Advertisement
ಟ್ಯಾಟೂ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತಮಗೆ ಇಷ್ಟವಿರುವ ಒಂದು ವಸ್ತು ಅಥವಾ ವಾಕ್ಯ ಅಥವಾ ಸುಂದರವಾರ ಚಿತ್ರಗಳನ್ನು ತಮ್ಮ ಮೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಿಂದೆ ಭಾರತ ದಲ್ಲಿ ಚಾಲ್ತಿಯಲ್ಲಿದ್ದ ಹಚ್ಚೆ ಹಾಕುವಿಕೆಯೇ ಇಂದು ಆಧುನಿಕತೆಯಲ್ಲಿ ಟ್ಯಾಟೂ ಎಂದು ಮಾರ್ಪಟ್ಟಿದೆ. ಮೈಗೆಲ್ಲ ಟ್ಯಾಟೂ ಹಾಕಿಸಿಕೊಂಡವರು ನಮ್ಮ ಕಣ್ಣಿಗೆ ಕಾಣಸಿಗುತ್ತಾರೆ. ಟ್ಯಾಟೂ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಟ್ಯಾಟೂ ಕೋರ್ಸ್ ಒಂದು ಉತ್ತಮ ಶಿಕ್ಷಣವಾಗಿದೆ.
ಇದರಲ್ಲಿ ಪ್ರಮುಖವಾಗಿ ಡ್ರಾಯಿಂಗ್‌ನ ಮೂಲ ಅಂಶಗಳು, ಟ್ಯಾಟೂ ಆರ್ಟ್ ಪರಿಚಯ, ಹಚ್ಚೆ ಪ್ರಕ್ರಿ ಯೆಯ ತಿಳವಳಿಕೆ, ಹಚ್ಚೆ ಉಪಕರಣಗಳ ಪರಿಚಯ, ವಿವಿಧ ರೀತಿಯ ಸೂಜಿಗಳನ್ನು ಅರ್ಥೈಸಿಕೊಳ್ಳುವುದು, ವಿವಿಧ ರೀತಿಯ ಹಚ್ಚೆ ಯಂತ್ರಗಳ ಪರಿಚಯ. ಸುರಕ್ಷತೆ, ನೈರ್ಮಲ್ಯ ಮಾನದಂಡಗಳು, ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನಿರ್ವಹಿಸುವುದು, ಚರ್ಮದ ಪ್ರಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆಗಳು ಹಚ್ಚೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ.
Related Articles
Advertisement
ಸಂಭಾವನೆಗೆ ಬರವಿಲ್ಲವಿದೇಶಗಳಲ್ಲಿ ಹೆಚ್ಚಿನ ಹಚ್ಚೆ ಕಲಾವಿದರು ಸುಮಾರು 30,000 ಮತ್ತು 50,000 ಡಾಲರ್ ಗಳವರೆಗೆ ಗಳಿಸುತ್ತಾರೆ. ಸ್ವತಃ ಉದ್ಯಮ ಮಾಡುವುದಾದರೆ ಇದೊಂದು ಲಾಭದಾಯಕವೂ ಹೌದು. ನಿಮ್ಮ ಟ್ಯಾಟೂ ಗುಣಮಟ್ಟದ ಮೇಲೆ ನಿಮ್ಮ ಸಂಪಾದನೆಯಿರುತ್ತದೆ. ನಗರಗಳಲ್ಲಿ ಈ ಉದ್ಯಮ ಆರಂಭಿಸುವುದಾದರೆ ಅತೀ ಹೆಚ್ಚಿನ ಲಾಭ ಗಳಿಸಬಹುದು. ವಿದೇಶದಲ್ಲೂ ಹೆಚ್ಚಿನ ಬೇಡಿಕೆಯಿದೆ. ಕೆಲವೊಂದು ಟ್ಯಾಟೂ ಕೋರ್ಸ್ ಸೆಂಟರ್‌ಗಳು ಅವರೇ ಕೆಲಸವನ್ನು ತೆಗೆದುಕೊಡುತ್ತಾರೆ. ಫ್ಯಾಷನ್ ಲೋಕದ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಈ ಟ್ಯಾಟೂ ಕಲಾವಿದರಿಗೆ ಉನ್ನತ ಸ್ಥಾನಮಾನವಿದೆ.