Advertisement

ಗಮನ ಸೆಳೆಯುತ್ತಿರುವ ಚಹಾ,ಕಾಫಿ ಬೂತ್‌

10:12 PM Feb 19, 2020 | Sriram |

ವಿದ್ಯಾನಗರ:ನಿದ್ದೆಗೆಟ್ಟು ವಾಹನ ಚಲಾಯಿಸುವ ಚಾಲಕರಿಗೆ ಸಹಾಯಕವಾಗುವ ಮತ್ತು ನಿದ್ದೆಯ ಮಂಪರಿನಿಂದ ಉಂಟಾಗುವ ಅಪಘಾತ ಸಾಧ್ಯತೆಗಳನ್ನು ದೂರೀಕರಿಸುವ ಉದ್ದೇಶದಿಂದ ವಿದ್ಯಾನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿದ್ಯಾನಗರದಲ್ಲಿ ಎನ್‌.ಜಿ.ಕೆ.ಸ್ಮಾರಕ ಸಹಕಾರಿ ಪ್ರಸ್‌ ಸ್ಥಾಪಿಸಿದ ಚಹಾ ಮತ್ತು ಕಾಫಿ ಬೂತ್‌ ಎಲ್ಲರ ಗಮನ ಸೆಳೆಯುತ್ತಿದೆ.

Advertisement

ನೀರು, ಕಪ್ಪು ಚಹಾ ಹಾಗೂ ಕಾಫಿ ಸ್ವಯಂ ಚಾಲಿತ ಬೂತ್‌ ಇದಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಸಚಿವ ಎ.ಕೆ.ಶಶೀಂದ್ರನ್‌ ರಾತ್ರಿ ಸಂಚರಿಸುವ ವಾಹನ ಚಾಲಕರಿಗೆ ಉಚಿತವಾಗಿ ಚಹಾ ಹಾಗೂ ಕಾಫಿ ಮತ್ತು ದಿನದ 24 ಗಂಟೆಯೂ ಉಚಿತ ಕುಡಿಯುವ ಶುದ್ಧಜಲ ಲಭ್ಯವಾಗುವಂತೆ ಮಾಡಿದ ಸಹಕಾರಿ ಸಂಸ್ಥೆಯ ಕಾರ್ಯ ಮಾದರಿಯಾಗಿದೆ ಎಂದು ಅಭಿನಂದಿಸಿದರು.

ಬೂತ್‌ನ ಉದ್ಘಾಟನೆಯನ್ನು ನಿರ್ವಹಿಸಿದ ಕಾಸರಗೋಡು ಜಿಲ್ಲಾಕಾರಿ ಡಾ.ಡಿ.ಸಜಿತ್‌ಬಾಬು ರಾತ್ರಿ ವಾಹನ ಚಲಾಯಿಸುವವರಿಗೆ ನೆರವಾಗುವಂತೆ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಬೇರೆ ಬೇರೆ ಕಡೆಗಳಲ್ಲಿ ಇಂತಹ ಬೂತ್‌ಗಳನ್ನು ಸ್ಥಾಪಿಸುವ ಬಗ್ಗೆ ಆಲೋಚಿಸುವುದಾಗಿ ಹೇಳಿದರು.

ಸಿ.ಎಚ್‌.ಕುಂಞಂಬು ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಟಿ.ಕೆ.ರಾಜನ್‌, ನಗರಸಭೆಯ ಕೌನ್ಸಿಲರ್‌ ಎ.ಸವಿತಾ, ಸಹಕಾರಿ ಸಂಘದ ಸಹಾಯಕ ರಿಜಿಸ್ತ್ರಾ†ರ್‌ಗಳಾದ ಕೆ.ಮುರಳೀಧರನ್‌, ಕೆ.ಜಯಚಂದ್ರನ್‌, ಟ್ರಾಫಿಕ್‌ ಎಸ್‌ಐ ಎಂ.ನಳಿನಾಕ್ಷನ್‌, ವಿವಿಧ ಕಾರ್ಮಿಕ ಸಂಘಟನೆಗಳ ನೇತಾರರು ಶುಭಾಶಂಸನೆಗೆದರು.ವಿದ್ಯಾನಗರ ಪೆಟ್ರೋಲ್‌ ಪಂಪ್‌ನ ಮುಂಭಾಗದಲ್ಲಿರುವ ಬಸ್ಸು ನಿಲ್ದಾಣದ ಸಮೀಪ ಬೂತ್‌ ಸ್ಥಾಪಿಸಲಾಗಿದ್ದು ರಾತ್ರಿ 11ರಿಂದ ಬೆಳಗ್ಗಿನ ಜಾವ 5ರ ತನಕ ಈ ಸೇವೆ ಲಭ್ಯವಿದೆ. ಒಂದು ಲಕ್ಷ ಮೊತ್ತ ವ್ಯಯಿಸಿ ಸ್ಥಾಪಿಸಿದ ಈ ಬೂತ್‌ ರಾತ್ರಿ ಕಾಲದಲ್ಲಿ ಚಾಲಕರ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next