ನಿಮಗೆ ಚಹಾದೊಂದಿಗೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ ಹಾಗಾದರೆ ಅದಷ್ಟು ಬೇಗೆ ಹೊಟ್ಟೆ ಹಾಗೂ ಗಂಟಲಿಗೆ ಸಂಬಂಧಿಸಿದ ಡಾಕ್ಟರನ್ನು ಭೇಟಿ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಏಕೆಂದರೆ ಈ ಚಟದಿಂದ ಕ್ಯಾನ್ಸರ್‌ಗಿಂತ 5 ಪಟ್ಟು ಹೆಚ್ಚು ಅಪಾಯಕಾರಿ ಖಾಯಿಲೆ ನಿಮ್ಮನ್ನು ಆವರಿಸಿಕೊಳ್ಳಲಿದೆ ಎಂದು ಸಮೀಕ್ಷೆಯ ವರದಿಯೊಂದು ತಿಳಿಸಿದೆ.
ಹಾಗಾಗಿ ಧೂಮಪಾನ ಮಾಡುವಾಗ ಒಂದು ಕಪ್ ಚಹಾ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಪಾಲಿಸಿಯನ್ನು ಅಳವಡಿಸಿಕೊಂಡಿರುವವರು ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಅನ್ನಿಸುತ್ತದೆ.
ಧೂಮಪಾನದಿಂದ ಕ್ಯಾನ್ಸರ್ ರೋಗ ಬರುತ್ತದೆ ಎಂಬುದು ಜಗಜಾಹೀರು ವಿಷಯವಾದರೂ ನಮ್ಮಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಆದರೆ ಚಹಾದೊಂದಿಗೆ ಸಿಗರೇಟ್, ಬೀಡಿ ಸೇವನೆಯಿಂದ ಗಂಟಲು ಮತ್ತು ಹೊಟ್ಟೆ ಭಾಗಗಳಿಗೆ ಅಧಿಕ ಮಟ್ಟದಲ್ಲಿ ಹಾನಿಯಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಅಭ್ಯಾಸದಿಂದ ಎಸೊÕಫೆಗಲ್ ಎಂಬ ಕ್ಯಾನ್ಸರ್ ಬಹುಬೇಗನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಧಮ್ ಹಾಗೂ ಟೀ ಕಾಂಬಿನೇಷನ್ ಎಸೊÕಫೆಗಲ್ ಕ್ಯಾನ್ಸರ್ ಅಪಾಯವನ್ನು ಐದು ಪಟ್ಟು ಹೆಚ್ಚಿಸುತ್ತದೆ ಎನ್ನುತ್ತಿದೆ ಈ ಅಧ್ಯಯನ.
ಇನ್ನೂ ಈ ಸಂಶೋಧನೆಯನ್ನು ವಾಷಿಂಗ್ಟನ್ ಮೂಲದ ರಿಸರ್ಚ್ ಸೆಂಟರ್ ನಡೆಸಿದ್ದು, ಸಮೀಕ್ಷೆಗೆ ವ್ಯಸನಿಗಳನ್ನು ಒಳಪಡಿಸಿದೆ. ಈ ಸಂದರ್ಭ ಅವರ ಆರೋಗ್ಯ ತಪಾಸಣೆಯನ್ನು ನಡೆಸಿದ್ದು, ಚಹಾದೊಂದಿಗೆ ಧೂಮಪಾನ ಮಾಡುವುದರಿಂದ ಎಸೊÕಫೆಗಲ್ ಕ್ಯಾನ್ಸರ್ ಬರುತ್ತದೆ ಎಂಬ ವಿಷಯವನ್ನು ಕಂಡು ಕೊಂಡಿದೆ.