ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಮುರಿದು ಬಿದ್ದಿರುವ 19ನೇ ಕ್ರೆಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಡಿಕೆಯ ಸಾಹಸ ಕಾರ್ಯ ಗುರುವಾರ ಆರಂಭವಾಗಿದ್ದು, ಕ್ರೇನ್‌ಗಳ ಸಹಾಯದಿಂದ ಹೊಸ ಗೇಟ್ ಅಳವಡಿಕೆಗೆ ತಜ್ಞರು ಕಸರತ್ತು ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ಆರಂಭವಾದ ನೀರನ್ನೂ ಉಳಿಸಿಕೊಂಡು ಗೇಟ್ ಅಳವಡಿಸುವ ಆಪರೇಷನ್ “ಎ’ ಸಂಜೆ ವರೆಗೂ ನಡೆಯಿತು. ಆದರೆ ಹೊಸ ಗೇಟ್ ಹಾಗೂ ಮುರಿದ ಕ್ರೆಸ್ಟ್‌ಗೇಟ್‌ನ ಅಳತೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರಿಂದ ತಜ್ಞರ ತಂಡ ಎಚ್ಚರಿಕೆ ಹೆಜ್ಜೆಯನ್ನಿಡುವ ನಿಟ್ಟಿನಲ್ಲಿ ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಶುಕ್ರವಾರ ಪುನರಾರಂಭಿಸಲು ನಿರ್ಧರಿಸಿತು.
ತಲಾ 50 ಸಾವಿರ ರೂ.
ತುಂಗಭದ್ರಾ ಜಲಾಶಯಕ್ಕೆ ಗುರುವಾರ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ನೀಡಿ ಕಾರ್ಮಿಕರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಎಲ್ಲ ಕಾರ್ಮಿಕರಿಗೆ ವೈಯಕ್ತಿಕವಾಗಿ ತಲಾ 50 ಸಾವಿರ ರೂ ನೀಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಹೇಳಿದರು.