Advertisement

ಹಿಮಾಲಯ ಯೋಗಿಗೆ ಬಾಂಬೆ ಷೇರುಮಾರುಕಟ್ಟೆ ರಹಸ್ಯ ಮಾಹಿತಿ ರವಾನೆ:ಚಿತ್ರಾ ನಿವಾಸದ ಮೇಲೆ IT ದಾಳಿ

01:39 PM Feb 17, 2022 | Team Udayavani |

ನವದೆಹಲಿ:ದೇಶದ ಅತೀ ದೊಡ್ಡ ಷೇರು ಮಾರುಕಟ್ಟೆಯ ರಹಸ್ಯ ಮಾಹಿತಿಯನ್ನು ಹಿಮಾಲಯದ ಯೋಗಿ ಜತೆ ಹಂಚಿಕೊಂಡಿದ್ದು ಹಾಗೂ ನಿರ್ಣಾಯಕ ನಿರ್ಧಾರಗಳ ಕುರಿತು ಸಲಹೆ ಪಡೆಯುತ್ತಿದ್ದ ಮಾಜಿ ಮುಖ್ಯಸ್ಥೆ, ಆರೋಪಿ ಚಿತ್ರಾ ರಾಮಕೃಷ್ಣನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ (ಫೆ.17) ದಾಳಿ ನಡೆಸಿದೆ.

Advertisement

ಇದನ್ನೂ ಓದಿ:ರಾಣಿ ಚೆನ್ನಮ್ಮ‌ಮೈದಾನದಲ್ಲಿ ಏನು‌ ಮಾಡಿದರು?: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

ಮುಂಬೈಯಲ್ಲಿ ವಾಸವಾಗಿರುವ ಚಿತ್ರಾ ರಾಮಕೃಷ್ಣನ್ 2013 ಮತ್ತು 2016ರ ನಡುವೆ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಷೇರುಮಾರುಕಟ್ಟೆ) ನ ಆಡಳಿತ ನಿರ್ದೇಶಕಿಯಾಗಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಿದ್ದು, ಬಳಿಕ ವೈಯಕ್ತಿಕ ಕಾರಣಗಳನ್ನು ನೀಡಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.

ಈ ಬಗ್ಗೆ ತನಿಖೆ ನಡೆಸಿದ್ದ ಸೆಬಿ(ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ಎನ್ ಎಸ್ ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಗೆ 3 ಕೋಟಿ , ನರೇನ್ ಮತ್ತು ಸುಬ್ರಮಣಿಯನ್ ಗೆ ತಲಾ 2 ಕೋಟಿ ರೂಪಾಯಿ ದಂಡ ವಿಧಿಸಿದ ನಂತರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.

ಎನ್ ಎಸ್ ಇ ಮುಖ್ಯಸ್ಥೆಯಾಗಿದ್ದ ಚಿತ್ರಾ ರಾಮಕೃಷ್ಣನ್, ಹಿಮಾಲಯದಲ್ಲಿ ವಾಸವಾಗಿದ್ದ ಆಧ್ಯಾತ್ಮಿಕ ಗುರು, ಯೋಗಿ ಬಾಬಾಗೆ ಸ್ಟಾಕ್ ಎಕ್ಸ್ ಚೇಂಜ್ ನ ಹಣಕಾಸು, ವಾಣಿಜ್ಯ ಯೋಜನೆ ಮತ್ತು ಆಡಳಿತ ಮಂಡಳಿಯ ಅಜೆಂಡಾಗಳ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಳು ಎಂದು ಸೆಬಿ ತಿಳಿಸಿದೆ.

Advertisement

ಎನ್ ಎಸ್ ಇಯ ಹಣಕಾಸು ಮತ್ತು ವಹಿವಾಟಿನ ಯೋಜನೆಗಳ ಮಾಹಿತಿ ಹಂಚಿಕೆ ಊಹಿಸಲು ಸಾಧ್ಯವಾಗದಿದ್ದರೂ ಕೂಡಾ, ಇದೊಂದು ಷೇರುಮಾರುಕಟ್ಟೆಯ ತಳಹದಿಯನ್ನೇ ಅಲುಗಾಡಿಸಬಲ್ಲ ಕಾರ್ಯವಾಗಿದೆ ಎಂದು ಸೆಬಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾರೀ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೃಹತ್ ಮೊತ್ತದ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿರುವ ಷೇರು ವಿನಿಮಯ ಕೇಂದ್ರವನ್ನು ಹಿಮಾಲಯದ ಗುರು ನಿಯಂತ್ರಿಸುತ್ತಿದ್ದು, ಚಿತ್ರಾ ರಾಮಕೃಷ್ಣನ್ ಆತನ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿರುವುದಾಗಿ ಸೆಬಿ ಹೇಳಿದೆ.

ಹಿಮಾಲಯದ ಯೋಗಿಯ ಪ್ರಭಾವದಿಂದ ಚಿತ್ರ ರಾಮಕೃಷ್ಣನ್, ಷೇರುಪೇಟೆಯ ಬಗ್ಗೆ ಯಾವುದೇ ಅನುಭವ ಇಲ್ಲದ ವ್ಯಕ್ತಿಯನ್ನು(ಆನಂದ್ ಸುಬ್ರಮಣಿಯನ್) ಎನ್ ಎಸ್ ಇಯ ಸಲಹೆಗಾರನನ್ನಾಗಿ ನೇಮಕ ಮಾಡಿರುವುದಾಗಿ ಸೆಬಿ ತಿಳಿಸಿದೆ. ಷೇರು ವಿನಿಮಯ ಕೇಂದ್ರದ ಹಣಕಾಸು ಡೇಟಾ, ಡೆವಿಡೆಂಡ್, ಆರ್ಥಿಕ ಪ್ರಗತಿ ಸೇರಿದಂತೆ ಪ್ರತಿಯೊಂದು ರಹಸ್ಯ ಮಾಹಿತಿಯನ್ನು ಚಿತ್ರಾ ಯೋಗಿಗೆ ರವಾನಿಸುತ್ತಿದ್ದಳು ಎಂದು ಸೆಬಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next