ನವದೆಹಲಿ: 2020-21ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಎರಡು ತಿಂಗಳವರೆಗೆ ವಿಸ್ತರಿಸಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸೆ. 30ರೊಳಗೆ ರಿಟರ್ನ್ಸ್ ಸಲ್ಲಿಸಲು ಅವಕಾಶವಿದೆ ಎಂದುಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಆದರೆ, ಕಂಪನಿಗಳ ಮಾದರಿಯಲ್ಲಿ ಆಡಿಟಿಂಗ್‌ಗೆ ಒಳಗಾಗಬೇಕಿರುವ ವೈಯಕ್ತಿಕ ತೆರಿಗೆದಾರರ ಖಾತೆಗಳ ವಿವರಗಳನ್ನು ಅ. 31ರೊಳಗೆ ಸಲ್ಲಿಸುವುದು ಕಡ್ಡಾಯ ಎಂದು ಸಿಬಿಡಿಟಿ ತಿಳಿಸಿದೆ.
ಹೊಸ ವೆಬ್‌ಸೈಟ್: ಇದೇ ವೇಳೆ, ರಿಟರ್ನ್ಸ್ಸ ಲ್ಲಿಕೆ ಮಾಡುವವರಿಗೆ ಅನುಕೂಲವಾಗುವಂತೆ ಜೂ.7ರಂದು ಇಲಾಖೆ ವತಿಯಿಂದ ಹೊಸ ಇ- ಫೈಲಿಂಗ್ ವೆಬ್‌ಸೈಟ್ ಅನಾವರಣಗೊಳ್ಳಲಿದೆ.
ಇದನ್ನೂಓದಿ:
ಭರವಸೆಯ ಬೆಳಕು : ಕೋವಿಡ್ ಗೆದ್ದ ಭೋಸಿ ಹಳ್ಳಿ ಕಥೆ
ಹೊಸ ವೆಬ್‌ಸೈಟ್‌ನಲ್ಲಿ ಸರಳವಾಗಿ ವಿವರಣೆಗಳು ಇದ್ದು, ಫೈಲಿಂಗ್ ಪ್ರಕ್ರಿಯೆ ಕ್ಷಿಪ್ರವಾಗಿ ನಡೆಸಲು ಅನುಕೂಲವಾಗಲಿದೆ. ಸದ್ಯ ಇರುವ www.incometaxindiaefiling.gov.in ನಿಂದ www.incometaxgov.in ವೆಬ್‌ಸೈಟ್‌ಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ