Advertisement
ದೇಶವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಚ್ಚಾ ತೈಲ ಬೆಲೆ ಇಳಿಕೆ ಆಗಿದ್ದರೂ, ಸೆಸ್ ವಿಧಿಸುವ ಮೂಲಕ ಲೀಟರ್ ಪೆಟ್ರೋಲ್ 2.60 ರೂ., ಡೀಸೆಲ್ 2.40 ರೂ.ಗೆ ಹೆಚ್ಚಳ ಮಾಡುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹಾಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಸೆಸ್ ರದ್ದು ಪಡಿಸಬೇಕೆಂದು ಒತ್ತಾಯಿಸಿದರು. ಅಂಬೇಡ್ಕರ ವೃತ್ತದಿಂದ ಬೈಕ್‌ಗಳನ್ನು ತಳ್ಳಿಕೊಂಡು ಮಿನಿವಿಧಾನಸೌಧಕ್ಕೆ ಬಂದು, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಅಲ್ತಾಫ್ ಹಳ್ಳೂರ, ಅನ್ವರ್ ಮುಧೋಳ, ಸದಾನಂದ ಡಂಗನವರ, ಗಣೇಶ ಟಗರಗುಂಡಿ, ಶರಣಪ್ಪ ಕೊಟಗಿ, ನವೀದ ಮುಲ್ಲಾ, ರಾಜಶೇಖರ ಮೆಣಸಿನಕಾಯಿ, ದಶರಥ ವಾಲಿ, ದಾಕ್ಷಾಯಿಣಿ ಹಿರೇಮಠ, ತಾರಾದೇವಿ ವಾಲಿ, ಸರೋಜಾ ಹೂಗಾರ, ವಿಜುನಗೌಡ ಪಾಟೀಲ, ಕುಮಾರ ಕುಂದನಹಳ್ಳಿ, ರಜತ್ ಉಳ್ಳಾಗಡ್ಡಿಮಠ ಇನ್ನಿತರರಿದ್ದರು. Advertisement
ತೈಲಕ್ಕೆ ತೆರಿಗೆ ಕಿಚ್ಚು; ಬೈಕ್ ತಳ್ಳಿದ ಕೈಗಳು
02:15 PM Jul 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.