Advertisement
ಒಂದೆಡೆ ಕೇರಳ ರಾಜ್ಯ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಎದುರಾಗಿದ್ದ ಬಾಕಿ ತೆರಿಗೆ ಪಾವತಿ ಸಂಕಷ್ಟ ಮತ್ತೆ ಕಾಡು ತ್ತಿದ್ದರೆ; ಮತ್ತೂಂದೆಡೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ ಆಗಿದ್ದು, ಟ್ಯಾಕ್ಸಿ ಚಾಲಕರಿಗೆ ಇದರಿಂದ ನೇರ ಹೊಡೆತ ಬೀಳು ವಂತಾಗಿದೆ. ಇದರ ಮಧ್ಯೆ ಲಾಕ್‌ಡೌನ್‌ನಿಂದಾಗಿ ಟ್ಯಾಕ್ಸಿ ಸಂಚಾರಕ್ಕೂ ಅವಕಾಶ ಸಿಗದೆ ಚಾಲಕರ ಜೀವನ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ.
Related Articles
Advertisement
ಕೇರಳದಲ್ಲಿ 2014ರಲ್ಲಿ ತೆರಿಗೆ ವಸೂಲಾತಿ ನಿಯಮ ತಿದ್ದುಪಡಿ ಮಾಡಲಾಗಿತ್ತು. ಆದರೆ ಅಲ್ಲಿನ ಸಾರಿಗೆ ಇಲಾಖೆ ತಿದ್ದುಪಡಿ ಮಾಡ ಲಾದ ದರದಲ್ಲಿ ತೆರಿಗೆ ವಸೂಲಿ ಮಾಡದೆ ಕಂಪ್ಯೂಟರಿಕೃತ ಆಧಾರದಲ್ಲಿ ಹಿಂದಿನಂತೆ ತೆರಿಗೆಯನ್ನು ವಸೂಲಿ ಮಾಡಿತ್ತು. ಆದರೆ 2016ರಲ್ಲಿ ಕೇರಳ ಸರಕಾರ ಆಡಿಟ್ ಮಾಡಿದ ಸಂದರ್ಭ ಭಾರಿ ಪ್ರಮಾಣದಲ್ಲಿ ತೆರಿಗೆ ಕಡಿಮೆ ವಸೂಲಿ ಆಗಿರುವುದು ಪತ್ತೆ ಯಾಗಿತ್ತು. ಕಾರಣ ಹುಡುಕಿದಾಗ ಕರ್ನಾ ಟಕದ ಟ್ಯಾಕ್ಸಿ ವಾಹನಗಳಿಗೆ 2014ರಿಂದ 2016ರ ವರೆಗೆ ಹಿಂದಿನ ದರದಲ್ಲೇ ತೆರಿಗೆ ವಸೂಲಾಗಿರುವುದು ಪತ್ತೆಯಾಗಿತ್ತು. ಇದರಿಂದ ಕೇರಳ ಸರಕಾರ ಕರ್ನಾಟಕದ ಸುಮಾರು 5 ಸಾವಿರಕ್ಕೂ ಅಧಿಕ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ನೋಟಿಸ್ ಜಾರಿ ಮಾಡಿ ಹಿಂದಿನ ಬಾಕಿ ತೆರಿಗೆಯನ್ನು ಪಾವತಿ ಮಾಡುವಂತೆ ಸೂಚನೆ ನೀಡಿದೆ.
ಏರ್‌ಪೋರ್ಟ್ ಪಾರ್ಕಿಂಗ್ ಶುಲ್ಕ ದುಪ್ಪಟ್ಟು :
ಮೇ 1ರಿಂದ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ ಮಾಡಲಾಗಿದೆ. ಇಲ್ಲಿ ಬಾಡಿಗೆ ನಡೆಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಇದರಿಂದ ಸಮಸ್ಯೆ ಆಗಲಿದೆ. ಈ ಬಗ್ಗೆ “ಉದ ಯವಾಣಿ’ ಜತೆಗೆ ಮಾತನಾಡಿದ ಕಂಕನಾಡಿ ಟ್ಯಾಕ್ಸಿ ಚಾಲಕ ಶುಭಕರ, “ಏರ್‌ಪೋರ್ಟ್ ನಲ್ಲಿ ಟ್ಯಾಕ್ಸಿ ಚಾಲಕರಿಂದ ಇದುವರೆಗೆ ಪಡೆಯುತ್ತಿದ್ದ ಪಾರ್ಕಿಂಗ್ ಶುಲ್ಕವನ್ನು 20 ರೂ.ಗಳಿಂದ 90 ರೂ.ಗೆ ಏರಿಸಿದ್ದಾರೆ. ಅದೂ ಅರ್ಧ ತಾಸಿಗೆ. ಹೀಗಾಗಿ ಇನ್ನು ಮುಂದೆ ಉಡುಪಿಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ವಿವಿಧ ಕಡೆಯಲ್ಲಿ 250 ರೂ. ಟೋಲ್, ಏರ್‌ಪೋರ್ಟ್‌ನಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ಮೊದಲೇ ಲಾಕ್‌ಡೌನ್, ಡೀಸೆಲ್ ದರ ಏರಿಕೆಯಿಂದ ಸಮಸ್ಯೆಯಲ್ಲಿರುವ ಟ್ಯಾಕ್ಸಿ ಚಾಲಕರಿಗೆ ಇದು ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ 10 ನಿಮಿಷ ಉಚಿತ ನೀಡುವಂತೆ ಟ್ಯಾಕ್ಸಿಯವರಿಗೂ 10 ನಿಮಿಷ ಉಚಿತ ಅವಕಾಶ ನೀಡಬೇಕು. ಬೆಂಗಳೂರು, ಕಣ್ಣೂರು ಸಹಿತ ಇತರ ವಿಮಾನ ನಿಲ್ದಾಣಗಳಲ್ಲಿರುವಂತೆ ಉಚಿತ ವಾದ “ಪಿಕಪ್ ವೇ’ ಮಾಡಬೇಕು. –ಆನಂದ್ ಕೆ., ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್
ಕಳೆದ ಲಾಕ್‌ಡೌನ್‌ನಿಂದಾಗಿ ಹಲವು ವರ್ಗದವರು ಸಮಸ್ಯೆಅನುಭವಿಸಿ ಚೇತರಿಕೆ ಕಂಡಿದ್ದರೂ ಟ್ಯಾಕ್ಸಿ ಸಮೂಹದವರು ಮಾತ್ರ ಇನ್ನೂ ಚೇತರಿಕೆ ಕಂಡಿರಲಿಲ್ಲ. ಇಂಧನ ಬೆಲೆ ಏರಿಕೆ, ಟೋಲ್ ದರ ಏರಿಕೆ ಸಹಿತ ಹಲವು ಏರಿಕೆಗಳು ನಮಗೆ ಕಷ್ಟ ನೀಡಿದೆ. ಅದರ ಜತೆಗೆ ಈಗ ಮತ್ತೆ ಲಾಕ್‌ಡೌನ್, ಕೇರಳ ಟ್ಯಾಕ್ಸ್ ವಿಚಾರ, ವಿಮಾನ ನಿಲ್ದಾಣ ಪಾರ್ಕಿಂಗ್ ಶುಲ್ಕ ಏರಿಕೆಯು ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. –ದಿನೇಶ್ ಕುಂಪಲ, ಅಧ್ಯಕ್ಷರು, ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್