Advertisement

ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರ ಹೇಳಿಕೊಡಿ

02:12 PM Nov 25, 2019 | Team Udayavani |

ಹಾವೇರಿ: ಜಗತ್ತಿನ ದೇವರ ಮನೆಯಾದ ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು. ವಿಭಿನ್ನ ಸಂಸ್ಕೃತಿಯ ಉಗಮಸ್ಥಾನವಾಗಿದೆ. ಸಂಸ್ಕಾರ ಸಂಸ್ಕೃತಿಯ ತವರೂರು ಎಂದು ಹಾವೇರಿಯ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

Advertisement

ನಗರದ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಛಟ್ಟಿ ಅಮವಾಸ್ಯೆ ನಿಮಿತ್ತ ಮೂರು ದಿನ ನಡೆಯುವ ಜಾತ್ರಾ ಮಹೋತ್ಸವದ ಮೊದಲ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅತೀ ಮುಖ್ಯವಾಗಿದೆ. ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹೇಳಿಕೊಡಬೇಕು ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಮಾತನಾಡಿ, ದೇವಸ್ಥಾನ ಹಮ್ಮಿಕೊಳುವ  ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಪುಷ್ಪಾ ಶೆಲವಡಿಮಠ, ಭಾರತಿ ಯಾವಗಲಮತ್ತು ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ದಿವ್ಯಾ ಹಿಂಚಿಗೇರಿ, ಪಲ್ಲವಿ ಹೋಳಗಿ ಅವರನ್ನು ಸನ್ಮಾನಿಸಿ ವಿವಿಧ ಶಾಲಾ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ವಿವಿಧ ಶಾಲಾ ಮಕ್ಕಳು ವಚನ ನೃತ್ಯ ಹಾಗೂ ಜನಪದ ನೃತ್ಯ ಪ್ರದರ್ಶನ ಮಾಡಿದರು. ಜ್ಞಾನಜ್ಯೋತಿ ಶಾಲಾ ಮಕ್ಕಳು ವಚನ ಪ್ರಾರ್ಥನೆ ಮಾಡಿದರು. ಮಲ್ಲಿಕಾ ಮಾಮಲೆಪಟ್ಟಣಶೆಟ್ಟಿ ಸ್ವಾಗತಿಸಿದರು.

ದಿವ್ಯಾ ಹಿಂಚಿಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ರಾಜಶೇಖರ ಮಾಗಾವಿ, ವಿಜಯಕುಮಾರ ಕೂಡ್ಲಪ್ಪನವರ, ಮುರಿಗೆಪ್ಪ ಕಡೇಕೊಪ್ಪ, ಶಿವಯೋಗಿ ಮಾಮಲೆಪಟ್ಟಣಶೆಟ್ಟರ, ವಿಶ್ವನಾಥ ಹಂದ್ರಾಳ, ಸುರೇಶಬಾಬು ಯಳಮಲ್ಲಿ, ಶಿವಯೋಗೆಪ್ಪ ವಾಲಿಶೆಟ್ಟರ, ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಬಸಪ್ಪ ಮುದ್ದಿ, ಸಿ.ಜಿ. ತೋಟಣ್ಣನವರ, ಚನ್ನಬಸವಣ್ಣ ರೊಡ್ಡನವರ, ಶಿವಯೋಗಿ ಮುದ್ದಿ, ಪಂಚಲಿಂಗಪ್ಪ ಹಂದ್ರಾಳ, ಕುಮಾರಸ್ವಾಮಿ ಹಿರೇಮಠ, ಗಿರಿಜಕ್ಕ ತಾಂಡೂರ, ಶಾಂತಕ್ಕ ಮಡಿವಾಳರ, ಶಿವಬಸಮ್ಮ ಲಕ್ಕಣ್ಣನವರ, ಸುಂದರಕ್ಕ ತುಪ್ಪದ, ಚಂಬಕ್ಕ ಯರೇಸಿಮಿ, ಗಂಗವ್ವ ನಂದಿವಾಡ ಹಾಗೂ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next