Advertisement
ಎರಡರಿಂದ ಮೂರು ಕೆ.ಜಿ. ತೂಕುವ ಸುಮಾರು 100 ತಾಟೆ ಮೀನುಗಳನ್ನು ದಕ್ಕೆಯ ಹರಾಜು ಪ್ರಾಂಗಣದಲ್ಲಿ ಹರಡಿ ಇಡಲಾಗಿತ್ತು. ಕೆ.ಜಿ.ಗೆ 280 ರೂ.ಗಳಂತೆ ಹರಾಜಿನಲ್ಲಿ ಮಾರಾಟವಾಗಿದೆ. ಹೆಚ್ಚಾಗಿ ಕೇರಳಕ್ಕೆ ರವಾನೆಯಾಗುತ್ತದೆ.
ಈ ಮೀನಿನ ವೈಜ್ಞಾನಿಕ ಹೆಸರು ಬ್ಲ್ಯಾಕ್‌ಟಿಪ್ ರೀಫ್ ಶಾರ್ಕ್ ಎಂದು. ಇದು ಕೆಂಪು ಸಮುದ್ರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ನಮ್ಮ ಕರಾವಳಿಯಲ್ಲಿ ಬೃಹತ್ ಬಂಡೆಗಳ ಸಮೀಪ ಇರುತ್ತವೆ. ಈ ಮೀನಿನ ಕೆಳ ಭಾಗದಲ್ಲಿರುವ ರೆಕ್ಕೆ, ಬಾಲ, ಕಿವಿ ಮೊದಲಾದ ಅವಯವಗಳಿದ್ದು ಭಾರೀ ಬೇಡಿಕೆ ಇದೆ. ಅದನ್ನು ಸ್ಥಳದಲ್ಲೇ ಕತ್ತರಿಸಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟು ಸಾಗಿಸಲಾಗುತ್ತದೆ.
Related Articles
Advertisement
ಇದನ್ನೂ ಓದಿ : ಮಂಗಳೂರು ಸೇರಿ ಹತ್ತಕ್ಕೂ ಅಧಿಕ ರಾಜ್ಯಗಳಲ್ಲಿ ಪಿಎಫ್ ಐ, ಎಸ್ ಡಿಪಿಐ ಕಚೇರಿಗಳ ಮೇಲೆ NIA ದಾಳಿ