Advertisement
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಷ್ಟದಲ್ಲಿದೆಸದ್ಯ ಕೋವಿಡ್ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ವ್ಯವಹಾರ ನಡೆಸಿರುವ ಕಂಪನಿಗಳ ವಹಿವಾಟು ಕುಗ್ಗಿದೆ. ಈ ಎಲ್ಲ ಕಂಪನಿಗಳು ತಮ್ಮ ಆದಾಯಕ್ಕಾಗಿ ನೆಚ್ಚಿಕೊಂಡಿರುವುದು ಅಮೆರಿಕ ಮತ್ತು ಯೂರೋಪ್ ದೇಶಗಳನ್ನು. ಆದರೆ ಕೊರೊನಾದಿಂದ ಆ ದೇಶಗಳೇ ನಲುಗಿವೆ! ಆದ್ದರಿಂದ ಉದ್ಯೋಗಿಗಳನ್ನು ಸಾಕುವ ಸ್ಥಿತಿಯಲ್ಲಿ ಅವಿಲ್ಲ.
ನಿಧಾನಕ್ಕೆ ಯೂರೋಪ್ ಮತ್ತು ಅಮೆರಿಕದಲ್ಲಿ ಮತ್ತೆ ಎಲ್ಲ ರೀತಿಯ ಸೇವೆಗಳು ಆರಂಭವಾಗುತ್ತಿವೆ. ಹಾಗೆಯೇ ವಿವಿಧ ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಮಾಡಿಕೊಳ್ಳುವತ್ತ ಗಮನ ಹರಿಸಿವೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳಿಗೆ ಮಹತ್ವ ಸೃಷ್ಟಿಯಾಗುತ್ತಿದೆ. ಆದರೆ ಕಂಪನಿಗಳು ಶಾಶ್ವತವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಬದಲು, ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ
ಆದ್ಯತೆ ನೀಡುತ್ತವೆ. ಇದಕ್ಕಿರುವ ಕಾರಣಗಳು ಹೀಗಿವೆ… ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ: ಐಟಿ ಕಂಪನಿಗಳು ತಾವು ಒಪ್ಪಿಕೊಳ್ಳುವ ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ ಮಾಡಿಕೊಳ್ಳುವುದಕ್ಕೆ ಗಮನ ಹರಿಸುತ್ತವೆ. ಆ ಯೋಜನೆ ಮುಗಿದ ಮೇಲೆ ಉದ್ಯೋಗಿಗಳ ಕೆಲಸವೂ ಮುಗಿಯುತ್ತದೆ.
Related Articles
Advertisement
ಫಲಿತಾಂಶ ಜಾಸ್ತಿ: ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಾಗ, ಕೆಲಸಗಾರರಿಗೆ ಗುರಿ ನೀಡಲಾಗಿರುತ್ತದೆ. ಆದ್ದರಿಂದ ಕಂಪನಿಗಳಿಗೆ ಫಲಿತಾಂಶ ಜಾಸ್ತಿ ಸಿಗುತ್ತದೆ. ಸಂಬಳದ ಸೋರಿಕೆಯೂ ಕಡಿಮೆ.
ಐಟಿಗೆ ವಿತ್ತ ವಲಯದಿಂದಲೂ ಸೇರ್ಪಡೆಕಳೆದ ಕೆಲವು ವಾರಗಳಿಂದ ಸಿಬ್ಬಂದಿ ನೇಮಕ ಸಂಸ್ಥೆಗಳು ಒಂದು ವಿಶಿಷ್ಟ ಸಂಗತಿ ಗಮನಿಸಿವೆ. ಐಟಿ ಸಂಸ್ಥೆಗಳಿಗೆ ಬ್ಯಾಂಕ್, ಆರ್ಥಿಕ ಸೇವೆಗಳು, ವಿಮಾ ತಜ್ಞರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳಾಗಿ ಸೇರಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ವಿತ್ತ ಆಧಾರಿತ ಸಂಸ್ಥೆಗಳು, ವಿಮಾ ಕಂಪನಿಗಳು, ಮ್ಯೂಚ್ಯುವಲ್ ಫಂಡ್‌ಗಳು, ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು, ಬಲಿಷ್ಠ ಮಾಡಲು ಹೊರಟಿವೆ. ಆಗ ತಜ್ಞರ ನೆರವು ಬೇಕಾಗುವುದರಿಂದ ಈ ರೀತಿಯ ಬದಲಾವಣೆಯಾಗಿದೆ. ಯಾವ್ಯಾವ ಉದ್ಯೋಗಗಳಿಗೆ ಬೇಡಿಕೆ?
ಎಲ್ಲ ಕಡೆ ಕಂಪ್ಯೂಟರೀಕೃತ ವ್ಯವಸ್ಥೆ, ಆನ್‌ಲೈನ್ ಸೇವೆಗಳು, ಅದಕ್ಕೆ ಪೂರಕವಾದ ಇತರೆ ವ್ಯವಸ್ಥೆಗಳಿಗೆ ಗರಿಷ್ಠ ಆದ್ಯತೆ ಶುರುವಾಗಿದೆ. ಆದ್ದರಿಂದ ಈಗ ಮಾಹಿತಿ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಬೇಡಿಕೆಯಿದೆ. ಅವು ಹೀಗಿವೆ… ಡಿಜಿಟಲ್ ಪರಿವರ್ತನೆ ತಜ್ಞರು (ಟ್ರಾನ್ಸ್‌ಫಾರ್ಮೇಶನ್ ಎಕ್ಸ್‌ಪರ್ಟ್ಸ್)
ಮಾಹಿತಿ ವಿಜ್ಞಾನಿಗಳು (ಡಾಟಾ ಸೈಂಟಿಸ್ಟ್ಸ್) ಮತ್ತು ಸಂಖ್ಯಾತಜ್ಞರು (ಸ್ಟಾಟಿಸ್ಟಿಶಿಯನ್ಸ್)
ಮಾಹಿತಿ ತಂತ್ರಜ್ಞಾನ ಭದ್ರತೆ (ಐಟಿ ಸೆಕ್ಯುರಿಟಿ) ಮತ್ತು ನೆಟ್‌ವರ್ಕ್ ವಿನ್ಯಾಸಕರು (ಆರ್ಕಿಟೆಕ್ಟ್ಸ್)
ಕ್ಲೌಡ್, ಉದ್ದಿಮೆ ಬುದಿಟಛಿಮತ್ತೆ (ಬ್ಯುಸಿನೆಸ್ ಇಂಟೆಲಿಜೆನ್ಸ್), ಕೃತಕ ಬುದಿಟಛಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)
ತಂತ್ರಾಂಶ ತಯಾರಕರು (ಸಾಫ್ಟ್ವೇರ್ ಡೆವಲಪರ್ಸ್) ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7 ಲಕ್ಷಕ್ಕೇರಿಕೆ?
ದೇಶದಲ್ಲಿರುವ 40 ಲಕ್ಷ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಪೈಕಿ 5 ಲಕ್ಷ ಮಂದಿ ಗುತ್ತಿಗೆ ಆಧಾರದ ಕೆಲಸ ಹೊಂದಿದ್ದಾರೆ (2018ರ ಮಾಹಿತಿ).
2021ರ ಹೊತ್ತಿಗೆ ಈ ಪ್ರಮಾಣ ಶೇ.13ರಷ್ಟು ಏರಿ, ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7.2 ಲಕ್ಷಕ್ಕೇರುವ ನಿರೀಕ್ಷೆಯಿದೆ ಎಂದು ಭಾರತ ಸಿಬ್ಬಂದಿ ಒಕ್ಕೂಟ (ಇಂಡಿಯನ್ ಸ್ಟಾಫಿಂಗ್ ಫೆಡರೇಶನ್) ತಿಳಿಸಿದೆ. 377 ಶೇ. ದೂರದಿಂದಲೇ ಕೆಲಸ ಮಾಡುವ ಅವಕಾಶಗಳಿಗಾಗಿ, ಫೆಬ್ರವರಿಯಿಂದ ಮೇವರೆಗೆ ಹುಡುಕಾಡಿದವರ ಪ್ರಮಾಣ.
168 ಶೇ. ಫೆಬ್ರವರಿಯಿಂದ ಮೇ ಅವಧಿಯಲ್ಲಿ,ಮನೆಯಿಂದಲೇ ಕೆಲಸ ಮಾಡುವ ವ್ಯಕ್ತಿಗಳನ್ನು ಕಂಪನಿಗಳು ಆಯ್ದುಕೊಂಡ ಪ್ರಮಾಣ.