Advertisement

ಭೂತಭಯ ತೊಲಗಿಸಲು ಶ್ಮಶಾನದಲ್ಲೇ 3 ರಾತ್ರಿ ಮಲಗಿ ಹೀರೋ ಆದ TDP ಶಾಸಕ

12:04 PM Jun 26, 2018 | udayavani editorial |

ಹೈದರಾಬಾದ್‌ : ಮೂಢನಂಬಿಕೆಯ ವಿರುದ್ಧದ ಹೋರಾಟದಲ್ಲಿ  ಧೈರ್ಯ, ಸಾಹಸ ತೋರಿರುವ ಪಶ್ಚಿಮ ಗೋದಾವರಿಯ ತೆಲುಗು ದೇಶಂ ಪಕ್ಷದ ಶಾಸಕ ನಿಮ್ಮಲ ರಾಮ ನಾಯ್ಡು ಅವರು ರಾತೋರಾತ್ರಿ ಹೀರೋ ಆಗಿ ಖ್ಯಾತಿ ಗಳಿಸಿದ್ದಾರೆ; ಹಿರಿಯ ರಾಜಕಾರಣಿಗಳ ಶಹಬ್ಟಾಸ್‌ಗಿರಿಗೆ ಪಾತ್ರರಾಗಿದ್ದಾರೆ. 

Advertisement

ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡು ಅವರು ತಮ್ಮ ಊರಿನ ರುದ್ರಭೂಮಿಯೊಂದರ ಕಟ್ಟಡವನ್ನು ನವೀಕರಿಸಲು ಬಯಸಿದ್ದರು. ಆದರೆ ಊರಿನ ಯಾರೊಬ್ಬರು ಈ ನವೀಕರಣ ಕಾಮಗಾರಿಗೆ ಬರಲು ಸಿದ್ಧರಿರಲ್ಲ. ರುದ್ರಭೂಮಿಯಲ್ಲಿ ಭೂತ ಪ್ರೇತಗಳು ಇರುತ್ತವೆ ಎಂಬ ಭಯವೇ ಇದಕ್ಕೆ ಕಾರಣವಾಗಿತ್ತು. 

ಜನರ ಮನದಲ್ಲಿ ಆಳವಾಗಿ ಬೇರೂರಿದ್ದ  ಈ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡು ಅವರು ಜೂನ್‌ 22ರಿಂದ ನಿರಂತರ ಮೂರು ದಿನಗಳ ಕಾಲ ರಾತ್ರಿ ವೇಳೆ ಶ್ಮಶಾನದಲ್ಲೇ ಮಲಗಿದರು.  ಆ ಮೂಲಕ ಶ್ಮಶಾನದ ಒಳಗಾಗಲೀ ಹೊರಗಾಗಲೀ ಭೂತ ಪ್ರೇತಗಳು ಇಲ್ಲವೇ ಇಲ್ಲ ಎಂಬುದನ್ನು ಶಾಸಕ ನಾಯ್ಡು ಜನರಿಗೆ ಮನವರಿಕೆ ಮಾಡುವಲ್ಲಿ ಸಫ‌ಲರಾದರು. 

ಪಶ್ಚಿಮ ಗೋದಾವರಿಯ ಪಲಕೋಳೆ ಪಟ್ಟಣದ ರುದ್ರಭೂಮಿಯಲ್ಲಿ ತೀವ್ರ ನುಸಿ ಕಾಟ ಇದ್ದ  ಹೊರತಾಗಿಯೂ ಶಾಸಕ ನಾಯ್ಡು ಅವರು ಮುಕ್ತ ಬಯಲಲ್ಲಿ, ಆಗಸದಡಿ, ಕೇವಲ ಫೋಲ್ಡಿಂಗ್‌ ಕಾಟ್‌ ಬಳಿಸಿ,  ಮೂರು ರಾತ್ರಿ ನಿದ್ದೆ ಮಾಡಿರುವುದು ಒಂದು ಸಾಧನೆಯೇ ಎಂದು ಜನರಿಗೆ, ಹಿರಿಯ ರಾಜಕಾರಣಿಗಳಿಗೆ ಅನ್ನಿಸಿತು. ನಾಯ್ಡು ಅವರ ಈ ಸಾಹಸದಿಂದ ಜನರಿಗೆ ರುದ್ರಭೂಮಿಯಲ್ಲಿ ಯಾವುದೇ ಭೂತ ಪ್ರೇತ ಇಲ್ಲವೆಂಬುದು ಮನದಟ್ಟಾಯಿತು. ಅಂದ ಹಾಗೆ ನಾಯ್ಡು ಮೊದಲ ಬಾರಿಗೆ ಶಾಸಕರಾಗಿರುವ ಟಿಡಿಪಿ ನಾಯಕ. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಾಸಕ ನಾಯ್ಡು ಅವರು ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟವನ್ನು ಪ್ರಶಂಸಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next