Advertisement

100 ಬಿಲಿಯನ್‌ ಡಾಲರ್‌: TCS ಸಾಧನೆ

11:38 AM Apr 24, 2018 | Team Udayavani |

ಕೋಟಿಗಟ್ಟಲೆ ಮೌಲ್ಯದ ಮಾರುಕಟ್ಟೆ ಬಂಡವಾಳ ಹೊಂದುವ ಮೂಲಕ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಸೋಮವಾರ ಹೊಸ ಸಾಧನೆ ಮಾಡಿದೆ. ಮಾರುಕಟ್ಟೆ ಬಂಡವಾಳ 100 ಬಿಲಿಯನ್‌ ಡಾಲರ್‌ (68.09 ಲಕ್ಷ ಕೋಟಿ ರೂ.) ಹೊಂದಿರುವ ಮೊದಲ ಭಾರತೀಯ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಆದರೆ, ಷೇರುಮಾರುಕಟ್ಟೆಯ ಆರಂಭಿಕ ವಹಿವಾಟಿನ ವೇಳೆ 100 ಬಿ.ಡಾಲರ್‌ ತಲುಪಿದ್ದ ಮಾರುಕಟ್ಟೆ ಬಂಡವಾಳ, ವಹಿವಾಟಿನ ಅಂತ್ಯದ ವೇಳೆಗೆ ಸ್ವಲ್ಪಮಟ್ಟಿಗೆ ಇಳಿಕೆ ಕಂಡು 98.8 ಶತಕೋಟಿ ಡಾಲರ್‌ (65.37 ಲಕ್ಷ ಕೋಟಿ)ಗೆ ತಲುಪಿದೆ.

Advertisement

ಮೌಲ್ಯಮಾಪನ ಹೇಗೆ?
ಮಾರುಕಟ್ಟೆಯಲ್ಲಿ ಸದ್ಯ ಚಲಾವಣೆಯಲ್ಲಿರುವ ಷೇರುಗಳ ಮೌಲ್ಯವನ್ನು ಒಟ್ಟು ಷೇರುಗಳ ಜತೆ ಗುಣಿಸಿ ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕಲಾಗುತ್ತದೆ. ಕಳೆದ ಶುಕ್ರವಾರ ಟಿಸಿಎಸ್‌ ಷೇರುಗಳು ಶೇ.7ರಷ್ಟು ಏರಿಕೆ ಕಂಡು, ಮಾರುಕಟ್ಟೆ ಮೌಲ್ಯ 99 ಶತಕೋಟಿ ಡಾಲರ್‌(65.75 ಲಕ್ಷ ಕೋಟಿ)ಗೆ ತಲುಪಿತ್ತು. ಇದೀಗ ಸೋಮವಾರ ಷೇರು ಶೇ.4ರಷ್ಟು ಅಂದರೆ 3,557 ರೂ. ಹೆಚ್ಚಳವಾಗಿ, ಮಾರುಕಟ್ಟೆ ಮೌಲ್ಯ 100 ಶತಕೋಟಿ ಡಾಲರ್‌(68.09 ಲಕ್ಷ ಕೋಟಿ)ಗೆ ತಲುಪಿತ್ತು. ದಿನಾಂತ್ಯಕ್ಕೆ ಷೇರು 3,415(ಶೇ.0.26)ರಲ್ಲಿ ಕೊನೆಗೊಂಡು ಮಾರುಕಟ್ಟೆ ಮೌಲ್ಯ 65.37 ಲಕ್ಷ ಕೋಟಿಗೆ ತಲುಪಿತು. 4ನೇ ತ್ತೈಮಾಸಿಕದಲ್ಲಿ ಕಂಪೆನಿ ಶೇ.4.5ರಷ್ಟು ಲಾಭ ಗಳಿಸಿದೆ ಎಂದು ಘೋಷಿಸಿಕೊಂಡದ್ದರಿಂದ ಷೇರು ಪೇಟೆಗಳಲ್ಲಿ ಕಂಪೆ‌ನಿಯ ಷೇರುಗಳು ತೇಜಿಯಾಗಿದ್ದವು.

ದೇಶದ ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಕಂಪೆ‌ನಿ ದೇಶದ ಅತ್ಯಂತ ದೊಡ್ಡ ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಕಂಪೆನಿಯಾಗಿರುವ TCSನ ಆದಾಯ 2017ರ 4ನೇ ತ್ತೈಮಾಸಿಕದಲ್ಲಿ 4.97 ಶತಕೋಟಿ ಡಾಲರ್‌ (3.38 ಲಕ್ಷ ಕೋಟಿ ರೂ.) ಹೆಚ್ಚಾಗಿತ್ತು. ಭಾರತದ ಕಂಪೆನಿಗಳು ವಿದೇಶಗಳಿಗೆ ಹೊರಗುತ್ತಿಗೆ ನೀಡಿದರೆ ಅದರಿಂದ ಸಿಗುವ 
ಆದಾಯಕ್ಕೆ ಡಾಲರ್‌ ಆದಾಯ ಎನ್ನುತ್ತೇವೆ. 

ಉದ್ಯೋಗ ವೈಶಿಷ್ಟ್ಯ
ಉದ್ಯೋಗಿಗಳು :
04 ಲಕ್ಷ
ದೇಶಗಳು : 46
ರಾಷ್ಟ್ರೀಯತೆ : 131
ಮಹಿಳಾ ಉದ್ಯೋಗಿಗಳು : 35.5%
ಇದುವರೆಗಿನ ಸಿಇಒಗಳ ಸಂಖ್ಯೆ : 04
ಕಂಪೆ‌ನಿ ಸದ್ಯ ಹೊಂದಿರುವ ಸ್ಥಾನ : 97
100ನೇ ಅತ್ಯಂತ ಮೌಲ್ಯಯುತ ಕಂಪನಿ

1969ರಲ್ಲಿ ಸ್ಥಾಪನೆಯಾದ ಕಂಪೆನಿ ಈ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿದೆ. 
1969-1996  ಸಂಸ್ಥೆಯ ಮೊದಲ ಕಾರ್ಯನಿರ್ವಹಣಾ ಅಧಿಕಾರಿ ಎಫ್.ಸಿ.ಕೋಲಿ ಇದ್ದ ಅವಧಿ

Advertisement

ಹಣಕಾಸಿನ ಆಧಾರ
– ಟಾಟಾ ಗ್ರೂಪ್‌ನ ಶೇ.85ರಷ್ಟು ಆದಾಯ TCSನಿಂದಲೇ ಪಾವತಿಯಾಗುತ್ತದೆ. 

– ಮಾರ್ಚ್‌ 2018ರ ಅಂತ್ಯಕ್ಕೆ ಮುಕ್ತಾಯಗೊಂಡ ತ್ತೈಮಾಸಿಕಕ್ಕೆ 32,075 ಕೋಟಿ ರೂ. ಆದಾಯ

– 2018ಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಕಂಪೆನಿಯ ಮಾರುಕಟ್ಟೆ ಬಂಡವಾಳ ಶೇ.6ರಷ್ಟು ಕುಸಿದಿತ್ತು.

– ಟಾಟಾ ಗ್ರೂಪ್‌ 10 ಶತಕೋಟಿ ರೂ.ಮೌಲ್ಯದ ಕಂಪೆನಿಗಳ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ಟಿಸಿಎಸ್‌ ಸಾಧನೆ ಅಪಾರ

Advertisement

Udayavani is now on Telegram. Click here to join our channel and stay updated with the latest news.

Next