಪಡಿಸಿದಾಗ ಜಗತ್ತು ಸ್ವಾಗತಿಸುತ್ತದೆ, ಸಂಘಟನೆ ಬೆಳೆಯುತ್ತದೆ. ಪ್ರಾಚೀನ ಕಾಲದ ಶಿಕ್ಷಣದಲ್ಲಿ ಪ್ರಶ್ನೆಯನ್ನು ಮಕ್ಕಳಿಗೆ ಕೇಳಲಾಗುತ್ತಿತ್ತು.

ಮಕ್ಕಳು ಅದನ್ನು ಬಿಡಿಸಿ, ಉತ್ತರ ಹುಡುಕಬೇಕಿತ್ತು. ಇದರಿಂದ ಉತ್ತರದ ಜೊತೆ ಉಳಿದ ವಿಷಯವೂ ಅರ್ಥವಾಗುತ್ತದೆ. ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಈಗ ಅನೇಕ ವಸ್ತು ನೀಡಿದ್ದೇವೆ. ಮುಂದಿನ ಪ್ರೋಗ್ರಾಮಿಂಗ್‌ ಕಲಿಸಲಾಗುತ್ತದೆ. ಒಂದು ವರ್ಷದಲ್ಲಿ ಇಂದಿನ ಇಂಜಿನಿಯರಿಂಗ್‌ ಶಿಕ್ಷಣಕ್ಕಿಂತ ಉತ್ತಮ ಸಾಧನೆ ಸಾಧ್ಯವಾಗುತ್ತದೆ. 8ರಿಂದ 10ನೇ ತರಗತಿಯ ಅವಧಿಯ ಶಿಕ್ಷಣ ತೀರಾ ಮುಖ್ಯವಾಗಿರುತ್ತದೆ ಎಂದರು.

ತಾಪಂ ಉಪಾಧ್ಯಕ್ಷ ಚಂದ್ರು ದೇವಾಡಿಗ, ತಾಪಂ ಸದಸ್ಯ ವಿನಾಯಕ ಹೆಗಡೆ, ಎಂ.ಬಿ. ದಳಪತಿ, ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ, ಎನ್‌ಎಸ್‌ಎಸ್‌ ಜಿಲ್ಲಾ ಸಮನ್ವಯಾಧಿಕಾರಿ ಜಿ.ಟಿ. ಭಟ್ಟ, ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜನಾರ್ದನ ಭಟ್‌, ಮಹಾಬಲೇಶ್ವರ ಹೆಗಡೆ, ವೆಂಕಟ್ರಮಣ ಹೆಗಡೆ, ಸತೀಶ ನಾಯ್ಕ, ರವಿ ಇತರರು ಇದ್ದರು. ಇದೇ ವೇಳೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಯಶೋಧಾ ನಾಯ್ಕ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next