Advertisement

ಮಾಹಿತಿಗೆ ತೆರಿಗೆ ಮಂಡಳಿ, ಸರ್ಕಾರದ ನಡುವೆ ಒಪ್ಪಂದ

07:45 AM Sep 15, 2017 | Harsha Rao |

ನವದೆಹಲಿ: ಕಪ್ಪುಹಣ ಕುಳಗಳನ್ನು ಮಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೂಂದು ಹೆಜ್ಜೆ ಇರಿಸಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು  ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿವೆ. ಅದರ ಪ್ರಕಾರ ಪ್ಯಾನ್‌ ಸಂಖ್ಯೆ ಮತ್ತು ಇತರ ತೆರಿಗೆ ಸಂಬಂಧಿ ಮಾಹಿತಿಗಳನ್ನು ವಿನಿಮಯ ಮಾಡಲಾಗುತ್ತದೆ. ಈ ಮೂಲಕ ನಕಲಿ ಕಂಪನಿಗಳು ನಡೆಸುವ ಹಣದ ಅಕ್ರಮ ವಹಿವಾಟುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಲಿದೆ.

Advertisement

ಸ್ವಯಂ ಚಾಲಿತವಾಗಿ ಮತ್ತು ನಿಯಮಿತ ಅವಧಿಯಲ್ಲಿ ಮಾಹಿತಿ ವಿನಿಮಯವಾಗುತ್ತದೆ ಎಂದು ಮೂಲಗಳು ನವದೆಹಲಿಯಲ್ಲಿ ತಿಳಿಸಿವೆ. ಅದರ ಪ್ರಕಾರ ಕಂಪನಿಗಳ ಅಡಿಟ್‌ ಮಾಹಿತಿಯನ್ನು ತೆರಿಗೆ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ. ಇದರ ಜತೆಗೆ ಪ್ಯಾನ್‌ ಕಾರ್ಡ್‌ ವಿವರಗಳನ್ನು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಗುತ್ತದೆ. ಕಂಪನಿಗಳ ರಿಜಿಸ್ಟ್ರಾರ್‌ರಿಂದ ಆಯಾ ಕಂಪನಿಗಳಿಗೆ ಸಂಬಂಧಿಸಿದ ಹಣಕಾಸು ವರದಿಯನ್ನು ಪಡೆದುಕೊಂಡು ಪರಿಶೀಲನೆಗೆ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next