Advertisement

ಖಾದರ್‌ ಭೇಟಿಯಾದ ತಿವಾರಿ ಸಹೋದರ

12:38 PM Jun 09, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಹೋದರ ಮಯಾಂಕ್‌ ತಿವಾರಿ ಆಹಾರ ಸಚಿವ ಯು.ಟಿ. ಖಾದರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

Advertisement

ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ನನ್ನ ಸಹೋದರನದ್ದು ಕೊಲೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ರಾಜ್ಯ ಸರ್ಕಾರ ಈಗ ಕರೆದು ಮಾತನಾಡಿಸಿದೆ. ಅನುರಾಗ್‌ ಸಾವಿನ ತನಿಖೆಗೆ ಸ್ಪಂದಿಸುವ ಭರವಸೆ ಇದೆ. ಉತ್ತರ ಪ್ರದೇಶ ಸರ್ಕಾರ ಕೂಡ ತನಿಖೆಗೆ ಸ್ಪಂದಿಸುತ್ತಿದೆ.

ಅನುರಾಗ್‌ ತಿವಾರಿಯ ಮೊಬೈಲ್‌ ಲಾಗ್‌ ಮತ್ತು ಕಾಲ್‌ ಲಿಸ್ಟ್‌ ಡಿಲಿಟ್‌ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದರು.  ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಮಯಾಂಕ್‌ ತಿವಾರಿ ಭೇಟಿಯ ಕುರಿತು ಮಾತನಾಡಿದ ಸಚಿವ ಖಾದರ್‌, “ಅನುರಾಗ್‌ ಸಹೋದರ ರಾಜ್ಯಕ್ಕೆ ಬಂದಿರುವ ವಿಷಯ ತಿಳಿದು ಅವರೊಂದಿಗೆ ಚರ್ಚಿಸಿದ್ದೇನೆ.

ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಸಹಕರಿಸದಿರುವ ಹಾಗೂ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಅನುರಾಗ್‌ ತಿವಾರಿಗೆ ಸಾವಿನ ವಿಚಾರದಲ್ಲಿ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಆಶಯ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next