Advertisement

‘ರಸ್ತೆ ವಿಸ್ತರಣೆಗೆ ಜಾಗ ನೀಡಿದವರಿಗೆ ಟಿಡಿಆರ್‌’

12:44 PM Oct 30, 2017 | Team Udayavani |

ಕೊಟ್ಟಾರ ಚೌಕಿ: ಮೂಲ ಸೌಕರ್ಯ ಪ್ರತಿಯೊಬ್ಬರಿಗೂ ಆವಶ್ಯಕವಾಗಿದ್ದು, ಪಾಲಿಕೆಯ ಜತೆ ಜನರೂ ಕೈ ಜೋಡಿಸಿದಲ್ಲಿ ಅದನ್ನು ಸುಲಭವಾಗಿ ಸಾಧಿಸಬಹುದು ಎಂದು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ ಹೇಳಿದರು.

Advertisement

ಕೊಟ್ಟಾರಚೌಕಿ ಮಾಲೆಮಾರ್‌ ಅಯ್ಯಪ್ಪ ಗುಡಿ ಮುಂಭಾಗದ ಕಾಲನಿಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್‌, ಒಳಚರಂಡಿ ಮತ್ತಿತರ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಟಿಡಿಆರ್‌ ನೀಡಲಾಗಿದೆ. ಈ
ವ್ಯವಸ್ಥೆಯಲ್ಲಿ ಪಾಲಿಕೆಯ ಅನುಮತಿಯೊಂದಿಗೆ 400ರಿಂದ 800 ಚದರ ಅಡಿವರೆಗೆ ಕೊಠಡಿ ಮತ್ತಿತರ ವ್ಯವಸ್ಥೆ ನಿರ್ಮಿಸಲು ಇದರಿಂದ ಸಾಧ್ಯವಿದೆ. ಇತರರಿಗೂ ಪರಭಾರೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಶುಚಿತ್ವ ಕಾಪಾಡಿ
ಒಂದು ಕಾಲದಲ್ಲಿ ಮಾಲೆಮಾರ್‌ ಮೂಲ ಸೌಕರ್ಯವಿಲ್ಲದೆ ನೆರೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಪ್ರದೇಶವಾಗಿತ್ತು. ಈಗ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾನಗರ ಪಾಲಿಕೆ ಶುಚಿತ್ವ ಕಾಪಾಡಲು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಮನೆ ಮನೆ ತ್ಯಾಜ್ಯ ಸಂಗ್ರಹ ಮಾಡಿ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಬಡಾವಣೆಯ ರಸ್ತೆ ಪಕ್ಕ ಹಾಗೂ ಖಾಲಿ ಜಾಗಗಳಲ್ಲಿ ಕಸ ಎಸೆಯದೆ, ಶುಚಿತ್ವ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಮ್ಮಾನ
ಕಾರ್ಪೊರೇಟರ್‌ ಶಶಿಧರ್‌ ಹೆಗ್ಡೆ, ಭೂಮಿ ಬಿಟ್ಟು ಸಹಕರಿಸಿದ ಪಾರ್ವತಿ, ಚಂದ್ರಾವತಿ, ಹಿರಿಯ ಕಾರ್ಯಕರ್ತ ಲೋಕನಾಥ್‌, ಅರುಣ್‌ ಕುಮಾರ್‌, ಮೈಕಲ್‌ ಅವರನ್ನು ಸಮ್ಮಾನಿಸಲಾಯಿತು. ಮುಖಂಡರಾದ ಶಕುಂತಳಾ ಕಾಮತ್‌, ಶೇಖರ್‌ ಶೆಟ್ಟಿ, ಲ್ಯಾನ್ಸಿ ಮೊಂತೆರೋ, ಆಶಾ ಶೆಟ್ಟಿ, ದಿನೇಶ್‌ ಕೋಡಿಕಲ್‌ ಮತ್ತಿತರರು ಉಪಸ್ಥಿತರಿದ್ದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಮಾಲೆಮಾರ್‌ – ಆಕಾಶ ಭವನ ರಸ್ತೆಗೆ ಡಾಮರು
ಮುಂದಿನ ಹಂತದಲ್ಲಿ ಮಾಲೆಮಾರ್‌ ಆಕಾಶ ಭವನ ರಸ್ತೆಗೆ ಡಾಮರು ಕಾಮಗಾರಿಗೆ ಯೋಜನೆ ರೂಪಿಸಿದ್ದು, ಅಂದಾಜು 30 ಲಕ್ಷ ರೂ. ವೆಚ್ಚ ತಗುಲಲಿದೆ. ಮುಂದಿನ ವರ್ಷ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಶಿಧರ ಹೆಗ್ಡೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next