Advertisement

CM Siddaramaiah; ಕೇಂದ್ರದ ಅಧೀನದಲ್ಲಿ ಟಿಬಿ ಡ್ಯಾಂ ಬೋರ್ಡ್‌

01:39 AM Aug 14, 2024 | Team Udayavani |

ಕೊಪ್ಪಳ: ತುಂಗಭದ್ರಾ ಬೋರ್ಡ್‌ ಕೇಂದ್ರ ಸರಕಾರದ ಅಧಿಧೀನದಲ್ಲಿದೆ. ಜಲಾಶಯದ ಸಂಪೂರ್ಣ ನಿರ್ವಹಣೆ ಹೊಣೆ ಬೋರ್ಡ್‌ನದು. ಹೀಗಾಗಿ ಏನೇ ಟೀಕೆ ಇದ್ದರೂ ಕೇಂದ್ರ ಸರಕಾರದ ವಿರುದ್ಧ ಮಾಡಬೇಕು. ಆದರೆ ನಾವು ಹಾಗೆ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಮುರಿದು ಬಿದ್ದಿರುವ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್‌ ಸ್ಥಳ ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿ, ಕ್ರೆಸ್ಟ್‌ಗೇಟ್‌ ಮುರಿದ ವಿಷಯದಲ್ಲಿ ನಾವು ಸದ್ಯ ಯಾರ ಮೇಲೆಯೂ ಗೂಬೆ ಕೂರಿಸುವುದಿಲ್ಲ. ಮೊದಲ ಆದ್ಯತೆ ಜಲಾಶಯದ ಗೇಟ್‌ ಅಳವಡಿಕೆ ಮಾಡಿ ನೀರು ಉಳಿಸು ವುದು. ಅನಂತರ ತನಿಖೆಯ ವಿಷಯ ಚರ್ಚೆ ಮಾಡ  ಲಿದ್ದೇವೆ. ತುಂಗಭದ್ರಾ ಬೋರ್ಡ್‌ಗೆ ಅಧಿಕಾರಿ ಗಳನ್ನು ಕೇಂದ್ರ ಸರಕಾರ ನೇಮಿಸುತ್ತದೆ. ಬೋರ್ಡ್‌ ಅಧ್ಯಕ್ಷರನ್ನೂ ಕೇಂದ್ರ ಸರಕಾರವೇ ನೇಮಿಸುತ್ತದೆ. ಈಗ ಆರೋಪ ಮಾಡ ಬೇಕಿರುವುದು ಕೇಂದ್ರದ ಮೇಲೆ. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಇದರಲ್ಲಿ ರಾಜ್ಯ ಸರಕಾರದ ಹೊಣೆಗೇಡಿ ತನವಿದೆ ಎಂದರೆ ಏನರ್ಥ? ಜಲಾಶಯ ಬೋರ್ಡ್‌ ಯಾರ ಅಧೀನದಲ್ಲಿ ಬರುತ್ತದೆ ಎಂದು ಬಿಜೆಪಿ ನಾಯಕರು ಮನವರಿಕೆ ಮಾಡಿಕೊಳ್ಳಲಿ. ಅವರ ರಾಜಕೀಯ ಟೀಕೆಗೆ ಉತ್ತರಿಸುವುದಿಲ್ಲ ಎಂದರು.

50 ವರ್ಷಕ್ಕೊಮ್ಮೆ ಗೇಟ್‌-ಚೈನ್‌ ಬದಲು
ತುಂಗಭದ್ರಾ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಕ್ರೆಸ್ಟ್‌ಗೇಟ್‌ ತುಂಡಾಗಿದೆ. 2019ರಲ್ಲಿ ಕಾಲುವೆಯ ಗೇಟ್‌ ಮುರಿದಿತ್ತೇ ವಿನಾ ಕ್ರೆಸ್ಟ್‌ಗೇಟ್‌ಗೆ ಏನೂ ಆಗಿರಲಿಲ್ಲ. ತಜ್ಞರು 50 ವರ್ಷಗಳಿಗೊಮ್ಮೆ ಗೇಟ್‌ ಹಾಗೂ ಸರಪಳಿಗಳನ್ನು ಬದಲಾಯಿಸುವ ಸಲಹೆ ನೀಡಿದ್ದು, ಇನ್ನು ಮುಂದೆ ತಜ್ಞರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಸರಕಾರಗಳು ಕ್ರಮ ಕೈಗೊಳ್ಳಲಿವೆ. ಕೇಂದ್ರ ಸರಕಾರ ನೇಮಿಸಿದ ಬೋರ್ಡ್‌ ಅಸ್ತಿತ್ವದಲ್ಲಿದೆ.

ಇದರಲ್ಲಿ ಕೇಂದ್ರ ಜಲ ಆಯೋಗ, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣಗಳ ಸದಸ್ಯರಿದ್ದಾರೆ. ಇಂತಹ ಘಟನೆಗಳಿಗೆ ಕಾರಣವೇನು ಎಂಬುದರ ಬಗ್ಗೆ ಹೊಸ ಗೇಟ್‌ ಅಳವಡಿಕೆಯಾದ ಅನಂತರ ವಿಶ್ಲೇಷಣೆ ನಡೆಯಲಿದೆ. ನವಲಿ ಜಲಾಶಯ ನಿರ್ಮಾಣಕ್ಕೆ 15 ಸಾವಿರ ಕೋಟಿ ರೂ.ಗಳ ಡಿಪಿಆರ್‌ ತಯಾರಾಗಿದೆ. ಇದು ಅಂತಾರಾಜ್ಯ ಯೋಜನೆ. ಡಿಪಿಆರ್‌ಗೆ ಒಪ್ಪಿಗೆ ದೊರೆತ ಅನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿಎಂ ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next