Advertisement

ಟಿಸಿಎಸ್‌ನಲ್ಲಿ ಹೆಚ್ಚು ಮಹಿಳಾ ಉದ್ಯೋಗಿಗಳು

11:13 PM Dec 02, 2022 | Team Udayavani |

ದೇಶದಲ್ಲಿರುವ ಖಾಸಗಿ ಕಂಪನಿಗಳ ಪೈಕಿ ಅತಿ ಹೆಚ್ಚು ಸಂಖ್ಯೆಯ ಮಹಿಳಾ ಉದ್ಯೋಗಿಗಳು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌)ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬುರಂಗಿx ಪ್ರೈವೇಟ್‌ ಮತ್ತು ಹುರುನ್‌ ಇಂಡಿಯಾ ನಡೆಸಿದ ಸರ್ವೆಯಿಂದ ಇದು ದೃಢಪಟ್ಟಿದೆ.

Advertisement

ಉಳಿದಂತೆ ಅತಿ ಹೆಚ್ಚು ಸಂಖ್ಯೆಯ ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇನ್ಫೋಸಿಸ್‌, ವಿಪ್ರೋ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಮದರ್‌ಸನ್‌ ಸುಮಿ ಸಿಸ್ಟಮ್ಸ್‌, ಟೆಕ್‌ ಮಹೀಂದ್ರಾ, ಐಸಿಐಸಿಐ ಬ್ಯಾಂಕ್‌,ಎಚ್‌ಡಿಎಫ್ಸಿ ಬ್ಯಾಂಕ್‌ ಮತ್ತು ಪೇಜ್‌ ಇಂಡಸ್ಟ್ರೀಸ್‌ ಇವೆ.

ಟಿಸಿಎಸ್‌ ಹೆಗ್ಗಳಿಕೆ
5,92,195- ಒಟ್ಟು ಉದ್ಯೋಗಿಗಳು
2.1 ಲಕ್ಷ- ಮಹಿಳಾ ಉದ್ಯೋಗಿಗಳು .
ಐಟಿಯಲ್ಲಿ ಹೆಚ್ಚಿನ ಮಹಿಳಾ ಉದ್ಯೋಗಿಗಳು ಇರುವ ಕಂಪನಿ

ಶೇ. 16- ನಿರ್ದೇಶಕ ಮಂಡಳಿಯಲ್ಲಿರುವ ಮಹಿಳೆಯರು

ಕಂಪನಿ ಮಹಿಳಾ ಉದ್ಯೋಗಿಗಳು
ಟಿಸಿಎಸ್‌ 2.1 ಲಕ್ಷ
ಇನ್ಫೋಸಿಸ್‌ 1.25 ಲಕ್ಷ
ವಿಪ್ರೋ 88,946
ಎಚ್‌ಸಿಎಲ್‌ ಟೆಕ್ನಾಲಜೀಸ್‌ 62,780
ರಿಲಯನ್ಸ್‌ ಇಂಡಸ್ಟ್ರೀಸ್‌ 62,560
ಮದರ್‌ಸನ್‌ ಸುಮಿ ಸಿಸ್ಟಮ್ಸ್‌ 52,501
ಟೆಕ್‌ ಮಹೀಂದ್ರಾ 42,774
ಐಸಿಐಸಿಐ ಬ್ಯಾಂಕ್‌ 32,697
ಎಚ್‌ಡಿಎಫ್ಸಿ ಬ್ಯಾಂಕ್‌ 22,750
ಪೇಜ್‌ ಇಂಡಸ್ಟ್ರೀಸ್‌ 22,631

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next