Advertisement

TCS: ನೇಮಕಾತಿ ಹಗರಣ- 16 ಉದ್ಯೋಗಿಗಳ ವಜಾ

08:40 PM Oct 16, 2023 | Pranav MS |

ನವದೆಹಲಿ: ದೇಶದ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ನೇಮಕಾತಿ ಹಗರಣದಲ್ಲಿ ಸಂಸ್ಥೆಯ ಕೆಲ ಉದ್ಯೋಗಿಗಳ ಕೈವಾಡವಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ 16 ಮಂದಿಯನ್ನು ವಜಾಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.

Advertisement

ಪ್ರಕರಣ ಸಂಬಂಧ ನಡೆಸಿದ ತನಿಖೆಯ ಬಳಿಕ 16 ಉದ್ಯೋಗಿಗಳನ್ನು ತೆಗೆದುಹಾಕಲಾಗಿದ್ದು, ಮೂವರು ಉದ್ಯೋಗಿಗಳನ್ನು ಸಂಪನ್ಮೂಲ ನಿರ್ವಹಣೆ ವಿಭಾಗದಿಂದ ವಜಾಗೊಳಿಸಲಾಗಿದೆ. ಜತೆಗೆ 6 ಮಂದಿ ಮಾರಾಟಗಾರರು ಹಾಗೂ ಅವರ ಮಾಲೀಕರು ಮತ್ತು ಅಂಗಸಂಸ್ಥೆಗಳೊಂದಿಗೆ ಟಿಸಿಎಸ್‌ನ ವ್ಯಾಪಾರವನ್ನೂ ನಿರ್ಬಂಧಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಟಿಸಿಎಸ್‌ಗೆ ಗುತ್ತಿಗೆದಾರರನ್ನು ಪೂರೈಸುವ ಸಂಸ್ಥೆಗಳು ಹಾಗೂ ಸಂಸ್ಥೆಯ ಕೆಲ ಉದ್ಯೋಗಿಗಳು ಸೇರಿ ನೀತಿ ಸಂಹಿತೆಯನ್ನು ಉಲ್ಲಂ ಸಿ ನೇಮಕಾತಿಯಲ್ಲಿ ಹಗರಣ ನಡೆಸಿರುವುದು ಜೂನ್‌ನಲ್ಲಿ ಬಹಿರಂಗಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next