Advertisement

ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಜತೆ ಚರ್ಚೆ: ಆರ್. ಅಶೋಕ್

11:59 AM Mar 17, 2022 | Team Udayavani |

ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವ್ರು ಅಭಿನಯಿಸಿರುವ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಅವರ ಅಭಿಮಾನಿಗಳು ನನಗೆ ಕರೆ ಮಾಡಿದ್ದರು, ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಪುನೀತ್ ಹುಟ್ಟುಹಬ್ಬಕ್ಕೆ ಮನದಾಳದಿಂದ ಶುಭಾಶಯ ಸಲ್ಲಿಸುತ್ತೇನೆ. ಅವರು ನಮ್ಮ ಮಧ್ಯೆ ಸದ್ಯ ಇಲ್ಲ. ಕೆಲವರು ಸತ್ತಾಗ ಮರೆಯುವುದು ಸರ್ವೇಸಾಮಾನ್ಯ ಆದರೆ ಅವರು ಇಲ್ಲ ಅಂದರೂ ಬದುಕಿರುವ ರೀತಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇವೆ. ಪುನೀತ್ ಗೆ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಆದಷ್ಟು ಬೇಗ ಅದನ್ನ ಕೊಡುವ ಕೆಲಸ ಆಗುತ್ತದೆ ಎಂದರು.

ಇದನ್ನೂ ಓದಿ : ಜೇಮ್ಸ್ ಚಿತ್ರ ಬಿಡುಗಡೆ: ಶೋ‌ ಹೌಸ್ ಫುಲ್, ಗದಗದಲ್ಲಿ ಅಭಿಮಾನಿಗಳ ಸಂಭ್ರಮ

ಕೊನೆಯ ಚಿತ್ರ ಜೇಮ್ಸ್ ಇಂದು ಬಿಡುಗಡೆಯಾಗುತ್ತಿದೆ, ವೇರಿ ಥಿಯೇಟರ್ ಬಳಿ ಸಂಭ್ರಮ ಇರುವುದನ್ನು ನಾನು ನೋಡಿದೆ. ಸಿನಿಮಾಗೆ ತೆರಿಗೆ ವಿನಾಯಿತಿ ಅವಕಾಶ ನೀಡಬೇಕೆಂದು ಸಿಎಂ ಬಳಿ ಚರ್ಚೆ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next