Advertisement

ಟೀ ಮಾರುವ ಹುಡುಗಿಗೆ ಶೇ.90 ಅಂಕ

08:10 AM Jul 21, 2020 | Suhan S |

ಕೋಲಾರ: ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಬಡತನದಲ್ಲಿ ಅರಳಿದ ಪ್ರತಿಭೆ ಭೂಮಿಕಾ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90 ಅಂಕ ಗಳಿಸಿ, ಸಾಧನೆ ಮಾಡಿದ್ದಾಳೆ.

Advertisement

ನಗರದ ವಾರ್ತಾ ಇಲಾಖೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಟೀ, ಕಾಫಿ, ಬೊಂಡ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುವ ಪ್ರಭಾಕರ್‌, ರತ್ನಮ್ಮ ದಂಪತಿ ಪುತ್ರಿಯೇ ಈ  ಭೂಮಿಕಾ. ನಗರದ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ಪ್ರತಿಭಾನ್ವಿತೆ ಕನ್ನಡದಲ್ಲಿ 85, ಇಂಗ್ಲಿಷ್‌ 90, ಭೌತಶಾಸ್ತ್ರ 93, ರಸಾಯನಶಾಸ್ತ್ರ 85, ಗಣಿತ 95 ಮತ್ತು ಜೀವಶಾಸ್ತ್ರದಲ್ಲಿ 92 ಅಂಕ ಸೇರಿದಂತೆ 540 ಅಂಕ ಗಳಿಸಿದ್ದಾಳೆ.

ಮನೆಯಲ್ಲೇ ಓದು: ಬಡತನ ಕಾರಣದಿಂದ ಟ್ಯೂಷನ್‌ಗೆ ಹೋಗದೆ ಉಪನ್ಯಾಸಕರ ಪ್ರವಚನ ಮತ್ತು ಪಠ್ಯ ಪುಸ್ತಕ ಅಭ್ಯಾಸದಿಂದಲೇ ಸಾಧನೆ ಮೆರೆದಿದ್ದಾರೆ. ಸಿಇಟಿ ಮತ್ತು ನೀಟ್‌ಗೆ ಸಿದ್ಧಳಾಗುತ್ತಿರುವ ಭೂಮಿಕಾಗೆ ವೈದ್ಯಳಾಗುವ ಕನಸಿದ್ದು, ಸರ್ಕಾರಿ ಸೀಟನ್ನು ಪಡದೇ ತೀರುವುದಾಗಿ ಸ್ಪಷ್ಟವಾಗಿ ಹೇಳುತ್ತಾಳೆ. ಪ್ರತಿಭೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ದಾನಿಗಳು ಮೊ. 9916823308 ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next