Advertisement
ಉಡುಪಿ, ಬ್ರಹ್ಮಾವರ, ಕಾರ್ಕಳ, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಕಡಲ್ಕೊರೆತ ತೀವ್ರ ಗೊಂಡಿದ್ದು, ಹಲವು ಮನೆಗಳು ಅಪಾಯ ದಲ್ಲಿವೆ. ಮರವಂತೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕೆಲವೇ ತಿಂಗಳ ಹಿಂದೆ ನಿರ್ಮಿಸಿದ್ದ ಮೀನು ಗಾರಿಕೆ ರಸ್ತೆ ಕೊಚ್ಚಿ ಹೋಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಎರಡು ಅಂತಸ್ತಿನ ಮನೆ ಕೊಚ್ಚಿಹೋಗಿದೆ.
ಉಳ್ಳಾಲ ಸೋಮೇಶ್ವರದಲ್ಲಿ ನೀರು ಸುಮಾರು 100 ಮೀ. ಒಳಗೆ ನುಗ್ಗಿ ಮನೆಗಳು ಜಲಾ ವೃತವಾಗಿವೆ. ಸೋಮೇ ಶ್ವರ ರುದ್ರ ಪಾದೆ ಬಳಿ ಇರುವ ಹಿಂದೂ ರುದ್ರ ಭೂಮಿ ಭಾಗಶಃ ಸಮುದ್ರ ಪಾಲಾಗಿದೆ. ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕೆ ಬೋಟು ಮುಳುಗಿದ್ದು, ಅದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು ಮಟ್ಟು ಬೀಚಿನಲ್ಲಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಮೇ 18ರ ವರೆಗೆ ಮಳೆ
ಐಎಂಡಿ ಮಾಹಿತಿಯಂತೆ ತೌಖ್ತೆ ವೇಗ ಮೇ 16ರಂದು 115-125ರಿಂದ 140 ಕಿ.ಮೀ. ಇರಲಿದೆ. ಸಂಜೆ 6ಕ್ಕೆ 125-135ರಿಂದ 150 ಕಿ.ಮೀ. ಮತ್ತು ಮೇ 17ರಂದು ಬೆಳಗ್ಗೆ 6ಕ್ಕೆ 145-155ರಿಂದ 170 ಕಿ.ಮೀ., ಸಂಜೆ 6ಕ್ಕೆ 150-160ರಿಂದ 175 ಕಿ.ಮೀ. ಮತ್ತು ಮೇ 18ರ ಬೆಳಗ್ಗೆ 6ಕ್ಕೆ 150-160ರಿಂದ 175 ಕಿ.ಮೀ. ವೇಗ ಪಡೆಯುವ ಸಾಧ್ಯತೆ ಇದೆ.
Related Articles
ಕರಾವಳಿಯಲ್ಲಿ ಇನ್ನೂ 3 ದಿನಗಳ ಕಾಲ ಉತ್ತಮ ಮಳೆ ಸುರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು ಮೇ 16ರಂದು ರೆಡ್ ಅಲರ್ಟ್ ಘೋಷಿಸಿದೆ. ಮೇ 17ರಂದು ಆರೆಂಜ್ ಮತ್ತು ಮೇ 18ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ತಾಸಿಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
Advertisement