Advertisement

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

03:21 PM May 03, 2024 | Team Udayavani |

ತೀರ್ಥಹಳ್ಳಿ: ಈ ಚುನಾವಣೆಯಲ್ಲಿ ದೇಶಾದ್ಯಂತ ಬಡವ ಮತ್ತು ಶ್ರೀಮಂತರ ನಡುವಿನ ಆಗುತ್ತಿರುವ ಚುನಾವಣೆ ಆಗಿದೆ. ಎಲ್ಲೋ ಒಂದು ಕಡೆ ಬಡವರು ಬಡವರಾಗಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಇದೆಲ್ಲದಕ್ಕೂ ತಡೆ ಹಾಕುವ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವ ಟಿ. ಬಿ ಜಯಚಂದ್ರ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ಮಾತನಾಡಿದ ಅವರು ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ಪ್ರಪಂಚ ಮಟ್ಟದ ಶ್ರೇಯಾಂಕ ಗಮನಿಸಿದಾಗ 111 ರಲ್ಲಿ ಇದ್ದೇವೆ ನಮಗಿಂತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಉತ್ತಮ ಸ್ಥಿತಿಯಲ್ಲಿದೆ. ನಾವೆಲ್ಲೂ ಇದನ್ನ ಹೈಲೇಟ್ ಮಾಡುತ್ತಿಲ್ಲ.ಇದಕ್ಕೆ ಪುರಸ್ಕಾರ ಕೊಡುವ ಶಕ್ತಿ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ. ಸಂವಿಧಾನ ಇಲ್ಲದೆ ಇದ್ದರೆ ಏನಾಗುತ್ತಿತ್ತು? ದೇಶ ಯಾವ ರೀತಿ ದಾರಿ ತಪ್ಪುತ್ತಿತ್ತು ಎಂದು ಹೇಳಬೇಕಾಗಿಲ್ಲ. ಸಂವಿಧಾನದಿಂದಲೇ ಎಲ್ಲರು ಒಗ್ಗಟ್ಟಾಗಿದ್ದೇವೆ. ಕರ್ನಾಟಕದ 224 ಕ್ಷೇತ್ರದಲ್ಲಿ ಹಲವು ಕ್ಷೇತ್ರಗಳು ಬರಗಾಲದಿಂದ ತುತ್ತಾಗಿದ್ದಾವೆ. ಕೇಂದ್ರಕ್ಕೆ ಮನವಿ ಮಾಡಿದರು ಹಣ ಬಿಡುಗಡೆ ಮಾಡಿಲ್ಲ. ಎನ್ ಡಿ ಆರ್ ಎಫ್ ನ ಹಣ 3 ತಿಂಗಳು ತಡ ಆಗಿದೆ ಎಂದು ಕೇಂದ್ರ ಗೃಹಸಚಿವರು ಹೇಳುತ್ತಾರೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ 18.300 ಕೋಟಿ ಕೊಡಬೇಕು ಎಂದು ನಾವು ಕೇಳಿದ ಸಂದರ್ಭದಲ್ಲಿ ಕೂಡ ಸರಿಯಾಗಿ ಹಣ ನೀಡಿಲ್ಲ. ನಮ್ಮ ಸಂಸತ್ ಸದಸ್ಯರು ಇದರಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದರು.

ಧರ್ಮ ಮತ್ತು ರಾಜಕೀಯ ನಡುವೆ ವ್ಯತ್ಯಾಸ ಇರಬೇಕು. ಭಾವನಾತ್ಮಕ ಇರುವ ವಿಚಾರ ಪ್ರಸ್ತಾಪ ಮಾಡಬಾರದು. ಇವತ್ತು ಧರ್ಮದ ಬಗ್ಗೆ ವಿಚಾರ ಮಾಡುತ್ತಾರೆ. ಅದರ ಬಗ್ಗೆ ನೋಟೀಸ್ ಮಾಡುವುದಿಲ್ಲ. ಸಹಸ್ರಾರು ವರ್ಷದ ಹಳೆಯದು ಸನಾತನ ಧರ್ಮ. ಅದನ್ನು ಸಾಧನವಾಗಿ ಬಳಕೆ ಮಾಡುತ್ತಿದ್ದಾರೆ ಎಂದರೆ ಅದು ಬಿಜೆಪಿಯ ವೀಕ್ನೆಸ್ ಮತ್ತು ಅವರ ಅವಕಾಶವಾದಿ ತನ ಎಂದರು.

ಪ್ರಜ್ವಲ್ ರೇವಣ್ಣ ವಿಷಯದ ಪ್ರೆಶ್ನೆಗೆ ನೋಡಿದರೆ ಇದು ಬಹಳ ವರ್ಷದಿಂದ ಆಗಿದೆ. ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಬಿಜೆಪಿಯವರಿಗೆ ಗೊತ್ತಿರಲಿಲ್ಲವೇ? ಇದು ಇಂಟಲಿಜೇನ್ಸಿ ವೈಫಲ್ಯ. ಹೊಂದಾಣಿಕೆ ಮಾಡಿಕೊಂಡು ಪಾಲುದಾರರಾಗಿರುವುದರಿಂದ ಇದರಲ್ಲಿ ಆರೋಪಿ 1 ಬಿಜೆಪಿ ಹಾಗೂ ಆರೋಪಿ 2 ಜೆಡಿಎಸ್ ಎಂದರು.

Advertisement

ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತಿಪಟೂರು ಮಾಜಿ ಶಾಸಕ ಷಡಕ್ಷರಿ, ಕಡಿದಾಳ್ ದಿವಾಕರ್ ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಅಮರನಾಥ್ ಶೆಟ್ಟಿ, ವಿಲಿಯಮ್ ಮಾರ್ಟಿಸ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Advertisement

Udayavani is now on Telegram. Click here to join our channel and stay updated with the latest news.

Next