Advertisement
ತುಂಗಭದ್ರಾ ಡ್ಯಾಂನಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಕಾಲುವೆ ಮತ್ತು ನದಿ ಮೂಲಕ ನೀರು ಈಗಾಗಲೇ ಆಂಧ್ರಪ್ರದೇಶ-ತೆಲಂಗಾಣ ರಾಜ್ಯದ ಡ್ಯಾಂಗಳಿಗೆ ನೀರು ಹರಿಸಲಾಗಿದೆ.ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆ ರೈತರ ಕೈ ಸೇರಲು ಏ.30ರವರೆಗೆ ಕಡ್ಡಾಯವಾಗಿ ಕಾಲುವೆಗಳಿಗೆ ನೀರು ಹರಿಸಲೇ ಬೇಕಿದ್ದು ಸದ್ಯ ಡ್ಯಾಂನಲ್ಲಿ ಕೇವಲ 16 ಟಿಎಂಸಿ ನೀರು ಸಂಗ್ರಹವಿದೆ. ಪರಿಸ್ಥಿತಿ ಹೀಗಿದ್ದರೂ ಆಂಧ್ರ ಮತ್ತುತೆಲಂಗಾಣ ಕೋಟಾದ ನೀರನ್ನು ಕಳೆದ 15ದಿನಗಳಿಂದ ಹಗಲು-ರಾತ್ರಿ ನದಿ ಮೂಲಕಬಿಡಲಾಗುತ್ತಿದೆ. ಡ್ಯಾಂನಲ್ಲಿ ಬೇಗ ನೀರು ಖಾಲಿ ಮಾಡುವ ದುರುದ್ದೇಶ ಅಧಿಕಾರಿ ವಲಯದಲ್ಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ತುಂಗಭದ್ರಾ ಡ್ಯಾಂನಲ್ಲಿ ಸದ್ಯ 16 ಟಿಎಂಸಿ ಅಡಿ ನೀರಿದ್ದು ಬೆಳೆದು ನಿಂತ ಬೆಳೆ ರೈತರ ಕೈಸೇರಲು ಈ ನೀರು ಸಾಕಾಗಲ್ಲ. ಆದರೂ ಡ್ಯಾಂ ನಿಂದ ಆಂಧ್ರಪ್ರದೇಶ ಕೋಟಾಎಂದು ನದಿಯ ಮೂಲಕ ಕಳೆದ 15 ದಿನಗಳಿಂದ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಅಚ್ಚುಕಟ್ಟು ರೈತರು ಆತಂಕಗೊಂಡಿದ್ದಾರೆ. ಕೂಡಲೇ ನದಿಗೆಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಜತೆಗೆ ಭದ್ರಾದಿಂದ 10 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ಡ್ಯಾಂಗೆ ಹರಿಸಬೇಕು. ಆಂಧ್ರಪ್ರದೇಶ ತೆಲಂಗಾಣದ ನೀರಿನ ಕೋಟಾವನ್ನು ಏ.10ರ ನಂತರ ಹರಿಸಬೇಕು. –ರೆಡ್ಡಿ ಶ್ರೀನಿವಾಸ, ಎಪಿಎಂಸಿ ನಿರ್ದೇಶಕ, ಅಧ್ಯಕ್ಷರು ಕನಕಗಿರಿ ಬ್ಲಾಕ್ ಕಾಂಗ್ರೆಸ್
ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಒತ್ತಡದಿಂದ ಸದ್ಯ ಆಂಧ್ರಪ್ರದೇಶದಕೋಟಾ 3.7 ಟಿಎಂಸಿ ಅಡಿ ನೀರನ್ನು ನದಿಯ ಮೂಲಕ ಹರಿಸಲಾಗುತ್ತಿದ್ದು, ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಏ.10 ನಂತರ ಆಂಧ್ರ ಕೋಟಾವನ್ನುನದಿಯ ಮೂಲಕ ಹರಿಸುವಂತೆ ಸೂಚನೆ ನೀಡಲಾಗಿದೆ. ಇದುವರೆಗೂ ಹರಿಸಿದ ನೀರಿನ ಲೆಕ್ಕ ಹಿಡಿದುಕೊಂಡು ಮುಂದಿನ ಏಪ್ರಿಲ್‌ನಲ್ಲಿ ಉಳಿದ ಆಂಧ್ರ ಕೋಟಾವನ್ನು ಹರಿಸಲಾಗುತ್ತದೆ. ರೈತರು ಆತಂಕ ಪಡಬಾರದು. – ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಕಾಡಾ ಯೋಜನೆ
- ಕೆ.ನಿಂಗಜ್ಜ