Advertisement
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಆಂತರಿಕವಾಗಿ ಸಮೀಕ್ಷೆ ನಡೆಸಿದಾಗ ಶೇ. ೭೫ರಷ್ಟು ನನ್ನ ಪರ ವರದಿ ಬಂದಿದೆ. ಈ ವಿಚಾರವನ್ನು ಆರ್‌ಎಸ್‌ಎಸ್, ಬಿಜೆಪಿ ಮುಖಂಡರುಗಳೇ ನನಗೆ ಹೇಳಿದ್ದಾರೆ. ಮಂಗಳವಾರ ಸಂಜೆ ವರೆಗೆ ಅಷ್ಟಗಿ ಅವರಿಗೆ ಟಿಕೆಟ್ ಎಂದ ವರಿಷ್ಠರು ಕೊನೆ ಕ್ಷಣದಲ್ಲಿ ಜನರ ಮನಸ್ಸಿನಲ್ಲಿ ಇಲ್ಲದಿರುವ ಅಮೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದು ನನಗೆ ಹಾಗೂ ರಾಜ್ಯದ ಜೈನ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ ಮಾಡಿದ ದೊಡ್ಡ ಅನ್ಯಾಯ ಎಂದು ನೋವು ತೋಡಿಕೊಂಡರು.
Related Articles
Advertisement
ದತ್ತಾ ಡೋರ್ಲೆ, ಶಂಕ್ರಯ್ಯ ಮಠಪತಿ, ಕಸ್ತೂರಿ ಅಷ್ಟಗಿ, ಚಂದ್ರಗೌಡ ಬೊಮ್ಮನಗೌಡ್ರ, ನಿಂಗಪ್ಪ ಸಪೂರಿ, ಬಸಲಿಂಗಪ್ಪ ಮಂಗಳಗಟ್ಟಿ, ಮಲ್ಲನಗೌಡ ಗೌಡ್ರ, ಹನುಮಂತ ಮಾದರ, ಲಕ್ಷ್ಮಿ ಹೊಸಮನಿ, ಮಲ್ಲೇಶ ಲಂಗೋಟಿ, ಉಮೇಶ ಅಂಗಡಿ, ಸಚಿನ ಕದಂ ಸೇರಿದಂತೆ ಮತ್ತಿತರರು ಸುದ್ದಿಗೋಷ್ಟಿಯಲ್ಲಿದ್ದರು.
ಮಡಿವಾಳಜ್ಜ ನೋಡಿಕೊಳ್ಳಲಿ :ಅಷ್ಟಗಿ ಶಾಪ ಕ್ಷೇತ್ರದಲ್ಲಿ ಎ.ಬಿ ದೇಸಾಯಿ ೪ಬಾರಿ, ಅಮೃತ ದೇಸಾಯಿ ೨ ಬಾರಿ ಸೋತಿದ್ದರು. ಹೀಗಾಗಿ ೨೦೧೮ರಲ್ಲಿ ಅಮೃತ ದೇಸಾಯಿ ಗೆಲುವಿಗೆ ನಾವು ತನು, ಮನ, ಧನದಿಂದ ದುಡಿದಿದ್ದೇನೆ. ಆಗ ಎಂಎಲ್‌ಸಿ ಮಾಡುವುದಾಗಿ ಭರವಸೆ ಕೊಟ್ಟಿದ್ದ ಬಸವರಾಜ ಬೊಮ್ಮಾಯಿ ಮಾತು ತಪ್ಪಿದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲೂ ಪೀಡಿಸಿದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈ ಕಮಾಂಡ ಹಾಗೂ ಶಾಸಕ ಅಮೃತ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಶಾಸಕರು ನನಗೆ ತುಂಬ ಅನ್ಯಾಯ ಮಾಡಿದ್ದಾರೆ. ಅವರನ್ನು ಗರಗದ ಮಡಿವಾಳ ಅಜ್ಜನೇ ನೋಡಿಕೊಳ್ಳಲಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೋಡಿಕೊಳ್ಳಲಿ ಎಂದು ಅಷ್ಟಗಿ ಮಾರ್ಮಿಕವಾಗಿ ನುಡಿದು, ಬಹಿರಂಗವಾಗಿ ಶಪಿಸಿದರು. ಶೆಟ್ಟರ್‌ಗೆ ಅಪಮಾನ : ಬಿಜೆಪಿ ಸೋಲು
ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ನಾಯಕ ಮಾಜಿ ಸಿಎಂ ಜಗದೀಶ ಶೆಟ್ಟರ್‌ಅವರಂತವರಿಗೆ ಟಿಕೆಟ್ ಘೋಷಣೆ ಮಾಡದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.ಇನ್ನು ಅಮೃತ ದೇಸಾಯಿ ಅವರ ಸೋಲು ಪಕ್ಕಾ ಆಗಿದೆ.ಅವರ ಸೋಲನ್ನು ನನ್ನ ಮೇಲೆ ಹಾಕಬಾರದು ಎಂದು ಬಿಜೆಪಿ ರಾಜೀನಾಮೆ ಕೊಟ್ಟಿದ್ದೇನೆ.
-ತವನಪ್ಪ ಅಷ್ಟಗಿ,ಜೈನ್ ಸಮುದಾಯದ ಮುಖಂಡ ಇದನ್ನೂ ಓದಿ: ನಾನು ಯಾವುದೇ ಲಾಭಿಯ ಹಿಂದಿಲ್ಲ, ಇದು ನನ್ನ ಕೊನೆಯ ಚುನಾವಣೆ: ಸಿ.ಹೆಚ್.ವಿಜಯಶಂಕರ್