Advertisement

ಟಿಬಿ ರೋಗಿಗಳಿಗೆ ತಿಂಗಳಿಗೆ 500 ರೂ. ಕೊಡಲಿರುವ ಸರಕಾರ

04:37 PM Jan 13, 2018 | Team Udayavani |

ಹೊಸದಿಲ್ಲಿ : ಸರಕಾರ ಟಿಬಿ ರೋಗಿಗಳಿಗೆ ಅವರು ಗುಣವಾಗುವ ತನಕ ಪೌಷ್ಟಿಕ ಆಹಾರವನ್ನು ಖರೀದಿಸಲು ಮತ್ತು ಸಾರಿಗೆ ಖರ್ಚು ವೆಚ್ಚಗಳನ್ನು ನಿಭಾಯಿಸಲು ನೆರವಾಗುವ ನಿಟ್ಟಿನಲ್ಲಿ ಅವರಿಗೆ ತಿಂಗಳಿಗೆ 500 ರೂ. ಗಳನ್ನು ಕೊಡುವ ಯೋಜನೆಯನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. 

Advertisement

ದೇಶದಲ್ಲಿ ಪ್ರಕೃತ 25 ಲಕ್ಷ ಟಿಬಿ ರೋಗಿಗಳಿದ್ದು ಅವರ ಆದಾಯ ಮಟ್ಟವನ್ನು ಲೆಕ್ಕಿಸದೆ ಅವರಿಗೆ ತಿಂಗಳಿಗೆ 500 ರೂ. ಕೊಡುವ ಪ್ರಸ್ತಾವ ಇದೆ ಎಂದವರು ಹೇಳಿದರು.

ಖರ್ಚು ವೆಚ್ಚ ಹಣಕಾಸು ಸಮಿತಿಯು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದು ಇದನ್ನು ಮಿಶನ್‌ ಸ್ಟಿಯರಿಂಗ್‌ ಗ್ರೂಪ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. 2025ರೊಳಗೆ ಟಿಬಿ ಕಾಯಿಲೆಯನ್ನು ದೇಶದಿಂದ ಮೂಲೋತ್ಪಾಟನೆ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next