ಜಾಲ್ಸೂರು ಗ್ರಾಮದ ಕುಂದ್ರುಕೋಡಿಯ ಕೆ. ನಾರ್ಣಪ್ಪ ಅವರ ಮನೆ ಸಮೀಪ ಮೆಸ್ಕಾಂ ಟಿ.ಸಿ.ಯೊಂದನ್ನು ಅಳವಡಿಸಿದೆ. ಯಾವುದೇ ಮುನ್ಸೂಚನೆ ಕೊಡದೆ ಹಾಕಲಾಗಿರುವ ಈ ಟಿ.ಸಿ. ಮನೆಯಿಂದ ಗರಿಷ್ಠ 6 ಮೀ. ಅಂತರದಲ್ಲಿದೆ. ಟಿ.ಸಿ. ತೆರವಿಗೆ ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ ಎನ್ನುವುದು ನಾರ್ಣಪ್ಪ ಅವರ ಅಳಲು. ಈ ಹಿಂದೆ ಅಳವಡಿಸಿದ್ದ ಸ್ಥಳದಿಂದ ಟಿ.ಸಿ. ತೆರವುಗೊಳಿಸಿ ಇಲ್ಲಿಗೆ ವರ್ಗಾಯಿಸಿ¨ªಾರೆ. ಮೊದಲಿನ ಟಿ.ಸಿ. 15 ಮೀಟರ್ ದೂರದಲ್ಲಿತ್ತು. ಅಲ್ಲಿ ಜನವಸತಿ ಇರಲಿಲ್ಲ. ಈಗ ನಾರ್ಣಪ್ಪ ಅವರ ಮನೆಯ ಪಕ್ಕದÇÉೇ ಹಾಕಿ¨ªಾರೆ. ಮೊದಲು ಟಿ.ಸಿ. ಇದ್ದ ಸ್ಥಳದಲ್ಲಿ ಕಟ್ಟಡವೊಂದು ನಿರ್ಮಾಣವಾಗಿದೆ.
Advertisement
ಟ್ರಾನ್ ಫಾರ್ಮರ್‌ನಲ್ಲಿ ಆಗಾಗ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದ್ದು, ಮಳೆಗಾಲದಲ್ಲಿ ಅಪಾಯದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ಸುರಿದ ಮಳೆಗೆ ಬೆಂಕಿ ಕಿಡಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ.ನಾರ್ಣಪ್ಪ ದಂಪತಿ ಜಾಲೂÕರಿನ ಮುಖ್ಯ ಪೇಟೆಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ಹೊತ್ತಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ.
ಈ ಭಾಗದಲ್ಲಿ ಕಾಲನಿ ಮಕ್ಕಳು ಹೊರಗಡೆ ಆಟವಾಡುತ್ತಾರೆ. ಅನಾಹುತ ಸಂಭವಿಸಿದರೆ ಗಮನಿಸುವವರಿಲ್ಲ. ಟಿ.ಸಿ. ಹಾಕುವ ಮೊದಲು ಆ ಜಾಗದಲ್ಲಿ ಮನೆಗೆ ಮಾರ್ಗ ಮಾಡುವ ಯೋಚನೆಯಿತ್ತು.
ಕುಂದ್ರುಕೋಡಿಯಲ್ಲಿ ಅಳವಡಿಸಿರುವ ಟಿ.ಸಿ. ತೆರವುಗೊಳಿಸಲು ಮೆಸ್ಕಾಂಗೆ ಪತ್ರ ಬರೆಯಲಾಗಿದೆ. ಫೋನ್ ಮೂಲಕ ಸುಳ್ಯ ಶಾಸಕರಿಗೆ ಮನವಿ ಮಾಡಿ¨ªಾರೆ.
Related Articles
ವಿಭಾಗೀಯ ಅಭಿಯಂತರು, ಮೆಸ್ಕಾಂ ಉಪವಿಭಾಗ ಸುಳ್ಯ, ಅಧೀಕ್ಷಕ ಎಂಜಿನಿಯರ್ ವಿದ್ಯುತ್ ನಿರ್ವಹಣೆ ಮತ್ತು ಪಾಲನೆ ವೃತ್ತ ಮಂಗಳೂರು, ಕಾರ್ಯಪಾಲಕ ಅಭಿಯಂತರು ಮೆಸ್ಕಾಂ ಮಂಗಳೂರು, ಇ.ಇ. ಪುತ್ತೂರು ಮೆಸ್ಕಾಂ, ಎ.ಇ. ಸುಳ್ಯ ಮೆಸ್ಕಾಂ, ಜೆ.ಇ.ಸುಳ್ಯ ಮೆಸ್ಕಾಂ ಇವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ತೆರವುಗೊಳಿಸಿಲ್ಲ.
Advertisement
ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂಟಿ.ಸಿ. ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ¨ªಾರೆ. ತೆರವುಗೊಳಿಸುವ ಭರವಸೆ ನೀಡಿದ್ದರು. ಕಳೆದ ಶನಿವಾರ ಕೆಲಸಗಾರರು ಟಿ.ಸಿ. ತೆರವುಗೊಳಿಸಲು ಆಗಮಿಸಿ¨ªಾರೆ. ಬೇರೆ ಜಾಗಕ್ಕೆ ವರ್ಗಾವಣೆ ಮಾಡಲು ಕೇಳಿದಾಗ ಜಾಗದ ಮಾಲಕರು ಆಕ್ಷೇಪಣೆ ವ್ಯಕ್ತಪಡಿಸಿ¨ªಾರೆ. ಹೀಗಾಗಿ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಅಧಿಕಾರಿಗಳಿಂದ ಧನಾತ್ಮಕ ಪ್ರತಿಕ್ರಿಯೆ ದೊರತಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಟ್ರಾನ್ಸ್‌ಫಾರ್ಮರ್ ಇದುವರೆಗೆ ತೆರವುಗೊಳಿಸಲಿಲ್ಲ ಎಂದು ನಾರ್ಣಪ್ಪ ಹೇಳಿ¨ªಾರೆ. ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಮೆಸ್ಕಾಂ ತತ್‌ಕ್ಷಣ ಕಾರ್ಯಪ್ರರ್ವತ್ತರಾಗಬೇಕಿದೆ. ಶೀಘ್ರ ಟಿ.ಸಿ. ತೆರವು
ಟಿ.ಸಿ. ಸ್ಥಳ ಬದಲಿಕೆಗೆ ಸ್ಥಳೀಯರ ಆಕ್ಷೇಪವಿದೆ. ಹೀಗಾಗಿ ಬೇರೆ ಜಾಗವನ್ನು ನೋಡಿ ತೆರವು ಕಾರ್ಯ ಮಾಡಬೇಕಿದೆ. ಆದಷ್ಟು ಬೇಗ ಟಿ.ಸಿ. ಅಲ್ಲಿಂದ ತೆರವುಗೊಳಿಸಲಾಗುವುದು.
– ಹರೀಶ್ ಎ.ಇ. ಮೆಸ್ಕಾಂ, ಸುಳ್ಯ – ಶಿವಪ್ರಸಾದ್ ಮಣಿಯೂರು