Advertisement

ಶಿವಮೊಗ್ಗದಲ್ಲಿ ತವಾ,ಆಹಾರ ಧಾನ್ಯ, ಮದ್ಯ ವಶ

11:28 PM Mar 24, 2023 | Shreeram Nayak |

ಶಿವಮೊಗ್ಗ: ಜಿಲ್ಲೆಯ ಹಲವೆಡೆ ತಪಾಸಣೆ ಮಾಡಿದ ಪೊಲೀಸರು, 50 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಆಗುಂಬೆ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು 20.70 ಲಕ್ಷ ರೂ. ಮೌಲ್ಯದ ಒಟ್ಟು 1,100 ನಾನ್‌ ಸ್ಟಿಕ್‌ ತವಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು 8 ಲಕ್ಷ ರೂ. ಮೌಲ್ಯದ ಒಟ್ಟು 30 ಟನ್‌ ತೂಕದ ಬೇಳೆ, ರವೆ, ಗೋಧಿ ಮತ್ತು ಇತರ ಆಹಾರ ಸಾಮಗ್ರಿಗಳಿದ್ದ 1 ಸಾವಿರ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಟೆ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು 7 ಲಕ್ಷ ರೂ. ಮೌಲ್ಯದ ಒಟ್ಟು 10.5 ಟನ್‌ ತೂಕದ ಅಕ್ಕಿ ತುಂಬಿದ್ದ 404 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಅಂದಾಜು 10 ಲಕ್ಷ ರೂ.ಗಳ ಉಡುಪುಗಳು, ಇಡ್ಲಿ ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತರೀಕೆರೆ: ಅಕ್ಕಿ, 3.50 ಲಕ್ಷ ರೂ. ವಶ
ಚಿಕ್ಕಮಗಳೂರು: ನೀತಿ ಸಂಹಿತೆ ಜಾರಿಗೆ ಮೊದಲೇ ಚುನಾವಣ ಅಕ್ರಮಗಳ ಬೆನ್ನು ಬಿದ್ದಿರುವ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು, ಶುಕ್ರವಾರ 150 ಕ್ವಿಂಟಾಲ್‌ ಅಕ್ಕಿ ಹಾಗೂ 3.50 ಲಕ್ಷ ರೂ. ಅನ್ನು ವಶಕ್ಕೆ ಪಡೆದಿದ್ದಾರೆ.

Advertisement

ತರೀಕೆರೆ ತಾಲೂಕಿನ ಎಂ.ಸಿ.ಕ್ಯಾಂಪ್‌ ಚೆಕ್‌ಪೋಸ್ಟ್‌ ಬಳಿ ಟೆಂಪೋ ವೊಂದನ್ನು ತಪಾಸಣೆ ಮಾಡಿದಾಗ ದಾಖಲೆರಹಿತವಾಗಿ ಸಾಗಿಸುತ್ತಿದ್ದ 150 ಕ್ವಿಂಟಾಲ್‌ ಅಕ್ಕಿಯನ್ನು ಜಪ್ತಿ ಮಾಡಿದೆ. ಅಕ್ಕಿಯನ್ನು ಮತದಾರರಿಗೆ ಹಂಚಲು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗುತ್ತಿದೆ. ವಾಹನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

3.50 ಲಕ್ಷ ರೂ. ವಶ
ಕಾರಿನಲ್ಲಿ ಶಿವಮೊಗ್ಗದಿಂದ ತರೀಕೆರೆಗೆ ತರಲಾಗುತ್ತಿದ್ದ ದಾಖಲೆ ಇಲ್ಲದ 3.50 ಲಕ್ಷ ರೂ.ಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಮತದಾರರಿಗೆ ಹಂಚಲು ತರಲಾಗುತ್ತಿತ್ತೆಂದು ಶಂಕಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next