Advertisement
ಟ್ಯಾಟೂ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತಮಗೆ ಇಷ್ಟವಿರುವ ಒಂದು ವಸ್ತು ಅಥವಾ ವಾಕ್ಯ ಅಥವಾ ಸುಂದರವಾರ ಚಿತ್ರಗಳನ್ನು ತಮ್ಮ ಮೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಿಂದೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಹಚ್ಚೆ ಹಾಕುವಿಕೆಯೇ ಇಂದು ಆಧುನಿಕತೆಯಲ್ಲಿ ಟ್ಯಾಟೂ ಎಂದು ಮಾರ್ಪಟ್ಟಿದೆ. ಮೈಗೆಲ್ಲ ಟ್ಯಾಟೂ ಹಾಕಿಸಿಕೊಂಡವರು ನಮ್ಮ ಕಣ್ಣಿಗೆ ಕಾಣಸಿಗುತ್ತಾರೆ. ಟ್ಯಾಟೂ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಟ್ಯಾಟೂ ಕೋರ್ಸ್ ಒಂದು ಉತ್ತಮ ಶಿಕ್ಷಣವಾಗಿದೆ.
ಇದರಲ್ಲಿ ಪ್ರಮುಖವಾಗಿ ಡ್ರಾಯಿಂಗ್‌ನ ಮೂಲಭೂತ ಅಂಶಗಳು, ಟ್ಯಾಟೂ ಆರ್ಟ್ ಪರಿಚಯ, ಹಚ್ಚೆ ಪ್ರಕ್ರಿಯೆಯ ತಿಳವಳಿಕೆ, ಹಚ್ಚೆ ಉಪಕರಣಗಳ ಪರಿಚಯ, ವಿವಿಧ ರೀತಿಯ ಸೂಜಿಗಳನ್ನು ಅರ್ಥೈಸಿಕೊಳ್ಳುವುದು, ವಿವಿಧ ರೀತಿಯ ಹಚ್ಚೆ ಯಂತ್ರಗಳ ಪರಿಚಯ. ಸುರಕ್ಷತೆ, ನೈರ್ಮಲ್ಯ ಮಾನದಂಡಗಳು, ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ನಿರ್ವಹಿಸುವುದು, ಚರ್ಮದ ಪ್ರಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆಗಳು ಹಚ್ಚೆ ತರಬೇತಿ ಪಠ್ಯಕ್ರಮದ ಭಾಗವಾಗಿದೆ.
Related Articles
Advertisement
ಈ ಟ್ಯಾಟೂ ತರಬೇತಿ ಯಶಸ್ವಿಯಾಗಿ ಮುಗಿದ ಅನಂತರ ಹಚ್ಚೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸ್ವತಃ ಟ್ಯಾಟೂ ಶಾಪ್ ಹಾಕಿಕೊಳ್ಳುವುದಾದರೆ ಈ ಪ್ರಮಾಣ ಪತ್ರ ಅತೀ ಮುಖ್ಯವಾಗಿದೆ.
•ವಿಶ್ವಾಸ್ ಅಡ್ಯಾರ್