Advertisement

ಉಪಮುಖ್ಯಮಂತ್ರಿ ಹುದ್ದೆ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆಯೇ? ಹೆಚ್ಚಿನ ಅಭಿವೃದ್ಧಿ ಸಾಧ್ಯವೇ?

05:06 PM Dec 17, 2019 | keerthan |

ಮಣಿಪಾಲ: ಉಪ ಮುಖ್ಯಮಂತ್ರಿ ಹುದ್ದೆ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆಯೇ? ಇದರಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಇಲ್ಲಿದೆ.

Advertisement

ಹನುಮಂತ ರಾವ್ ಡಿಎಸ್,: ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಾದರೆ ಅದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಲ್ಲ . ಯಾರದೋ ಅಧಿಕಾರ ದಾಹವನ್ನು ತೀರಿಸಲು ಅಥವಾ ಅಂತಹವರು ಮಾರಾಟದ ಆಪರೇಷನ್ ಗೆ ಒಳಗಾಗುವುದನ್ನು ತಪ್ಪಿಸಲು ಮಾತ್ರ . ಮತದಾರ ಗೆಲ್ಲಿಸಿರುವುದು ಶಾಸಕ ಸ್ಥಾನಕ್ಕೆ ಮಾತ್ರ . ಆ ಕೆಲಸವನ್ನು ಮಾಡಿಕೊಂಡು ಹೋಗಲಿ , ಸಾಕು.

ಗಿರಿ ಕೋಟ್ಯಾನ್: ಉಪ ಮಖ್ಯ ಮಂತ್ರಿಯ ಹುದ್ದೆಯ ಆವಶ್ಯಕತೆ ಇಲ್ಲ. ಸರಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿ.

ಮಹದೇವ ಗೌಡ: ಉಪಮುಖ್ಯಮಂತ್ರಿಗೂ ಅಭಿವೃದ್ದಿಗೂ ಸಂಭಂದವಿಲ್ಲವೆನೋ. ಉಪಚುನಾವಣೆಗೂ ಮುನ್ನ ಮುಖ್ಯಮಂತ್ರಿಗಳನ್ನ ಮಾಡಿದ್ದು ತಪ್ಪೆನೋ. ಕೊಟ್ಟರೆ 5 ಉ.ಮು.ಕೊಡಬೇಕು ಸಮಾಜೀಕ ನಾದಡಿಯಲ್ಲಿ ಇಲ್ಲವೆ ಮುಖ್ಯಮಂತ್ರಿ ಹುಯನ್ನೆ ರದ್ದು ಮಾಡಬೆಕೆನೋ

ಕಿರುಗುಂದ ನಜೀರ್; ಉಪ ಮುಖ್ಯಮಂತ್ರಿ ಅಗತ್ಯ ಇಲ್ಲ,ಒಂದು ವೇಳೆ ಕೊಡಬೇಕೆಂದು ಇದ್ದರೇ ಒಬ್ಬರಿಗೆ ಮಾತ್ರ ಕೊಡಬೇಕು,ಮೂರು,ನಾಲ್ಕು ಜನರೀಗೆ ಕೊಡುವ ಬದಲು ಎಲ್ಲಾ ಮಂತ್ರಿಗಳಿಗೆ ಕೊಡುವುದು ಒಳ್ಳೇಯದ್ದು.

Advertisement

ಸಣ್ಣಮಾರಪ್ಪ. ಚಂಗಾವರ; ಪಕ್ಷದ ಉಳಿವಿಗಾಗಿ ಇಂತಹ ಹುದ್ದೆಗಳನ್ನು ಹೆಚ್ಚಿಸುತ್ತ ಹೋದರೆ ಸಾರ್ವಜನಿಕರ ಹಣ ವ್ಯರ್ಥವಾದಂತೆ. ಹುದ್ದೆಗೆ ತಕ್ಕಂತೆ ಸರ್ಕಾರದ ಸೌಲಭ್ಯಗಳನ್ನು ಎಲ್ಲರಿಗೂ ಸಮಾನವಾಗಿ ಕೊಡಬೇಕಾಗುತ್ತದೆ. ಮುಂದೊಂದು ದಿನ ಮುಖ್ಯಮಂತ್ರಿಯ ಹುದ್ದೆಗೂ ಪೈಪೋಟಿ ಹೆಚ್ಚಿ ಇದೆ ಸಂಪ್ರದಾಯ ಮುಂದುವರೆಯಬಹುದು.

ಶಿವು ಬಿ: ಜಿಲ್ಲೆಗೊಬ್ಬನಂತೆ ಅಯಾಯಾ ಜಿಲ್ಲೆಯಲ್ಲಿ ಗೆದ್ದ ಶಾಸಕನಿಗೆ ಉಪಮುಖ್ಯ ಮಂತ್ರಿ ಮಾಡಿ ಇನ್ನೂ ಸೋತ ಅಭ್ಯರ್ಥಿಗೆ ಯಾವುದಾದ್ರು ನಿಗಮ ಮಂಡಳಿ ಅಧ್ಯಕ್ಷನಾಗಿ ಮಾಡಿ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next