ನವದೆಹಲಿ: ವರ್ಕ್ ಫ್ರಂ ಹೋಂ ಮತ್ತು ವರ್ಕ್ ಫ್ರಂ ಆಫೀಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಯು ಹೊಸದೊಂದು ವಿಧಾನವನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ.
25*25 ಮಾಡೆಲ್ ಪರಿಚಯಿಸಲು ಮುಂದಾಗಿದ್ದು, 2025ರೊಳಗೆ ಕೇವಲ ಶೇ. 25 ಸಿಬ್ಬಂದಿಗೆ ಮಾತ್ರವೇ ಆಫೀಸಿನಿಂದ ಕೆಲಸ ಮಾಡಿಸುವಂತೆ ಹೇಳಿದೆ.
ದೇಶ – ವಿದೇಶಗಳಲ್ಲಿರುವ ಟಿಸಿಎಸ್ ಕಚೇರಿಗಳಲ್ಲಿ ಒಟ್ಟು 5 ಲಕ್ಷದಷ್ಟು ಸಿಬ್ಬಂದಿಯಿದ್ದಾರೆ. ಅವರಲ್ಲಿ ಕೇವಲ ಶೇ. 25 ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಕೆಲಸ ಮಾಡಿಸಲಾಗುವುದು. ಕಚೇರಿಗೆ ಬಂದು ಕೆಲಸ ಮಾಡುವವರು ಕೆಲಸದ ಅವಧಿಯ ಶೇ. 25ರಷ್ಟು ಮಾತ್ರ ಕೆಲಸ ಮಾಡಿದರೆ ಸಾಕು ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:ವಿಧಾನಸಭೆಯಲ್ಲಿ ಭಾಷಣ ಮಾಡುವಾಗ ಜಾರಿದ ಸಿದ್ದರಾಮಯ್ಯ ಪಂಚೆ
ಈ ಮೂಲಕ 2025ರೊಳಗೆ ಕೇವಲ 1.12 ಲಕ್ಷ ಸಿಬ್ಬಂದಿ ಮಾತ್ರ ಕಚೇರಿಗೆ ಬರಲಿದ್ದು, ಉಳಿದವರಿಗೆ ಶಾಶ್ವತ ವರ್ಕ್ ಫ್ರಂ ಹೋಂ ಅವಕಾಶ ಕೊಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ.