Advertisement

CAA ವಿರೋಧಿ ಹೋರಾಟಗಾರರ ಬೇಡಿಕೆಗಳಿಗೆ ಕೇಂದ್ರ ಸರಕಾರ ತುರ್ತಾಗಿ ಸ್ಪಂದಿಸುವ ಅಗತ್ಯವಿದೆಯೇ?

05:02 PM Dec 21, 2019 | keerthan |

ಮಣಿಪಾಲ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಬೇಡಿಕೆಗಳಿಗೆ ಕೇಂದ್ರ ಸರಕಾರ ತುರ್ತಾಗಿ ಸ್ಪಂದಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿವೆ.

Advertisement

ಭುವನೇಂದ್ರ ಶಿವಪುರ: ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧಿ ಹೋರಾಟಗಾರರ ಬೇಡಿಕೆಗಳಿಗೆ ಯಾವುದೇ ಕಾರಣಕ್ಕೂ ತುರ್ತಾಗಿ ಸ್ಪಂದಿಸುವ ಅಗತ್ಯವೇ ಇಲ್ಲ, ಆದರೆ ಅದರ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಹಾಗೂ ಅರಿತವರು ಆಯೋಜಿಸುವ ಅಗತ್ಯ ಇದೆ. ಈ ಕಾಯಿದೆಯ ಬಗ್ಗೆ ತಿಳಿದುಕೊಳ್ಳದೇ ಅದರ ಬಗ್ಗೆ ಗಲಭೆ ಎಬ್ಬಿಸುವುದು ಅಸಮಂಜಸ

ಸತ್ಯನಾರಯಣ ಬಾಲು: “ ಗಲಭೆ ಮಾಡುತ್ತಿರುವವರು ಮುಸ್ಲಿಂ ಬಾಂಧವರು, ಇನ್ನೂ ಹತ್ತು ವರ್ಷಗಳ ನಂತರ ಇನ್ನೇನು ಆಗಬಹುದು , ಯೋಚಿಸಿ .

ನಾರಾಯಣ ದೇವಾಡಿಗ: ಯಾವ ಕಾರಣಕ್ಕೂ ಕೇಂದ್ರ ಸರಕಾರ ಸ್ಪಂದಿಸುವ ಅಗತ್ಯವಿಲ್ಲ. ದೇಶದಲ್ಲಿ ನ್ಯಾಯಂಗ ಅನ್ನುವ ವ್ಯವಸ್ಥೆ ಇದೆ. ಅಲ್ಲಿ ಈಗಾಗಲೇ ಇದರ ವಿರುದ್ಧವಾಗಿ ಅರ್ಜಿಯನ್ನ ಹಾಕಿದ್ದಾರೆ. ಆದರೂ ಕೆಲವರು ಪ್ರತಿಭಟನೆಯ ಹೆಸರಿನಲ್ಲಿ ವಿದ್ವಂಸಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿಯ ಹೆಸರಿಗೆ ಮಸಿ ಬಳೆಯಲು ಪ್ರಯತ್ನ ನಿರಂತರವಾಗಿ ಮಾಡುತ್ತಾ ಬಂದಿದೆ. ಇದು ಹೊಸತೆನಲ್ಲ. ಇದು ಕೇಂದ್ರ ಸರ್ಕಾರಕ್ಕೂ ಸಹ ಗೊತ್ತಿರುವ ವಿಷಯ. ನಾಲ್ಕು ದಿನ ಸ್ವಲ್ಪ ಹೋರಾಟ, ಚೀರಾಟ ಸರ್ವೆಸಾಮನ್ಯ. ಯಾರಾದರೂ ಒಂದೆರಡು ದಿನ ಕಲ್ಲು ಹೊಡೆಯಲು ಹಣ ಕೊಡಬಹುದು. ನಂತರ ಅವರು ಸಹ ಕೊಡಲ್ಲ. ದೇಶಕ್ಕಿಂತ ಯಾವ ಧರ್ಮವು ದೊಡ್ಡದಲ್ಲ. ದೇಶಕ್ಕಿಂತ ಯಾರೂ ದೊಡ್ಡವರೂ ಅಲ್ಲ.

ಎಸ್ ಪದ್ಮನಾಭ ಹೆಬ್ಬಾರ್: ಬೇರೆ ದೇಶದವರೆಲ್ಲಾ ಕೋಟ್ಯಾಂತರ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಬಂದು ನೆಲೆಸುವುದಾದರೆ ಕುಟುಂಬ ಯೋಜನೆ ಕಾರ್ಯಕ್ರಮ ಯಾಕೆ ಬೇಕು?. ನಮ್ಮ ಆಸ್ತಿಯೆಲ್ಲಾ ಅವರ ಪಾಲಾಗುವ ದಿನ ದೂರವಿಲ್ಲ.ಈ ಕಾನೂನಿನಿಂದ ಇನ್ನು ಮುಂದೆಯಾದರೂ ವಿದೇಶೀಯರು ಬರುವುದಾದರೂ ನಿಲ್ಲಲಿ ಎಂದು ಆಶಿಸೋಣ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next