ನವದೆಹಲಿ : ಇಂದು ನಮಗೆಲ್ಲ ಚಹಾ/ಟೀ ಜೀವನದ ಒಂದು ಭಾಗವೇ ಆಗಿದೆ. ಟೀ ಇಲ್ಲದೆ ನಾನಿಲ್ಲ ಎಂಬುವವರು ಎಷ್ಟೋ ಜನ ಇದ್ದಾರೆ. ಇನ್ನು ಕೆಲವರು ದಿನಕ್ಕೆ ಹತ್ತಾರು ಬಾರಿ ಚಹಾ ಹೀರುವವರೂ ಇದ್ದಾರೆ.
ಹಾಗಾದ್ರೆ ಇಂತಹ ಟೀ ಬೆಲೆಯ ಬಗ್ಗೆ ನಿಮಗೆ ಕೇಳಿದ್ರೆ, ಸಾಮಾನ್ಯವಾಗಿ ನೀವು ಹೇಳುವುದು 5 ರೂ. ಅಥವಾ 10ರೂ. ಇನ್ನೂ ಕೆಲವು ಸ್ಟಾರ್ ಹೋಟೆಲ್‍ಗಳಲ್ಲಿ ಒಂಚೂರು ಜಾಸ್ತಿ ಇದ್ದು, 100 ರೂ.ಗೆ ಮಾರಬಹುದು. ಆದ್ರೆ ಇಲ್ಲೊಂದು ಟೀ ಸ್ಟಾಲ್ ಇದೆ. ಅಲ್ಲಿನ ಟೀ ಬೆಲೆ ಕೇಳಿದ್ರೆ ನಿಜಕ್ಕೂ ನೀವು ಬೆಚ್ಚಿ ಬೀಳ್ತೀರಿ.. ಹಾಗಾಗ್ರೆ ಆ ಟೀ ಸ್ಟಾಲ್ ಯಾವುದು ಅಂದ್ರಾ.. ಮುಂದೆ ಓದಿ..
ಹೌದು ಕೊಲ್ಕತ್ತಾದಲ್ಲಿನ ಮುಕುಂದಪುರದ ನಿಜಶ್ ಟೀ ಅಂಡಿಯಲ್ಲಿ ಒಂದು ಕಪ್ ಟೀ ಬೆಲೆ ಬರೋಬ್ಬರಿ 1000 ರೂ. ಇಲ್ಲಿ ನಿಮಗೆ 12 ರೂ ಇಂದ 1000 ರೂವರೆಗಿನ ಚಹಾಗಳು ಸಿಗುತ್ತವೆ. ಹಾಗಾದ್ರೆ ಈ ಹೋಟೆಲ್ ಮಾಲೀಕ ಯಾರು ಗೊತ್ತಾ? ಅವರೇ ಪಾರ್ಥ ಪ್ರತಿಮ್ ಗಂಗೂಲಿ.
ಇಲ್ಲಿನ ಟೀಗಳಲ್ಲಿ ಅತೀ ದುಬಾರಿಯಾದ ಟೀ ಅಂದ್ರೆ ಬೋ-ಲಿಯೋ. ಈ ಚಹಾದ ಒಂದು ಕಪ್‍ಗೆ 1000ರೂ. ಇನ್ನು ಈ ಬೋ-ಲಿಯೋ ಟೀ ಸೊಪ್ಪಿನ ಒಂದು ಕೆಜಿಗೆ ಬರೋಬ್ಬರಿ 3 ಲಕ್ಷ ರೂಪಾಯಿಯಂತೆ. ಗಂಗೂಲಿಯ ಟೀ ಸ್ಟಾಲ್‍ನಲ್ಲಿ ಸಿಲ್ವರ್ ಸ್ಯೂ ವೈಟ್, ಬ್ಲೂ ಟಿಸಾನೆ, ಲೆವೆಂಡರ್, ಹಿಬಿಸ್ಕಾಸ್, ವೈನ್ ಟೀ ಸೇರಿದಂತೆ ಹತ್ತಾರು ಬಗೆಯ ಟೀಗಳನ್ನು ಮಾರಾಟ ಮಾಡಲಾಗುತ್ತದೆ.
ವಿಶೇಷ ಅಂದ್ರೆ ಈ ಅಂಗಡಿ ಮಾಲೀಕ ಗಂಗೂಲಿ ಮೊದಲು ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ನಂತರದ ದಿನಗಳಲ್ಲಿ ನಾನ್ಯಾಕೆ ಒಂದು ವ್ಯಪಾರ ಶುರು ಮಾಡಬಾರದು ಎಂಬ ಯೋಚನೆ ಬಂದಾಗ ಹೊಳೆದದ್ದೇ ಈ ಟೀ ಸ್ಟಾಲ್ ಐಡಿಯಾ. ಇಂದು ಕೊಲ್ಕತ್ತಾದ ಫೇಮಸ್ ಟೀ ಅಂಗಡಿಗಳಲ್ಲಿ ಗಂಗೂಲಿಯ ನಿಜಶ್ ಟೀ ಕೂಡ ಒಂದು.